alex Certify 18 ವರ್ಷದೊಳಗಿನವರಿಗೆ ಈ ರೆಸ್ಟೋರೆಂಟ್‌ ಗಿಲ್ಲ ಎಂಟ್ರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

18 ವರ್ಷದೊಳಗಿನವರಿಗೆ ಈ ರೆಸ್ಟೋರೆಂಟ್‌ ಗಿಲ್ಲ ಎಂಟ್ರಿ…!

US Restaurant Denies Entry To Customers Below 18, Heres The Reason - NDTV Foodಕೋವಿಡ್ ಎರಡನೇ ಅಲೆಯ ಏಟಿನ ಬಳಿಕ ಅಮೆರಿಕದಲ್ಲಿರುವ ರೆಸ್ಟೋರೆಂಟ್‌ಗಳು ನಿಧಾನವಾಗಿ ತೆರೆದುಕೊಳ್ಳುತ್ತಿವೆ. ಕೆಲವೊಂದು ರೆಸ್ಟೋರೆಂಟ್‌ಗಳು ಗ್ರಾಹಕರಿಗೆ ಪ್ರವೇಶ ನೀಡಲು ಕೋವಿಡ್ ಲಸಿಕೆಯ ಕನಿಷ್ಠ ಒಂದು ಚುಚ್ಚುಮದ್ದು ಪಡೆದಿರಬೇಕೆಂಬ ನಿಯಮಗಳನ್ನು ತಂದಿವೆ.

ಆದರೆ ’ರೆಡ್ ರೂಸ್ಟರ್‌ ಬರ್ಗರ್ಸ್‌ & ಬ್ರ‍್ಯೂ’ ಹೆಸರಿನ ಈ ರೆಸ್ಟೋರೆಂಟ್‌ 18 ವರ್ಷ ವಯಸ್ಸಿನೊಳಗಿನ ಗಿರಾಕಿಗಳು ತಮ್ಮೊಂದಿಗೆ ಕನಿಷ್ಠ ಒಬ್ಬರಾದರೂ ಹೆತ್ತವರನ್ನು ಜೊತೆಯಲ್ಲಿ ಕರೆದು ತರಬೇಕೆಂಬ ನಿಯಮ ತಂದಿದೆ.

ಇಂಟರ್ನೆಟ್ ನಲ್ಲಿ ಧಮಾಲ್ ಮಾಡ್ತಿದೆ ಕೊಹ್ಲಿ ಈ ಫೋಟೋ

ರೆಸ್ಟೋರೆಂಟ್ ಅಂಗಳದಲ್ಲಿ ದುರುದ್ದೇಶಪೂರಿತ ಚಟುವಟಿಕೆಗಳಲ್ಲಿ ಟೀನೇಜರ್‌ಗಳು ಭಾಗಿಯಾಗುತ್ತಿರುವುದು ಹೆಚ್ಚಿದೆ. ಸಿಬ್ಬಂದಿಯೊಂದಿಗೆ ಜಗಳವಾಡುವುದು, ಸೋಡಾ ಬಾಟಲಿಗಳನ್ನು ಕದಿಯುವುದು, ಮೇಜುಗಳ ಮೇಲೆ ಕಾಲಿಡುವುದು, ಗೋಡೆಗಳ ಮೇಲೆ ಕೆಚಪ್ ಎರಚುವಂಥ ಚೇಷ್ಟೆಗಳನ್ನು ಈ ವಯೋಮಾನದ ಮಂದಿ ಮಾಡುತ್ತಿದ್ದಾರೆ.

ವ್ಯಾಕ್ಸಿಂಗ್ ಮಾಡಿದ ತಕ್ಷಣ ಅಪ್ಪಿತಪ್ಪಿ ಮಾಡಬೇಡಿ ಈ ಕೆಲಸ

ಇಂಥ ಕೆಟ್ಟ ವರ್ತನೆಗಳನ್ನು ಟೀನೇಜರ್‌ಗಳು ನಿಲ್ಲಿಸುವ ಭರವಸೆ ಇಲ್ಲದೇ ಇರುವ ಕಾರಣ ಆ ವಯೋಮಾನದ ಮಂದಿ ತಮ್ಮ ಹೆತ್ತವರೊಂದಿಗೆ ಬಂದರೆ ಮಾತ್ರವೇ ಒಳಗೆ ಸೇರಿಸುವುದಾಗಿ ರೆಡ್ ರೂಸ್ಟರ್‌ ಬರ್ಗರ್ಸ್‌ ಆ್ಯಂಡಗ ಬ್ರ‍್ಯೂ ಆಡಳಿತ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...