ಕೋವಿಡ್ ಎರಡನೇ ಅಲೆಯ ಏಟಿನ ಬಳಿಕ ಅಮೆರಿಕದಲ್ಲಿರುವ ರೆಸ್ಟೋರೆಂಟ್‌ಗಳು ನಿಧಾನವಾಗಿ ತೆರೆದುಕೊಳ್ಳುತ್ತಿವೆ. ಕೆಲವೊಂದು ರೆಸ್ಟೋರೆಂಟ್‌ಗಳು ಗ್ರಾಹಕರಿಗೆ ಪ್ರವೇಶ ನೀಡಲು ಕೋವಿಡ್ ಲಸಿಕೆಯ ಕನಿಷ್ಠ ಒಂದು ಚುಚ್ಚುಮದ್ದು ಪಡೆದಿರಬೇಕೆಂಬ ನಿಯಮಗಳನ್ನು ತಂದಿವೆ.
ಆದರೆ ’ರೆಡ್ ರೂಸ್ಟರ್ ಬರ್ಗರ್ಸ್ & ಬ್ರ‍್ಯೂ’ ಹೆಸರಿನ ಈ ರೆಸ್ಟೋರೆಂಟ್ 18 ವರ್ಷ ವಯಸ್ಸಿನೊಳಗಿನ ಗಿರಾಕಿಗಳು ತಮ್ಮೊಂದಿಗೆ ಕನಿಷ್ಠ ಒಬ್ಬರಾದರೂ ಹೆತ್ತವರನ್ನು ಜೊತೆಯಲ್ಲಿ ಕರೆದು ತರಬೇಕೆಂಬ ನಿಯಮ ತಂದಿದೆ.
ಇಂಟರ್ನೆಟ್ ನಲ್ಲಿ ಧಮಾಲ್ ಮಾಡ್ತಿದೆ ಕೊಹ್ಲಿ ಈ ಫೋಟೋ
ರೆಸ್ಟೋರೆಂಟ್ ಅಂಗಳದಲ್ಲಿ ದುರುದ್ದೇಶಪೂರಿತ ಚಟುವಟಿಕೆಗಳಲ್ಲಿ ಟೀನೇಜರ್‌ಗಳು ಭಾಗಿಯಾಗುತ್ತಿರುವುದು ಹೆಚ್ಚಿದೆ. ಸಿಬ್ಬಂದಿಯೊಂದಿಗೆ ಜಗಳವಾಡುವುದು, ಸೋಡಾ ಬಾಟಲಿಗಳನ್ನು ಕದಿಯುವುದು, ಮೇಜುಗಳ ಮೇಲೆ ಕಾಲಿಡುವುದು, ಗೋಡೆಗಳ ಮೇಲೆ ಕೆಚಪ್ ಎರಚುವಂಥ ಚೇಷ್ಟೆಗಳನ್ನು ಈ ವಯೋಮಾನದ ಮಂದಿ ಮಾಡುತ್ತಿದ್ದಾರೆ.
ವ್ಯಾಕ್ಸಿಂಗ್ ಮಾಡಿದ ತಕ್ಷಣ ಅಪ್ಪಿತಪ್ಪಿ ಮಾಡಬೇಡಿ ಈ ಕೆಲಸ
ಇಂಥ ಕೆಟ್ಟ ವರ್ತನೆಗಳನ್ನು ಟೀನೇಜರ್‌ಗಳು ನಿಲ್ಲಿಸುವ ಭರವಸೆ ಇಲ್ಲದೇ ಇರುವ ಕಾರಣ ಆ ವಯೋಮಾನದ ಮಂದಿ ತಮ್ಮ ಹೆತ್ತವರೊಂದಿಗೆ ಬಂದರೆ ಮಾತ್ರವೇ ಒಳಗೆ ಸೇರಿಸುವುದಾಗಿ ರೆಡ್ ರೂಸ್ಟರ್ ಬರ್ಗರ್ಸ್ ಆ್ಯಂಡಗ ಬ್ರ‍್ಯೂ ಆಡಳಿತ ತಿಳಿಸಿದೆ.