alex Certify ವಾಹನ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್: 650 cc ಬೈಕ್‌ ಪರಿಚಯಿಸಲು ರಾಯಲ್ ಎನ್‌ಫೀಲ್ಡ್ ಸಿದ್ಧತೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಹನ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್: 650 cc ಬೈಕ್‌ ಪರಿಚಯಿಸಲು ರಾಯಲ್ ಎನ್‌ಫೀಲ್ಡ್ ಸಿದ್ಧತೆ..!

ರಾಯಲ್ ಎನ್‌ಫೀಲ್ಡ್ ತನ್ನ ಪೋರ್ಟ್‌ಫೋಲಿಯೊವನ್ನ‌ ಮತ್ತಷ್ಟು ಹಿಗ್ಗಿಸುತ್ತಿದೆ ಎಂಬುದು ಹೊಸ ವಿಷಯವೇನಲ್ಲ. ಈ ಹಂತದಲ್ಲಿ ರಾಯಲ್ ಎನ್‌ಫೀಲ್ಡ್ ತನ್ನ ಹೊಸ 650 ಸಿಸಿ ಬೈಕ್‌ಗಳ ಮೇಲೆ ಗಮನ ಹರಿಸುತ್ತಿದೆ ಎಂಬುದು ಪ್ರತಿಯೊಬ್ಬರಿಗೂ ತಿಳಿದ ವಿಷಯ.

ಕಂಪನಿಯು ಈ 650cc ಬೈಕುಗಳಿಗೆ ಸಹಜವಾಗಿ ದೊಡ್ಡ ಲಾಂಚ್ ಪ್ಲಾನ್ ಮಾಡಿಕೊಂಡಿದೆ. ಏಕೆಂದರೆ ಸ್ವದೇಶಿ ವಾಹನ ತಯಾರಕರಾದ ರಾಯಲ್ ಎನ್‌ಫೀಲ್ಡ್,‌ ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ದೊಡ್ಡ ಪಾಲನ್ನು ಹೊಂದುವ ಗುರಿಯನ್ನು ಹೊಂದಿದೆ.

ಹೀಗಾಗಿ ಮುಂದಿನ ಕೆಲವು ವರ್ಷಗಳಲ್ಲಿ ಕಂಪನಿಯ ಒಟ್ಟಾರೆ ದೊಡ್ಡ ಮಟ್ಟದ ಬೈಕ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸಲಿದೆ. ಇಲ್ಲಿ ನಾವು ಈ 650cc ಬೈಕ್‌ಗಳ ಬಗ್ಗೆ ಇನ್ನು ಹೆಚ್ಚು ತಿಳಿದುಕೊಳ್ಳೋಣ.

ರಾಯಲ್ ಎನ್‌ಫೀಲ್ಡ್ ಮುಂದಿನ ದಿನಗಳಲ್ಲಿ ಕನಿಷ್ಠ ಮೂರು 650 ಸಿಸಿ ಮೋಟಾರ್‌ಸೈಕಲ್‌ಗಳನ್ನು ಭಾರತಕ್ಕೆ ಪರಿಚಯಿಸಲು ಉದ್ದೇಶಿಸಿದ್ದಾರೆ. ಅವು ಕ್ರೂಸರ್ ಬೈಕ್, ಬಾಬರ್ ಬೈಕ್ ಮತ್ತು ರೋಡ್‌ಸ್ಟರ್ ಬೈಕ್ ಅನ್ನು ಒಳಗೊಂಡಿರುತ್ತದೆ ಎಂಬುದು ಖಚಿತವಾಗಿದೆ.

BIG NEWS: ಹಿಜಾಬ್ ವಿವಾದ; ವಿದ್ಯಾರ್ಥಿನಿಯರ ಪ್ರತಿಭಟನೆಗೆ ಯುವಕರ ಸಾಥ್; ನಾಲ್ವರು ಪೊಲೀಸರ ವಶಕ್ಕೆ

ವರದಿಗಳ ಪ್ರಕಾರ, ಮುಂಬರುವ RE 650 cc ಕ್ರೂಸರ್ ಬೈಕ್ ಅನ್ನು ಸೂಪರ್ ಮೀಟಿಯರ್ 650 ಎಂದು ಕರೆಯಲಾಗುತ್ತದೆ. ಇದು ಸ್ವಲ್ಪ ಎತ್ತರದ ಹ್ಯಾಂಡಲ್‌ಬಾರ್‌ಗಳು, ಫಾರ್ವರ್ಡ್-ಸೆಟ್ ಫುಟ್‌ಪೆಗ್‌ಗಳು ಸೇರಿದಂತೆ ಕ್ಲಾಸಿಕ್ ಆಫ್ ರೋಡಿಂಗ್ ಬೈಕ್ ನ ವಿಶೇಷತೆಗಳನ್ನ ಹೊಂದಿರಲಿದೆ.

ತನ್ನ ರೆಟ್ರೋ ಡಿಸೈನ್ ಗಳಿಗೆ ಫೇಮಸ್ ಆಗಿರುವ ರಾಯಲ್ ಎನ್‌ಫೀಲ್ಡ್ ಮುಂಬರುವ 650cc ರೋಡ್‌ಸ್ಟರ್ ಬೈಕಿಗೂ ಇದೇ ಟಚ್ ನೀಡಲಿದೆ. ಟಿಯರ್ ಡ್ರಾಪ್ ಆಕಾರದ ಇಂಧನ ಟ್ಯಾಂಕ್, ಒಂದು ಸುತ್ತಿನ ಹೆಡ್‌ಲ್ಯಾಂಪ್, ಒಂದು ಜೋಡಿ ರೌಂಡ್ ರಿಯರ್-ವ್ಯೂ ಮಿರರ್‌ಗಳು ಇತ್ಯಾದಿಗಳಂತಹ ವಿನ್ಯಾಸಗಳೊಂದಿಗೆ ಹೊಸ ಯುಗದ ರೋಡ್‌ಸ್ಟರ್ ರೆಟ್ರೋ ಲುಕ್ ಪಡೆಯಲಿದೆ.

ಮುಂಬರುವ RE 650cc ಬಾಬರ್ ಬೈಕ್, 2021ರಲ್ಲಿ ರಾಯಲ್ ಎನ್‌ಫೀಲ್ಡ್ SG650 ಪರಿಕಲ್ಪನೆಯಾಗಿ ಪ್ರಾರಂಭವಾಯಿತು. ಈ ಬೈಕನ್ನು ಟೆಸ್ಟ್ ಮಾಡುವಾಗ ಗುರುತಿಸಲಾಗಿದೆಯಾದರೂ ಇದುವರೆಗೂ ಎಲ್ಲೂ ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೆಳಕಿಗೆ ಬಂದಿಲ್ಲ.

ಒಟ್ಟಿನಲ್ಲಿ ಭಾರತದಲ್ಲಿ ಮುಂಬರುವ ಈ ಮೂರು ಬೈಕ್‌ಗಳು ಅದೇ 648cc ಪ್ಯಾರಲಲ್-ಟ್ವಿನ್ ಎಂಜಿನ್‌ನಿಂದ ಚಾಲಿತವಾಗುತ್ತವೆ ಎಂಬುದು ತಿಳಿದು ಬಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...