alex Certify ಅಂಗಡಿ ಎದುರಿಗಿನ ಬಲ್ಬ್​ ಕದ್ದ ಇನ್ಸ್‌ ಪೆಕ್ಟರ್; ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂಗಡಿ ಎದುರಿಗಿನ ಬಲ್ಬ್​ ಕದ್ದ ಇನ್ಸ್‌ ಪೆಕ್ಟರ್; ವಿಡಿಯೋ ವೈರಲ್​

ಲಖನೌ: ನಡುರಾತ್ರಿಯಲ್ಲಿ ಅಂಗಡಿಯೊಂದರ ಎದುರು ಬಂದ ಪೊಲೀಸ್​ ಇನ್ಸ್​ಪೆಕ್ಟರ್​ ಅಲ್ಲಿದ್ದ ಎಲ್​ಇಡಿ ಬಲ್ಬ್​ ಕದ್ದು ಪರಾರಿಯಾಗಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಪ್ರಯಾಗ್​ರಾಜ್​ನಲ್ಲಿ ನಡೆದಿದೆ. ರಾಜೇಶ್ ವರ್ಮ ಎಂಬ ಇನ್​ಸ್ಪೆಕ್ಟರ್​ ಈ ಕೃತ್ಯ ಎಸಗಿದ್ದು, ಅಂಗಡಿ ಎದುರಿಗಿದ್ದ ಸಿಸಿ‌ ಟಿವಿಯಿಂದಾಗಿ ಘಟನೆ ಬೆಳಕಿಗೆ ಬಂದಿದೆ.

ಸಿಸಿ ಟಿವಿಯಲ್ಲಿ ಸೆರೆಯಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದ್ದು, ಇದರ ಬೆನ್ನಲ್ಲೇ ಇನ್​ಸ್ಪೆಕ್ಟರ್​ ರಾಜೇಶ್​ ಅವರನ್ನು ಅಮಾನತು ಮಾಡಲಾಗಿದೆ.

ಇಲ್ಲಿನ ಫುಲ್​ಪುರ್​ ಕೋತ್ವಾಲಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ರಾಜೇಶ್​ ಅವರು ದಸರಾದ ನಿಮಿತ್ತ ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಸಮೀಪದ ಪಾನ್​ ಅಂಗಡಿ ಎದುರಿಗೆ ಹೋಗಿದ್ದಾರೆ.

ಅಲ್ಲಿದ್ದ ಎಲ್​ಇಡಿ ಬಲ್ಬ್​ ಅವರ ಕಣ್ಣಿಗೆ ಬಿದ್ದಿದೆ. ತಮ್ಮನ್ನು ಯಾರಾದರೂ ಗಮನಿಸುತ್ತಿದ್ದಾರೆಯೇ ಎಂದು ಆಸುಪಾಸು ನೋಡಿದ್ದಾರೆ. ಸುತ್ತಲೂ ಯಾರೂ ಇಲ್ಲದ್ದನ್ನು ದೃಢಪಡಿಸಿಕೊಂಡ ನಂತರ ಬಲ್ಬ್​ ಅನ್ನು ಎಗರಿಸಿ ತಮ್ಮ ಜೇಬಿನೊಳಕ್ಕೆ ಹಾಕಿಕೊಂಡಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಮರುದಿನ ಬೆಳಗ್ಗೆ ಅಂಗಡಿ ಮಾಲೀಕ ಬಂದಾಗ ಬಲ್ಬ್​ ಕಾಣಿಸಲಿಲ್ಲ. ನಂತರ ಅವರು ಸಿಸಿ ಟಿವಿ ಪರಿಶೀಲಿಸಿದಾಗ ಇನ್​ಸ್ಪೆಕ್ಟರ್​ ಮಾಡಿರುವ ಕೃತ್ಯ ತಿಳಿದುಬಂದಿದೆ. ಇದರ ವಿಡಿಯೋ ವೈರಲ್​ ಆಗುತ್ತಲೇ ಅವರನ್ನು ಅಮಾನತು ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...