alex Certify ಮಾಜಿ ಗೆಳತಿಯನ್ನು ಕೊಂದು ದೇಹವನ್ನು 6 ಭಾಗಗಳಾಗಿ ಕತ್ತರಿಸಿದ್ದವನ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಜಿ ಗೆಳತಿಯನ್ನು ಕೊಂದು ದೇಹವನ್ನು 6 ಭಾಗಗಳಾಗಿ ಕತ್ತರಿಸಿದ್ದವನ ಅರೆಸ್ಟ್

28 ವರ್ಷದ ವ್ಯಕ್ತಿಯೊಬ್ಬ ತನ್ನ ಲಿವ್-ಇನ್ ಸಂಗಾತಿಯ ಕತ್ತು ಹಿಸುಕಿ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ಅದನ್ನು ಸುಮಾರು ಮೂರು ವಾರಗಳ ಕಾಲ 300 ಲೀಟರ್ ಫ್ರಿಡ್ಜ್‌ನಲ್ಲಿ ಇರಿಸಿದ್ದ ದೆಹಲಿಯಲ್ಲಿ ಇದೇ ರೀತಿಯ ಘಟನೆ ವರದಿಯಾಗಿದೆ.

ಉತ್ತರ ಪ್ರದೇಶ ಅಜಂಘಢ ಸಮೀಪ ಬಾವಿಯಲ್ಲಿ ಮಹಿಳೆಯ ಶವ ಕೊಚ್ಚಿ ಹಾಕಿದ ಪ್ರಕರಣದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.

ನವೆಂಬರ್ 15 ರಂದು ಸ್ಥಳೀಯರು ಗ್ರಾಮದ ಹೊರಗಿನ ಬಾವಿಯೊಳಗೆ ಶವವನ್ನು ಪತ್ತೆ ಮಾಡಿದ ನಂತರ ಘಟನೆ ಬೆಳಕಿಗೆ ಬಂದಿತ್ತು. ನಂತರ ಮೃತ ಮಹಿಳೆಯನ್ನು ಆರಾಧನಾ ಎಂದು ಗುರುತಿಸಲಾಗಿತ್ತು. ಮಹಿಳೆಯ ದೇಹವು ಅರೆಬೆತ್ತಲೆ ಸ್ಥಿತಿಯಲ್ಲಿ ಪತ್ತೆಯಾಗಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ (ಅಜಂಗಢ) ಅನುರಾಗ್ ಆರ್ಯ ಈ ಹಿಂದೆ ತಿಳಿಸಿದ್ದರು.‌

ಯಾದವ್ ಎಂಬಾತ ಸಂತ್ರಸ್ತೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ಈ ವರ್ಷದ ಆರಂಭದಲ್ಲಿ ಆಕೆ ಬೇರೊಬ್ಬ ವ್ಯಕ್ತಿಯೊಂದಿಗೆ ವಿವಾಹವಾಗಿದ್ದರು.

ನವೆಂಬರ್ 9 ರಂದು ಯಾದವ್, ಆರಾಧನಾಳನ್ನು ತನ್ನ ಬೈಕ್‌ನಲ್ಲಿ ದೇವಸ್ಥಾನಕ್ಕೆ ಕರೆದೊಯ್ದಿದ್ದ. ಅಲ್ಲಿಗೆ ತಲುಪಿದಾಗ ಸರ್ವೇಶ್‌ ಎಂಬಾತನ ಸಹಾಯದಿಂದ ಕಬ್ಬಿನ ಗದ್ದೆಯಲ್ಲಿ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ನಂತರ ಇಬ್ಬರು ಆಕೆಯ ದೇಹವನ್ನು ಆರು ಭಾಗಗಳಾಗಿ ಕತ್ತರಿಸಿ ಪಾಲಿಥಿನ್ ಚೀಲದಲ್ಲಿ ತುಂಬಿ ಬಾವಿಗೆ ಎಸೆದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಳಿಕ ಅವರು ತಲೆಯನ್ನು ಸ್ವಲ್ಪ ದೂರದಲ್ಲಿದ್ದ ಕೊಳಕ್ಕೆ ಎಸೆದರು. ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಪೊಲೀಸರು ಒಂದು ಹರಿತವಾದ ಆಯುಧ, ಒಂದು ದೇಶ ನಿರ್ಮಿತ ಪಿಸ್ತೂಲ್ ಮತ್ತು ಕಾರ್ಟ್ರಿಡ್ಜ್ ಅನ್ನು ವಶಪಡಿಸಿಕೊಂಡಿದ್ದಾರೆ.

ಅಪರಾಧ ಕೃತ್ಯದಲ್ಲಿ ಯಾದವ್‌ಗೆ ಸಹಾಯ ಮಾಡಿದ ಸರ್ವೇಶ್, ಪ್ರಮೀಳಾ ಯಾದವ್, ಸುಮನ್, ರಾಜಾರಾಂ, ಕಲಾವತಿ, ಮಂಜು, ಶೀಲಾ ಇನ್ನೂ ತಲೆಮರೆಸಿಕೊಂಡಿದ್ದಾರೆ.

ಭಾನುವಾರ ಮಹಿಳೆಯ ತಲೆಯ ಪತ್ತೆಗಾಗಿ ಸ್ಥಳಕ್ಕೆ ಆರೋಪಿಯನ್ನು ಕರೆದೊಯ್ಯುವಾಗ ಪೊಲೀಸರೊಂದಿಗೆ ನಡೆದ ಗುಂಡಿನ ಎನ್‌ಕೌಂಟರ್‌ನಲ್ಲಿ ರಾಜಕುಮಾರ ಯಾದವ್‌ಗೆ ಗುಂಡು ತಗುಲಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...