alex Certify ಪೇಪರ್‌ ಓದಲು ವಿಫಲನಾದ ವರನನ್ನು ಮದುವೆಯಾಗಲು ಒಲ್ಲೆ ಎಂದ ಮದುಮಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೇಪರ್‌ ಓದಲು ವಿಫಲನಾದ ವರನನ್ನು ಮದುವೆಯಾಗಲು ಒಲ್ಲೆ ಎಂದ ಮದುಮಗಳು

ಕುಟುಂಬಸ್ಥರೇ ನಿಶ್ಚಯಿಸಿ ಮಾಡುವ ಮದುವೆಗಳಲ್ಲಿ ವಧು – ವರರ ಇಷ್ಟ ಕಷ್ಟಗಳಿಗೆ ಬೆಲೆ ಸಿಗೋದು ಸ್ವಲ್ಪ ಕಡಿಮೆಯೇ. ವಧುವಿನ ಮನೆಯವರಂತೂ ಉತ್ತಮ ಮನೆತನ ಹಾಗೂ ವರನಿಗೆ ಒಳ್ಳೆಯ ಆದಾಯವಿದ್ದರೆ ಸಾಕು ಮಗಳನ್ನ ಮದುವೆ ಮಾಡಿಕೊಡಲು ತಯಾರಾಗಿ ಬಿಡ್ತಾರೆ. ಹೀಗಾಗಿ ಅನೇಕರು ವಧುವಿನ ಮನೆಯವರಿಗೆ ಇಷ್ಟವಾಗುವಂತಹ ರೀತಿಯಲ್ಲಿ ಸುಳ್ಳು ಮಾಹಿತಿ ನೀಡಿ ಮದುವೆಯಾಗುವವರೂ ಇದ್ದಾರೆ.

ಇಂತಹದ್ದೇ ಒಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕನ್ನಡಕ ಧರಿಸದೇ ವರನಿಗೆ ಪತ್ರಿಕೆ ಓದಲು ಬರೋದಿಲ್ಲ ಎಂಬ ವಿಚಾರ ತಿಳಿದ ಬಳಿಕ ವಧು ಅರ್ಚನಾ ಎಂಬಾಕೆ ಮದುವೆ ಆಗೋಕೆ ನಿರಾಕರಿಸಿದ್ದಾಳೆ.

ಔರಿಯಾದ ನಿವಾಸಿಯಾದ ಅರ್ಜುನ್​ ಸಿಂಗ್​ ಎಂಬವರು ತಮ್ಮ ಪುತ್ರಿ ಅರ್ಚನಾ ಎಂಬಾಕೆಯ ವಿವಾಹವನ್ನ ಶಿವಂ ಎಂಬವನ ಜೊತೆ ನಿಶ್ಚಿಯಿಸಿದ್ದರು. ಶಿವಂ ತುಂಬಾ ಓದಿಕೊಂಡಿದ್ದಾನೆ ಎಂಬ ಕಾರಣಕ್ಕೆ ಅರ್ಜುನ್​ ಸಿಂಗ್​ ತಮ್ಮ ಮಗಳನ್ನ ನೀಡಲು ಸಿದ್ಧವಾಗಿದ್ದರು.

ಆದರೆ ಮದುವೆ ದಿನದಂದೇ ವರನ ಈ ನ್ಯೂನ್ಯತೆ ಬೆಳಕಿಗೆ ಬಂದಿದೆ. ಶಿವಂ ಯಾವಾಗಲೂ ಕನ್ನಡಕ ಧರಿಸಿಯೇ ಇರುತ್ತಿದ್ದ. ಹೀಗಾಗಿ ವಧುವಿನ ಮನೆಯವರಿಗೆ ಈತನಿಗೆ ದೃಷ್ಟಿ ದೋಷ ಇರಬಹುದೇ ಎಂಬ ಶಂಕೆ ಕಾಡಲು ಆರಂಭಿಸಿದೆ. ಜೂನ್​ 20ರಂದು ಮದುವೆ ಕಾರ್ಯ ಆರಂಭವಾಗಿತ್ತು. ವಧುವಿನ ಮನೆಯವರಿಗೆ ಈತನ ಕಣ್ಣಿನ ಮೇಲೆ ಸಂಶಯವಿತ್ತು. ಹೀಗಾಗಿ ವಧು ಅರ್ಚನಾ ಹಿಂದಿ ನ್ಯೂಸ್​ ಪೇಪರ್​ನ್ನು ನೀಡಿ ಕನ್ನಡಕ ಧರಿಸದೇ ಓದಿ ಎಂದು ಹೇಳಿದ್ದಳು. ಆದರೆ ಇದರಲ್ಲಿ ಶಿವಂ ವಿಫಲನಾದ ಕಾರಣ ಮದುವೆ ಆಗಲು ಅರ್ಚನಾ ನಿರಾಕರಿಸಿದ್ದಾಳೆ.

ಇಲ್ಲಿಗೇ ಮದುವೆಯ ಕತೆ ಮುಗಿದಿಲ್ಲ. ವಧುವಿನ ಕುಟುಂಬ ಹತ್ತಿರದ ಪೊಲೀಸ್​ ಠಾಣೆಯಲ್ಲಿ ದೂರನ್ನ ದಾಖಲಿಸಿದೆ. ಮದುವೆ ಹೆಸರಿನಲ್ಲಿ ವರನ ಮನೆಗೆ ನೀಡಲಾದ ಎಲ್ಲಾ ವರದಕ್ಷಿಣೆಯನ್ನ ವಾಪಸ್​ ನೀಡಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅರ್ಚನಾ ಮನೆಯವರು ಶಿವಂಗೆ ವರದಕ್ಷಿಣೆ ರೂಪದಲ್ಲಿ ನಗದು ಹಾಗೂ ಬೈಕ್​ನ್ನು ನೀಡಿದ್ದರಂತೆ. ಆದರೆ ಇದನ್ನ ವಾಪಸ್​ ನೀಡಲು ಒಪ್ಪದ ಹಿನ್ನೆಲೆ ವಧುವಿನ ಕುಟುಂಬಸ್ಥರು ಎಫ್​ಐಆರ್​ ದಾಖಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...