alex Certify ಕೇವಲ1 ಗಂಟೆಯಲ್ಲೇ 25 ಸಾವಿರ ಮಹೀಂದ್ರಾ XUV700 ಬುಕ್ಕಿಂಗ್​…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ1 ಗಂಟೆಯಲ್ಲೇ 25 ಸಾವಿರ ಮಹೀಂದ್ರಾ XUV700 ಬುಕ್ಕಿಂಗ್​…..!

ಮಹೀಂದ್ರಾ ಎಕ್ಸ್​ಯುವಿ 700 ಎಸ್​ಯುವಿ ಕೇವಲ 1 ಗಂಟೆ ಅವಧಿಯಲ್ಲಿ 25 ಸಾವಿರ ಬುಕ್ಕಿಂಗ್​​ ಕಂಡಿದೆ ಎಂದು ಕಂಪನಿಯು ಮಾಹಿತಿ ನೀಡಿದೆ. ಇದು ಭಾರತೀಯ ಆಟೋಮೊಬೈಲ್​ ಕ್ಷೇತ್ರದಲ್ಲಿ ಬಹುದೊಡ್ಡ ಯಶಸ್ಸು ಎಂದು ಕಂಪನಿ ಹೇಳಿದೆ.

ಮಹೀಂದ್ರಾ ಎಕ್ಸ್​ಯುವಿ 700 ಇಂಟ್ರಡ್ಯೂಸರಿ ಬೆಲೆಯೊಂದಿಗೆ ಬಿಡುಗಡೆ ಮಾಡಲಾಗಿತ್ತು. ಮೊದಲ 25 ಸಾವಿರ ಬುಕ್ಕಿಂಗಳಿಗೆ ಮಾತ್ರ ಈ ಆರಂಭಿಕ ಬೆಲೆ ಇರಲಿದೆ ಎಂದು ಕಂಪನಿ ಈ ಹಿಂದೆಯೇ ಹೇಳಿದೆ. ಹೊಸ ಎಕ್ಸ್​ಯುವಿ700 ಬೆಲೆಯನ್ನು 12.49 ಲಕ್ಷ ರೂಪಾಯಿಗೆ ಪರಿಷ್ಕರಿಸಲಾಗಿದೆ. ಮೂಲ ರೂಪಾಂತರಕ್ಕಿಂತ ಕಂಪನಿಯು 50 ಸಾವಿರ ರೂಪಾಯಿ ಏರಿಕೆ ಮಾಡಿದೆ.

2700 ವರ್ಷಗಳ ಹಿಂದೆ ಬಳಕೆಯಲ್ಲಿದ್ದ ಟಾಯ್ಲೆಟ್‌ ಪತ್ತೆ…!

ಎಕ್ಸ್​ಯುವಿ ಬುಕ್ಕಿಂಗ್​​ ನಾಳೆ ಬೆಳಗ್ಗೆ 10 ಗಂಟೆಯಿಂದ ಪುನಾರಂಭಗೊಳ್ಳಲಿದೆ. ಗ್ರಾಹಕರು ತಮ್ಮಿಷ್ಟದ ಎಕ್ಸ್​ಯುವಿಯನ್ನು ಡೀಲರ್​ಶಿಪ್​ ಇಲ್ಲವೇ ಡಿಜಿಟಲ್​ ವೇದಿಕೆಯ ಮೂಲಕ ಬುಕ್​​ ಮಾಡಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...