alex Certify ಇಂಟರ್ನೆಟ್ ನಲ್ಲಿ ಧಮಾಲ್ ಮಾಡ್ತಿದೆ ಕೊಹ್ಲಿ ಈ ಫೋಟೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂಟರ್ನೆಟ್ ನಲ್ಲಿ ಧಮಾಲ್ ಮಾಡ್ತಿದೆ ಕೊಹ್ಲಿ ಈ ಫೋಟೋ

ಐಪಿಎಲ್ 2021 ರ ದ್ವಿತೀಯಾರ್ಧ, ಯುಎಇಯಲ್ಲಿ ನಡೆಯುತ್ತಿದೆ. ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ, ಎರಡನೇ ಹಂತದ ಮೊದಲ ಎರಡು ಪಂದ್ಯಗಳಲ್ಲಿ ಸೋಲುಂಡಿತ್ತು. ಆದ್ರೆ ಮೂರನೇ ಪಂದ್ಯದಲ್ಲಿ ಮುಂಬೈ ತಂಡವನ್ನು ಸೋಲಿಸುವ ಮೂಲಕ ಗೆಲುವಿನ ನಗೆ ಬೀರಿದೆ. ಈ ಗೆಲುವಿನ ನಂತ್ರ ಕೊಹ್ಲಿ ಪಡೆ ಖುಷಿಯಲ್ಲಿದೆ.

ಆರ್‌ಸಿಬಿ, ನಿನ್ನೆ ಕೆಲ ಆಟಗಾರರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಆಟಗಾರರು ಈಜುಕೊಳದಲ್ಲಿ ಮೋಜು ಮಾಡ್ತಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗಿವೆ. ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್ ಮತ್ತು ಮೊಹಮ್ಮದ್ ಸಿರಾಜ್ ಈ ಫೋಟೋದಲ್ಲಿದ್ದಾರೆ.

‘ಐಪಿಎಲ್’ ಗೂ ಗುಡ್ ಬೈ ಹೇಳಲಿದ್ದಾರಾ ಧೋನಿ…?

ಶರ್ಟ್ ಲೆಸ್ ಫೋಟೋದಲ್ಲಿ ಆಟಗಾರರು ಹಾಟ್ ಆಗಿ ಕಾಣ್ತಿದ್ದಾರೆ. ಸಾಮಾಜಿಕ ಜಾಲತಾಣ ಬಳಕೆದಾರರು ಸಾಕಷ್ಟು ಕಮೆಂಟ್ ಮಾಡಿದ್ದಾರೆ. ಎಲ್ಲ ಹಾಟ್ ಆಟಗಾರರು ಆರ್ ಸಿ ಬಿ ತಂಡದಲ್ಲಿದ್ದಾರೆಂದು ಕಮೆಂಟ್ ಮಾಡಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಫಿಟ್ನೆಸ್ ಗೆ ಹೆಸರುವಾಸಿಯಾಗಿದ್ದಾರೆ. ಈ ಫೋಟೋದಲ್ಲಿ ಕೂಡ ಅವ್ರ ಫಿಟ್ನೆಸ್ ಸ್ಪಷ್ಟವಾಗಿ ಗೋಚರಿಸುತ್ತದೆ.

ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ ಈವರೆಗೆ ಒಂದು ಐಪಿಎಲ್ ಪಂದ್ಯ ಗೆದ್ದಿದೆ. ಮೂರು ಬಾರಿ ಐಪಿಎಲ್ ಫೈನಲ್ ಪ್ರವೇಶಿಸಿದ್ದ ತಂಡ ಟ್ರೋಫಿ ಹಿಡಿದಿಲ್ಲ. ಈಗಾಗಲೇ ವಿರಾಟ್ ಕೊಹ್ಲಿ, ನಾಯಕತ್ವದಿಂದ ಕೆಳಗಿಳಿಯುವ ಘೋಷಣೆ ಮಾಡಿದ್ದು, ಮುಂದಿನ ಸರಣಿಯಲ್ಲಿ ತಂಡದ ನಾಯಕತ್ವ ಯಾರ ಹೆಗಲೇರಲಿದೆ ಎಂಬುದನ್ನು ನೋಡಬೇಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...