alex Certify ಸಾವಿನಲ್ಲೂ ಒಂದಾದ ಶತಾಯುಷಿ ದಂಪತಿ: ಪ್ರೇಮ ವಿವಾಹವಾದವರ ಕುತೂಹಲದ ಕಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾವಿನಲ್ಲೂ ಒಂದಾದ ಶತಾಯುಷಿ ದಂಪತಿ: ಪ್ರೇಮ ವಿವಾಹವಾದವರ ಕುತೂಹಲದ ಕಥೆ

ಹಬರ್ಟ್ ಮತ್ತು ಜುಯೆನ್ ಮಾಲಿಕೋಟ್ ಎಂಬ ದಂಪತಿ ಸಾವಿನಲ್ಲಿಯೂ ಒಂದಾಗಿದ್ದಾರೆ. 100 ವರ್ಷಗಳನ್ನು ಪೂರೈಸಿರುವ ಈ ದಂಪತಿ, ಪರಸ್ಪರ ಕೆಲವೇ ಗಂಟೆಗಳ ಅಂತರದಲ್ಲಿ ನಿಧನರಾದರು.

ಶತಮಾನ ಪೂರೈಸಿದ ನಂತರ ದಂಪತಿ ಕುಟುಂಬಕ್ಕಾಗಿ ಥ್ಯಾಂಕ್ಸ್ ‌ಗಿವಿಂಗ್ ಪಿಜ್ಜಾ ಪಾರ್ಟಿ ಆಯೋಜಿಸಿದ್ದರು. ಪಾರ್ಟಿ ಮಾಡಿದ ಕೆಲವೇ ಗಂಟೆಗಳ ನಂತರ, ಜುಯೆನ್ ತೀವ್ರ ಅನಾರೋಗ್ಯಕ್ಕೆ ಒಳಗಾದರು. ಅವರನ್ನು ಅಸ್ಪತ್ರೆಗೆ ಸಾಗಿಸಲಾಯಿತು.

ಇಷ್ಟರಲ್ಲಿಯೇ ಪತಿ ಜುಯೆನ್‌ ತೀರಿಕೊಂಡರು. ಅತ್ತ ಆಸ್ಪತ್ರೆಗೆ ದಾಖಲಾಗಿದ್ದ ಜುಯೆನ್‌ ಕೂಡ ಅಸು ನೀಗಿದರು. ತಮ್ಮ ಪಾಲಕರ ನಿಧನ ಕುರಿತು ಅವರ 76 ವರ್ಷದ ಮಗ ಮಾಹಿತಿ ನೀಡಿದ್ದಾರೆ.

ಇಬ್ಬರನ್ನೂ ಒಟ್ಟಿಗೇ ಕಳೆದುಕೊಂಡಿರುವುದಕ್ಕೆ ನೋವಿದೆ. ಆದರೆ ಹೆತ್ತವರು ಒಟ್ಟಿಗೆ ಸುದೀರ್ಘ ಸಂತೋಷದ ಜೀವನವನ್ನು ನಡೆಸಿರುವ ಖುಷಿಯಿದೆ ಎಂದು ಮಗ ಹೇಳಿದ್ದಾರೆ.

1922 ರಲ್ಲಿ ಜನಿಸಿದ ಹಬರ್ಟ್ ಜೂನ್ 1948 ರಲ್ಲಿ ವಿವಾಹವಾದರು. ತೋರಿಕೆಯಲ್ಲಿ, ಇಬ್ಬರೂ ಕೆಂಟುಕಿಯಲ್ಲಿ ವಾಸಿಸುತ್ತಿದ್ದಾಗ 1941 ರಲ್ಲಿ ಚರ್ಚ್‌ನಲ್ಲಿ ಪರಸ್ಪರ ಭೇಟಿಯಾಗಿದ್ದರು. 13 ದಿನಗಳ ಭೇಟಿಯಲ್ಲಿ ಪ್ರೇಮವಾಗಿ ಮದುವೆಯನ್ನೂ ಆಗಿದ್ದರು. ಹಬರ್ಟ್ ನೌಕಾಪಡೆಯಲ್ಲಿ ಕೆಲಸ ನಿರ್ವಹಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...