alex Certify ಡಿಫರೆಂಟ್​ ಆಗಿ ಮದುವೆಯಾಗಲು ಕುಬ್ಜ ಜೋಡಿ ನಿರ್ಧಾರ: ಪಿಎಂ, ಸಿಎಂಗೆ ಆಹ್ವಾನಿಸಲು ಹೊರಟ ವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಫರೆಂಟ್​ ಆಗಿ ಮದುವೆಯಾಗಲು ಕುಬ್ಜ ಜೋಡಿ ನಿರ್ಧಾರ: ಪಿಎಂ, ಸಿಎಂಗೆ ಆಹ್ವಾನಿಸಲು ಹೊರಟ ವರ

ಲಖನೌ: ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ 2.3 ಅಡಿ ಎತ್ತರದ ವ್ಯಕ್ತಿಯೊಬ್ಬರು ತಮ್ಮ ಮದುವೆಯನ್ನು ವಿಭಿನ್ನವಾಗಿ ಆಚರಿಸಿಕೊಳ್ಳಲು ನಿರ್ಧರಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮದುವೆಗೆ ಆಹ್ವಾನಿಸಲು ಬಯಸಿದ್ದಾರೆ.

ಅಜೀಂ ಮನ್ಸೂರಿ ಅವರು ಇದೇ ನವೆಂಬರ್‌ 7ರಂದು ಮದುವೆಯಾಗಲು ಸಿದ್ಧರಾಗಿದ್ದು, ಮದುವೆಯ ಆಮಂತ್ರಣ ಪತ್ರಗಳನ್ನು ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಅವರಿಗೆ ನೀಡುವುದಾಗಿ ಹೇಳಿದ್ದಾರೆ. ‘ನಾನು ದೆಹಲಿಗೆ ಹೋಗುತ್ತೇನೆ ಮತ್ತು ಅವರನ್ನು ಆಹ್ವಾನಿಸುತ್ತೇನೆ” ಎಂದು ಅಜೀಂ ಮನ್ಸೂರಿ ತಿಳಿಸಿದ್ದಾರೆ.

ಮನ್ಸೂರಿ ಅವರು ಹಲವಾರು ವರ್ಷಗಳಿಂದ ವಧುವನ್ನು ಹುಡುಕುತ್ತಿದ್ದರು, ವಧುವನ್ನು ಹುಡುಕಲು ಸಹಾಯ ಮಾಡುವಂತೆ ಅಂದಿನ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಸಂಪರ್ಕಿಸಿದ್ದರು. ಕೊನೆಗೂ ಇವರಿಗೆ ವಧು ಸಿಕ್ಕಿದ್ದಾಳೆ. ಹಾಪುರ್‌ನ 3 ಅಡಿ ಎತ್ತರದ ಬುಷಾರಾ ಸಿಕ್ಕಿದ್ದು, ಈ ಜೋಡಿ ಈಗ ದಾಂಪತ್ಯಕ್ಕೆ ಕಾಲಿರಿಸಲು ಸಿದ್ಧತೆ ನಡೆದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...