ಹಿರಿಯ ಅಧಿಕಾರಿಯನ್ನು ಕೊಲೆ ಮಾಡಲು ಇಬ್ಬರು ಕಿರಿಯ ಇಂಜಿನಿಯರ್ಗಳು 20 ಲಕ್ಷ ರೂಪಾಯಿ ಸುಪಾರಿ ನೀಡಿದ ಆಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದೆ.
ಉದ್ಯೋಗದಲ್ಲಿ ಬಡ್ತಿ ನೀಡಿಲ್ಲ ಎಂಬ ಕಾರಣಕ್ಕೆ ಇವರಿಬ್ಬರು ಹಿರಿಯ ಅಧಿಕಾರಿಯನ್ನು ಕೊಲೆ ಮಾಡಲು ಪ್ಲಾನ್ ಮಾಡಿದ್ದರು ಎನ್ನಲಾಗಿದೆ.
ಪ್ಲಾನ್ ಪ್ರಕಾರ ಮಿರಾ- ಭಯಂದರ್ನಿಂದ ಬೊರಿವಿಯಲ್ಲಿರುವ ನಿವಾಸಕ್ಕೆ ಹಿರಿಯ ಅಧಿಕಾರಿ ವಾಪಸ್ಸಾಗುತ್ತಿದ್ದ ವೇಳೆ ಬೈಕ್ನಲ್ಲಿ ಬಂದ ಹಂತಕರು ಫೈರಿಂಗ್ ನಡೆಸಿದ್ದರು. ಆದರೆ ಮಿಸ್ ಫೈರಿಂಗ್ ಆದ ಕಾರಣ ಹಿರಿಯ ಅಧಿಕಾರಿ ಬಚಾವಾಗಿದ್ದಾರೆ.
ರೇಪ್ ವಿಡಿಯೋ ತೋರಿಸಿ ವಿದ್ಯಾರ್ಥಿನಿ ಮೇಲೆ ಯೋಗ ಶಿಕ್ಷಕನಿಂದ ಪದೇ ಪದೇ ಅತ್ಯಾಚಾರ
ಆದರೂ ಹಿರಿಯ ಅಧಿಕಾರಿಗೆ ಕುತ್ತಿಗೆ ಹಾಗೂ ಮುಖದ ಭಾಗಕ್ಕೆ ಗಾಯಗಳಾಗಿದೆ. ಮಿರಾ- ಭಯಂದರ್ ಮುನ್ಸಿಪಲ್ ಕಾರ್ಪೋರೇಷನ್ನಲ್ಲಿ ಇಂಜಿನಿಯರ್ಗಳಾಗಿದ್ದ ಶ್ರೀಕೃಷ್ಣ ಮೊಹಿತೆ ಹಾಗೂ ಯಶವಂತ್ ರಾವ್ ದೇಶ್ಮುಖ್ ಈ ಕೊಲೆಗೆ ಸುಪಾರಿ ನೀಡಿದವರು ಎನ್ನಲಾಗಿದೆ.
ಹಿರಿಯ ಅಧಿಕಾರಿಯು ನೆಗೆಟಿವ್ ರಿಪೋರ್ಟ್ ನೀಡಿದ್ದ ಹಿನ್ನೆಲೆಯಲ್ಲಿ ಆರೋಪಿಗಳಿಬ್ಬರ ಬಡ್ತಿಯು ರದ್ದಾಗಿತ್ತು. ಇದರಿಂದ ಕೋಪಗೊಂಡಿದ್ದ ಶ್ರೀಕೃಷ್ಣ ಹಾಗೂ ಯಶವಂತ್ ರಾಜು ವಿಶ್ವಕರ್ಮ ಎಂಬವನಿಗೆ ಸುಪಾರಿ ನೀಡಿದ್ದರು ಎನ್ನಲಾಗಿದೆ.
ಕೇವಲ1 ಗಂಟೆಯಲ್ಲೇ 25 ಸಾವಿರ ಮಹೀಂದ್ರಾ XUV700 ಬುಕ್ಕಿಂಗ್…..!
ಆರು ತಿಂಗಳಿನಿಂದ ಈ ಕೊಲೆಗೆ ಪ್ಲಾನ್ ನಡೆಯುತ್ತಲೇ ಇತ್ತು. ಕಳೆದ ತಿಂಗಳು ಶ್ರೀಕೃಷ್ಣ ಹಣವನ್ನೂ ನೀಡಿದ್ದ. ಇದಾದ ಬಳಿಕ ವಿಶ್ವಕರ್ಮ ಶೂಟರ್ ಅಜಯ್ ಸಿಂಗ್ನನ್ನು ಸಂಪರ್ಕಿಸಿದ್ದ. ಸೆಪ್ಟೆಂಬರ್ 29ರಂದು ಅಧಿಕಾರಿಯ ಮೇಲೆ ಫೈರಿಂಗ್ ನಡೆದಿತ್ತು. ಇದಾದ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ವಿವಿಧೆಡೆ ಸಿಸಿ ಟಿವಿ ಕ್ಯಾಮರಾ ಪರಿಶೀಲನೆ ಮಾಡಿದ್ದರು. ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ಆರೋಪಿ ಸಿಂಗ್ನ್ನು ಘಾಜಿಪುರದಲ್ಲಿ ಬಂಧಿಸಲಾಗಿದೆ. ಇದಾದ ಬಳಿಕ ಸಿಂಗ್ ಸಂಪೂರ್ಣ ಮಾಹಿತಿಯನ್ನು ಬಾಯ್ಬಿಟ್ಟಿದ್ದಾನೆ.