alex Certify ಉರ್ಫಿ ಜಾವೇದ್​ ಜೊತೆ ವಿಮಾನದಲ್ಲಿ ಅನುಚಿತ ವರ್ತನೆ: ಸೋಶಿಯಲ್​ ಮೀಡಿಯಾದಲ್ಲಿ ನೋವು ತೋಡಿಕೊಂಡ ನಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉರ್ಫಿ ಜಾವೇದ್​ ಜೊತೆ ವಿಮಾನದಲ್ಲಿ ಅನುಚಿತ ವರ್ತನೆ: ಸೋಶಿಯಲ್​ ಮೀಡಿಯಾದಲ್ಲಿ ನೋವು ತೋಡಿಕೊಂಡ ನಟಿ

ತಮ್ಮ ವಿಲಕ್ಷಣ ಡ್ರೆಸ್​​ಗಳ ಮೂಲಕವೇ ಸುದ್ದಿಯಲ್ಲಿರುವ ಉರ್ಫಿ ಜಾವೇದ್​ ಕೆಲವು ದಿನಗಳ ಹಿಂದೆಯಷ್ಟೇ ಮುಂಬೈನಿಂದ ಗೋವಾಕ್ಕೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಈ ಸಂದರ್ಭದಲ್ಲಿ ಮದ್ಯ ಸೇವನೆ ಮಾಡಿದ್ದ ದುಷ್ಕರ್ಮಿಗಳ ತಂಡವೊಂದು ತಮಗೆ ಕಿರುಕುಳ ನೀಡಿದೆ ಎಂದು ಉರ್ಫಿ ಜಾವೇದ್​ ಆರೋಪಿಸಿದ್ದಾರೆ.

ಉರ್ಫಿ ಜಾವೇದ್​ ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಪ್ರಯಾಣಿಕರ ಫೋಟೋವನ್ನು ಶೇರ್​ ಮಾಡಿದ್ದಾರೆ. ಇಲ್ಲಿರುವ ದುಷ್ಕರ್ಮಿಗಳು ನನಗೆ ಟೀಸ್​ ಮಾಡಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಫೋಟೋಗಳಲ್ಲಿ ನಟಿ ಉರ್ಫಿ ಜಾವೇದ್​ ತಮ್ಮ ಕೂದಲಿಗೆ ಕೆಂಪು ಬಣ್ಣ ಹಾಕಿರುವುದನ್ನು ಕಾಣಬಹುದಾಗಿದೆ.

ಇನ್ನು ಈ ಫೋಟೋಗಳ ಜೊತೆಯಲ್ಲಿ ಉರ್ಫಿ ಜಾವೇದ್​ ತಮಗಾದ ಕೆಟ್ಟ ಅನುಭವದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ನಿನ್ನೆ ನಾನು ಮುಂಬೈನಿಂದ ಗೋವಾಗೆ ವಿಮಾನದಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಈ ಕಿರುಕುಳವನ್ನು ಎದುರಿಸಬೇಕಾಗಿ ಬಂತು. ಈ ವಿಡಿಯೋದಲ್ಲಿರುವ ಪುರುಷರ ಗುಂಪು ನನ್ನನ್ನು ನೋಡಿ ಆಡಿಕೊಂಡು ನಗುತ್ತಿದ್ದರು. ಇದನ್ನು ನಾನು ಪ್ರಶ್ನೆ ಮಾಡಿದ್ದಾಗ ಅದೇ ಗುಂಪಿನಲ್ಲಿದ್ದ ಓರ್ವ ವ್ಯಕ್ತಿ ನನ್ನ ಸ್ನೇಹಿತರು ಕುಡಿದಿದ್ದಾರೆ ಎಂದು ಹೇಳಿದರು.

ಕುಡಿದ ಅಮಲಿನಲ್ಲಿ ಮಹಿಳೆಯರೊಂದಿಗೆ ಈ ರೀತಿ ಅನುಚಿತ ವರ್ತನೆ ಸಹಿಸಲು ಸಾಧ್ಯವಿಲ್ಲ. ನಾನು ಪಬ್ಲಿಕ್​ ಫಿಗರ್​ ಇರಬಹುದು. ಹಾಗಂತ ಸಾರ್ವಜನಿಕ ಆಸ್ತಿ ನಾನಲ್ಲ ಎಂದಿದ್ದಾರೆ.

ಉರ್ಫಿ ಜಾವೇದ್​ ಸಾಮಾನ್ಯವಾಗಿ ತಮ್ಮ ವೇಷ ಭೂಷಣಗಳ ಮೂಲಕವೇ ಗಮನ ಸೆಳೆಯುತ್ತಾರೆ. ಮುಂಬೈನ ವಿಮಾನ ನಿಲ್ದಾಣದಲ್ಲಿ ಉರ್ಫಿ ಸಾಮಾನ್ಯವಾಗಿ ಕಾಣಿಸಿಕೊಳ್ತಿರ್ತಾರೆ. ಪಾಪ್​ಗಳೊಂದಿಗೆ ಮಾತನಾಡುತ್ತಾ ಫೋಟೋಗೆ ಪೋಸ್​ ಕೊಡುವುದು ಇವರ ನಿತ್ಯದ ಕೆಲಸ ಎಂಬಂತಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...