alex Certify Shocking News: ಎಸಿ ಆನ್​ ಮಾಡಿ ಮಲಗಿದ ವೈದ್ಯೆ; ಚಳಿ ತಾಳಲಾರದೇ ಮೃತಪಟ್ಟ ನವಜಾತ ಶಿಶುಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Shocking News: ಎಸಿ ಆನ್​ ಮಾಡಿ ಮಲಗಿದ ವೈದ್ಯೆ; ಚಳಿ ತಾಳಲಾರದೇ ಮೃತಪಟ್ಟ ನವಜಾತ ಶಿಶುಗಳು

ಸಿಕ್ಕಾಪಟ್ಟೆ ಕೋಲ್ಡ್​ ಇರುವ ರೂಮಿನಲ್ಲಿ ಎರಡು ನವಜಾತ ಶಿಶುಗಳನ್ನು ಇರಿಸಿದ ಪರಿಣಾಮ ಎರಡೂ ಮಕ್ಕಳು ಸಾವನ್ನಪ್ಪಿದ ಘಟನೆಯು ಉತ್ತರ ಪ್ರದೇಶದ ಶಾಮ್ಲಿಯ ಖಾಸಗಿ ಕ್ಲಿನಿಕ್​ನಲ್ಲಿ ಸಂಭವಿಸಿದೆ.

ಈ ಸಂಬಂಧ ಆಸ್ಪತ್ರೆ ಸಿಬ್ಬಂದಿ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕ್ಲಿನಿಕ್ ಮಾಲೀಕರು ಕೂಡ ಆಗಿರುವ ಡಾ. ನೀತು ಎಂಬವರು ಚೆನ್ನಾಗಿ ನಿದ್ದೆ ಮಾಡಬೇಕು ಎಂಬ ಕಾರಣಕ್ಕೆ ಶನಿವಾರದಂದು ಎಸಿಯನ್ನು ಆನ್​ ಮಾಡಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಭಾನುವಾರ ಶಿಶುಗಳು ಶವದ ರೂಪದಲ್ಲಿ ಪತ್ತೆಯಾಗಿವೆ ಎಂದು ತಿಳಿದು ಬಂದಿದೆ. ಮಕ್ಕಳ ಕುಟುಂಬಸ್ಥರು ನೀಡಿರುವ ದೂರಿನ ಆಧಾರದ ಮೇಲೆ ವೈದ್ಯೆ ನೀತು ವಿರುದ್ಧ ಸೆಕ್ಷನ್​ 304 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್​ಹೆಚ್​ಓ ನೇತ್ರಪಾಲ ಸಿಂಗ್​​ ಹೇಳಿದ್ದಾರೆ.

ಆರೋಪಿ ನೀತುರನ್ನು ಬಂಧಿಸಲಾಗಿದೆ ಎಂದು ಎಸ್​ಹೆಚ್​ಓ ತಿಳಿಸಿದ್ದಾರೆ. ಈ ನಡುವೆ ಘಟನೆ ಬಗ್ಗೆ ಆರೋಗ್ಯ ಇಲಾಖೆ ತನಿಖೆಗೆ ಆದೇಶಿಸಿದೆ. ಈ ಪ್ರಕರಣ ಸಂಬಂಧ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತೆ ಅಂತಾ ಹೆಚ್ಚುವರಿ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಅಶ್ವನಿ ಶರ್ಮಾ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...