alex Certify ಪಟಾಕಿ ಸಿಡಿತ, ಡಿಜೆ ಸಂಗೀತ ಇರುವ ಮದುವೆಗಳಿಗೆ ನಿಖಾ ಶಾಸ್ತ್ರ ಮಾಡೋದಿಲ್ಲವೆಂದ ಮೌಲ್ವಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಟಾಕಿ ಸಿಡಿತ, ಡಿಜೆ ಸಂಗೀತ ಇರುವ ಮದುವೆಗಳಿಗೆ ನಿಖಾ ಶಾಸ್ತ್ರ ಮಾಡೋದಿಲ್ಲವೆಂದ ಮೌಲ್ವಿಗಳು

ಮದುವೆ ಸಮಾರಂಭಗಳಲ್ಲಿ ಡಿಜೆ ಸಂಗೀತ, ಪಟಾಕಿ ಸಿಡಿಸುವುದು ಹಾಗೂ ನಿಂತುಕೊಂಡು ಊಟ ಮಾಡುವಂಥ ಕೆಲಸಗಳನ್ನು ಮಾಡಿದಲ್ಲಿ, ಅಂಥ ಮದುವೆಗಳಿಗೆ ’ನಿಖಾ’ ಶಾಸ್ತ್ರ ಮಾಡುವುದಿಲ್ಲ ಎಂದು ಉತ್ತರ ಪ್ರದೇಶದ ಮೀರತ್‌ ಜಿಲ್ಲೆಯ ಕಿಥೋರ್‌ ಪಟ್ಟಣದ ಧರ್ಮಗುರುಗಳು ಹೇಳಿದ್ದಾರೆ.

ಧರ್ಮಗುರುಗಳ ಸಭೆಯೊಂದರ ವೇಳೆ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಈ ನಿರ್ಣಯಕ್ಕೆ ಪಟ್ಟಣದ ಹಿರಿಯ ಮಂದಿ ಸಹಮತ ಸೂಚಿಸಿದ್ದಾರೆ.

ವಾಟ್ಸಾಪ್​ ಮೂಲಕವೂ ಬುಕ್​ ಮಾಡಬಹುದು ಊಬರ್​ ರೈಡ್​​..!

ಈ ನಡೆಯಿಂದ ಶರಿಯಾ ವಿರೋಧಿ ಚಟುವಟಿಕೆಗಳಿಗೆ ತಡೆ ನೀಡಿದಂತೆ ಆಗುವುದಲ್ಲದೇ, ಮದುವೆಗಳಲ್ಲಿ ವೃಥಾ ಖರ್ಚು ಮಾಡುವುದಕ್ಕೆ ಕಡಿವಾಣ ಒಡ್ಡುತ್ತದೆ ಎಂದಿದ್ದಾರೆ ಮೌಲ್ವಿಗಳು.

ಮದುವೆಗಳಲ್ಲಿ ಅನಗತ್ಯ ಖರ್ಚು ಹಾಗೂ ಆಚರಣೆಗಳಿಗೆ ಕಡಿವಾಣ ಒಡ್ಡಲು ಇದಕ್ಕೂ ಮೊದಲು ಮುಸ್ಲಿಂ ಧರ್ಮಗುರುಗಳ ಒಕ್ಕೂಟವಾದ ಜಾಮಿಯರ್‌ ಉಲೇಮಾ-ಏ-ಹಿಂದ್ ಮೌಲ್ವಿಗಳಿಗೆ ಆದೇಶ ನೀಡಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...