ಮದುವೆ ಸಮಾರಂಭಗಳಲ್ಲಿ ಡಿಜೆ ಸಂಗೀತ, ಪಟಾಕಿ ಸಿಡಿಸುವುದು ಹಾಗೂ ನಿಂತುಕೊಂಡು ಊಟ ಮಾಡುವಂಥ ಕೆಲಸಗಳನ್ನು ಮಾಡಿದಲ್ಲಿ, ಅಂಥ ಮದುವೆಗಳಿಗೆ ’ನಿಖಾ’ ಶಾಸ್ತ್ರ ಮಾಡುವುದಿಲ್ಲ ಎಂದು ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಕಿಥೋರ್ ಪಟ್ಟಣದ ಧರ್ಮಗುರುಗಳು ಹೇಳಿದ್ದಾರೆ.
ಧರ್ಮಗುರುಗಳ ಸಭೆಯೊಂದರ ವೇಳೆ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಈ ನಿರ್ಣಯಕ್ಕೆ ಪಟ್ಟಣದ ಹಿರಿಯ ಮಂದಿ ಸಹಮತ ಸೂಚಿಸಿದ್ದಾರೆ.
ವಾಟ್ಸಾಪ್ ಮೂಲಕವೂ ಬುಕ್ ಮಾಡಬಹುದು ಊಬರ್ ರೈಡ್..!
ಈ ನಡೆಯಿಂದ ಶರಿಯಾ ವಿರೋಧಿ ಚಟುವಟಿಕೆಗಳಿಗೆ ತಡೆ ನೀಡಿದಂತೆ ಆಗುವುದಲ್ಲದೇ, ಮದುವೆಗಳಲ್ಲಿ ವೃಥಾ ಖರ್ಚು ಮಾಡುವುದಕ್ಕೆ ಕಡಿವಾಣ ಒಡ್ಡುತ್ತದೆ ಎಂದಿದ್ದಾರೆ ಮೌಲ್ವಿಗಳು.
ಮದುವೆಗಳಲ್ಲಿ ಅನಗತ್ಯ ಖರ್ಚು ಹಾಗೂ ಆಚರಣೆಗಳಿಗೆ ಕಡಿವಾಣ ಒಡ್ಡಲು ಇದಕ್ಕೂ ಮೊದಲು ಮುಸ್ಲಿಂ ಧರ್ಮಗುರುಗಳ ಒಕ್ಕೂಟವಾದ ಜಾಮಿಯರ್ ಉಲೇಮಾ-ಏ-ಹಿಂದ್ ಮೌಲ್ವಿಗಳಿಗೆ ಆದೇಶ ನೀಡಿತ್ತು.