alex Certify ಅಮೆರಿಕ ರಕ್ಷಣಾ ಕಾರ್ಯದರ್ಶಿಯಾಗಿ ಆಸ್ಟಿನ್, ಈ ಹುದ್ದೆಗೆ ಆಯ್ಕೆಯಾದ ಮೊದಲ ಕಪ್ಪು ವರ್ಣೀಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕ ರಕ್ಷಣಾ ಕಾರ್ಯದರ್ಶಿಯಾಗಿ ಆಸ್ಟಿನ್, ಈ ಹುದ್ದೆಗೆ ಆಯ್ಕೆಯಾದ ಮೊದಲ ಕಪ್ಪು ವರ್ಣೀಯ

ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬಿಡೆನ್​ ತಮ್ಮ ರಕ್ಷಣಾ ಕಾರ್ಯದರ್ಶಿಯಾಗಿ ನಿವೃತ್ತ ಜನರಲ್​ ಲಾಯ್ಡ್​ ಆಸ್ಟಿನ್​ರನ್ನ ಆ್ಯಕೆ ಮಾಡಿದ್ದಾರೆ.

ಲಾಯ್ಡ್ ಆಸ್ಟಿನ್​ ಬರಾಕ್​ ಒಬಾಮಾ ಅಮೆರಿಕ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಮಧ್ಯಪ್ರಾಚ್ಯದಲ್ಲಿ ಅಮೆರಿಕ ಪಡೆಗಳ ನೇತೃತ್ವ ವಹಿಸಿದ್ದರು. ಈ ಮೂಲಕ ಅಮೆರಿಕದ ರಕ್ಷಣಾ ಕಾರ್ಯದರ್ಶಿಯಾಗಿ ಆಯ್ಕೆಯಾದ ಮೊದಲ ಕಪ್ಪು ವರ್ಣೀಯ ಎಂಬ ಹೆಗ್ಗಳಿಕೆಗೂ ಆಸ್ಟಿನ್​ ಪಾತ್ರರಾಗಿದ್ದಾರೆ.

ರಕ್ಷಣಾ ಇಲಾಖೆ ಮಾಜಿ ಅಧಿಕಾರಿಯಾಗಿದ್ದ ಮಿಚೆಲ್​ ಪ್ಲೂರ್ನಾಯ್​ ವಿರುದ್ಧ ಕಪ್ಪು ವರ್ಣೀಯ ಆಸ್ಟಿನ್​ ಆಶ್ಚರ್ಯಕರ ಗೆಲುವು ದಾಖಲಿಸಿದ್ದಾರೆ. ಪ್ಲೂನಾರ್ಯ್​ ಕೂಡ ಅಮೆರಿಕದ ಮೊದಲ ಮಹಿಳಾ ರಕ್ಷಣಾ ಕಾರ್ಯದರ್ಶಿ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.
ವೆಸ್ಟ್​ ಪಾಯಿಂಟ್​ ಮಿಲಿಟರಿ ಅಕಾಡೆಮಿಯಲ್ಲಿ ಪದವಿ ಪಡೆದಿದ್ದ ಆಸ್ಟಿನ್​ ನಾಲ್ಕು ದಶಕಗಳ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. 2010ರಲ್ಲಿ ಆಸ್ಟಿನ್​ರನ್ನ ಇರಾಕ್​ ಅಮೆರಿಕ ಪಡೆಗಳ ಕಮಾಂಡಿಂಗ್​ ಜನರಲ್​ ಆಗಿ ನೇಮಿಸಲಾಗಿತ್ತು. ಹಾಗೂ ಎರಡು ವರ್ಷಗಳ ಬಳಿಕ ಮಧ್ಯಪ್ರಾಚ್ಯ ಹಾಗೂ ಅಪ್ಘಾನಿಸ್ತಾನದ ಎಲ್ಲಾ ಪೆಂಟಗನ್​ ಕಾರ್ಯಾಚರಣೆಗಳ ಉಸ್ತುವಾರಿ ವಹಿಸಿಕೊಂಡು ಸೆಂಟ್ರಲ್​ ಕಮಾಂಡ್​ನ ಕಮಾಂಡರ್​ ಆದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...