alex Certify ಬರಿಗೈಯಲ್ಲಿ ಮನೆ ಗೇಟ್ ಕಿತ್ತುಹಾಕಿ ಧ್ವಂಸ, ಹೂಕುಂಡ ಪೀಸ್ ಪೀಸ್; ಸಿಟ್ಟಿಗೆದ್ದ ವ್ಯಕ್ತಿಯಿಂದ ಇದೆಂಥಾ ಕೃತ್ಯ….!? ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬರಿಗೈಯಲ್ಲಿ ಮನೆ ಗೇಟ್ ಕಿತ್ತುಹಾಕಿ ಧ್ವಂಸ, ಹೂಕುಂಡ ಪೀಸ್ ಪೀಸ್; ಸಿಟ್ಟಿಗೆದ್ದ ವ್ಯಕ್ತಿಯಿಂದ ಇದೆಂಥಾ ಕೃತ್ಯ….!? ವಿಡಿಯೋ ವೈರಲ್

ಉತ್ತರಪ್ರದೇಶ ನೋಯ್ಡಾದ ಸೆಕ್ಟರ್ 56 ರಲ್ಲಿ ವ್ಯಕ್ತಿಯೊಬ್ಬ ಗೂಂಡಾಗಿರಿ ಪ್ರದರ್ಶಿಸಿದ್ದಾರೆ. ಸಿಟ್ಟಿಗೆದ್ದು ಮಹಿಳೆಯೊಬ್ಬರ ಮನೆಯ ಮೇಲೆ ದಾಳಿ ಮಾಡಿ ಆಸ್ತಿಪಾಸ್ತಿಗೆ ಹಾನಿ ಮಾಡಿರುವ ವಿಡಿಯೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿದೆ. ಆಕ್ರೋಶಗೊಂಡ ವ್ಯಕ್ತಿ ತನ್ನ ಬರಿ ಕೈಗಳಿಂದ ಮನೆ ಗೇಟನ್ನು ಧ್ವಂಸಗೊಳಿಸಿದ್ದು ಗದ್ದಲ ಸೃಷ್ಟಿಸಿದ್ದಾರೆ. ಗಿಡಗಳಿದ್ದ ಕುಂಡಗಳನ್ನ ಮಹಿಳೆಯ ಮನೆಗೆ ಎಸೆದಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಯ ಹಿಂದಿನ ಕಾರಣ ಮಾತ್ರ ತಿಳಿದುಬಂದಿಲ್ಲ.

ನೋಯ್ಡಾದ ಸೆಕ್ಟರ್ 56 ರಲ್ಲಿನ ಬಿ-78 ಪ್ಲಾಟ್‌ನ ನೆಲ ಮಹಡಿಯಲ್ಲಿ ವಾಸವಾಗಿರುವ ಗರಿಮಾ ರಜಪೂತ್ ಎಂಬ ಮಹಿಳೆಯೊಂದಿಗೆ ವ್ಯಕ್ತಿ ಗಲಾಟೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

ಜೂನ್ 24 ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಈ ಘಟನೆ ನಡೆದಿರುವುದು ಸಮೀಪದ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ನಿವಾಸಿಗಳಿಗೆ ತೊಂದರೆ ನೀಡುವ ಹಿಂಸಾತ್ಮಕ ಕೃತ್ಯವು ವೈರಲ್ ಆಗಿದ್ದು ಈ ಪ್ರದೇಶದ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಪತ್ರಕರ್ತರೊಬ್ಬರು ಟ್ವಿಟರ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡ ನಂತರ ಪೊಲೀಸರ ಗಮನ ಸೆಳೆದಿದೆ. ನೋಯ್ಡಾದ ಪೊಲೀಸ್ ಠಾಣೆ ಸೆಕ್ಟರ್ -58 ರಲ್ಲಿ ಈ ಪ್ರಕರಣ ಬಗ್ಗೆ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

— Abhishek A, Journalist, Ex Aajtak (@TweetAbhishekA) July 2, 2023

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...