alex Certify ವಿಮಾನ ಕಟ್ಟಡಕ್ಕೆ ಅಪ್ಪಳಿಸಿ ನಾಲ್ವರ ದುರಂತ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಮಾನ ಕಟ್ಟಡಕ್ಕೆ ಅಪ್ಪಳಿಸಿ ನಾಲ್ವರ ದುರಂತ ಸಾವು

ಕನೆಕ್ಟಿಕಟ್​​ನ ಏರ್​ಪೋರ್ಟ್​ನಿಂದ ಟೇಕಾಫ್​​ ಆಗಿದ್ದ ಕೆಲವೇ ಹೊತ್ತಿನಲ್ಲಿ ಸಣ್ಣ ಜೆಟ್​​ ದುರಂತಕ್ಕೀಡಾಗಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ರಾಬರ್ಟ್​ಸನ್​​​ ವಿಮಾನ ನಿಲ್ದಾಣದಿಂದ ಬೆಳಗ್ಗೆ 10 ಗಂಟೆಗೂ ಮುನ್ನವೇ ಸಣ್ಣ ಜೆಟ್​ ಟೇಕಾಫ್​ ಆಗಿತ್ತು. ಮಷಿನ್​ ಇಂಡಸ್ಟ್ರಿ ಕಂಪನಿಯಾ ಟ್ರಂಫ್​ ಕಟ್ಟಡಕ್ಕೆ ಬಡಿದು ದುರಂತಕ್ಕೀಡಾಗಿದೆ. ಟೇಕಾಫ್​ ವೇಳೆಯಲ್ಲಿ ಸಣ್ಣ ಜೆಟ್​ ಕೆಲ ತಾಂತ್ರಿಕ ದೋಷವನ್ನು ಎದುರಿಸುತ್ತಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸೆಸ್ಬಾ ಸಿಟೇಷನ್​ 560 ಎಕ್ಸ್​​ ಉತ್ತರ ಕೆರೋಲಿನಾದ ಮಾಂಟಿಯೋದಲ್ಲಿರುವ ಡೇರ್​ ಕೌಂಟಿ ಪ್ರಾದೇಶಿಕ ವಿಮಾನ ನಿಲ್ದಾಣಕ್ಕೆ ಹೊರಟಿತ್ತು ಎಂದು ಫೆಡರಲ್​ ವಿಮಾನಯಾನ ಆಡಳಿತ ಮಂಡಳಿ ಮಾಹಿತಿ ನೀಡಿದೆ. ದುರಂತದಲ್ಲಿ ವಿಮಾನದಲ್ಲಿದ್ದ ಇಬ್ಬರು ಪೈಲಟ್​ಗಳು ಹಾಗೂ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ಮೆಕೆಂಜಿ ಮಾಹಿತಿ ನೀಡಿದ್ದಾರೆ. ಮೃತರ ಹೆಸರು ಬಿಡುಗಡೆ ಮಾಡಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...