alex Certify ರಸ್ತೆಯುದ್ದಕ್ಕೂ SORRY……..ಕಾಲೇಜು ಗೋಡೆ ಮೇಲೂ SORRY; ಯುವಕನ ಹುಚ್ಚಾಟಕ್ಕೆ ದಂಗಾದ ಸ್ಥಳೀಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಸ್ತೆಯುದ್ದಕ್ಕೂ SORRY……..ಕಾಲೇಜು ಗೋಡೆ ಮೇಲೂ SORRY; ಯುವಕನ ಹುಚ್ಚಾಟಕ್ಕೆ ದಂಗಾದ ಸ್ಥಳೀಯರು

ಬೆಂಗಳೂರು: ಕಾಲೇಜು ಗೋಡೆ, ಗೇಟು, ಕಾಂಪೌಂಡ್, ರಸ್ತೆಯುದ್ದಕ್ಕೂ SORRY…… SORRY…… ಎಂದು ಬರೆದು ಹುಚ್ಚಾಟ ಮೆರೆದಿರುವ ಘಟನೆ ಬೆಂಗಳೂರಿನ ಸುಂಕದಕಟ್ಟೆ ಬಳಿಯ ಶಾಂತಿಧಾಮ ಕಾಲೇಜು ಬಳಿ ನಡೆದಿದೆ.

ಇಂದು ಬೆಳಗಾಗುವಷ್ಟರಲ್ಲಿ ರಸ್ತೆ, ಶಾಲೆ, ಗೋಡೆ ಹೀಗೆ ಎಲ್ಲೆಂದರಲ್ಲಿ SORRY ಪದಗಳು ಕಂಡು ಬರುತ್ತಿದ್ದು, ಸ್ಥಳೀಯರು ಶಾಕ್ ಆಗಿದ್ದಾರೆ. ಪ್ರೀತಿ-ಪ್ರೇಮದ ವಿಚಾರವಾಗಿ ಯುವಕ ಈ ರೀತಿ ಬರೆದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.

ಓಲಾ ಎಸ್‌ಒನ್ ಪ್ರೋ ಖರೀದಿ ವಿಂಡೋ ಶೀಘ್ರ ಓಪನ್: ಬೆಲೆ, ವಿಶೇಷತೆ ಇಲ್ಲಿದೆ ಮಾಹಿತಿ

ತಡರಾತ್ರಿ 11ರಿಂದ 12 ಗಂಟೆ ಸುಮಾರಿಗೆ ಫುಡ್ ಡೆಲಿವರಿ ಬ್ಯಾಗ್ ನೊಂದಿಗೆ ಡ್ಯೂಕ್ ಬೈಕ್ ನಲ್ಲಿ ಬಂದ ಇಬ್ಬರು ಯುವಕರು ಈ ಕೃತ್ಯವೆಸಗಿರುವ ಅನುಮಾನ ವ್ಯಕ್ತವಾಗಿದೆ. ಬ್ಯಾಗ್ ನಲ್ಲಿ ಕೆಂಪು ಬಣ್ಣದ ಸ್ಪ್ರೇ ತಂದು ಈ ರೀತಿ ಮಾಡಿರಬಹುದು ಎನ್ನಲಾಗುತ್ತಿದೆ. ಕಾರಣ ಇಬ್ಬರು ಯುವಕರು ತಡ ರಾತ್ರಿ ಬೈಕ್ ನಲ್ಲಿ ಬಂದು ಇಳಿದ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...