alex Certify ಪರೀಕ್ಷೆಯಲ್ಲಿ ಕಾಪಿ ಮಾಡುವ ಶಾಕಿಂಗ್ ವಿಧಾನದ ವಿಡಿಯೋ ವೈರಲ್ ​! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪರೀಕ್ಷೆಯಲ್ಲಿ ಕಾಪಿ ಮಾಡುವ ಶಾಕಿಂಗ್ ವಿಧಾನದ ವಿಡಿಯೋ ವೈರಲ್ ​!

ಪರೀಕ್ಷೆಯಲ್ಲಿ ನಕಲು ಮಾಡುವುದು ಶಿಕ್ಷಾರ್ಹ ಮತ್ತು ನಮಗೆಲ್ಲರಿಗೂ ಅದು ಚೆನ್ನಾಗಿ ತಿಳಿದಿದೆ. ಆದಾಗ್ಯೂ, ಶಾಲೆಯಲ್ಲಿನ ಪರೀಕ್ಷೆಯ ಪೇಪರ್‌ಗಳನ್ನು ಪರಸ್ಪರ ಇಣುಕಿ ನೋಡುವುದು ಮಾಮೂಲು. ನಮ್ಮಲ್ಲಿ ಕೆಲವರು ಪರೀಕ್ಷಾ ಹಾಲ್‌ಗೆ ಸಣ್ಣ ಚಿಟ್‌ಗಳನ್ನು ತೆಗೆದುಕೊಂಡು ಹೋದರೆ ಇನ್ನು ಕೆಲವರು ಏನೇನೋ ಟೆಕ್ನಿಕ್​ ಉಪಯೋಗಿಸುತ್ತಿರುವುದು ನಡೆಯುತ್ತಿದೆ.

ಇವೆಲ್ಲವನ್ನೂ ಪತ್ತೆ ಹಚ್ಚುವ ಕಾರ್ಯ ಸಾಗುತ್ತಿರುವ ನಡುವೆಯೇ ಹೊಸ ಹೊಸ ಕಾಪಿ ಆವಿಷ್ಕಾರಗಳೂ ನಡೆಯುತ್ತಿವೆ. ಅಂಥದ್ದೇ ಒಂದು ಹೊಸ ಆವಿಷ್ಕಾರದ ವಿಡಿಯೋ ಈಗ ವೈರಲ್​ ಆಗಿದೆ. ಸೃಜನಶೀಲ ಮೋಸದ ತಂತ್ರ ಇದಾಗಿದೆ.

ಸುಮಾರು 8 ಸೆಕೆಂಡ್‌ಗಳ ಅವಧಿಯ ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಪೆನ್‌ ಹಿಡಿದುಕೊಂಡಿರುವುದನ್ನು ನೋಡಬಹುದು. ನಂತರ ಒಂದು ಬ್ಯಾಗ್​ ಅಲ್ಲಿ ಕಾಣಿಸುತ್ತದೆ. ಇದು ವರ್ಣರಂಜಿತ ಪೆನ್ನುಗಳ ಗುಂಪನ್ನು ಹೊಂದಿರುವಂತೆ ತೋರುತ್ತಿದೆ. ಆದರೆ ಅದು ಕೇವಲ ಪೆನ್​ ಅಲ್ಲ, ಬದಲಿಗೆ ಮೊಬೈಲ್‌ನ ವಾಲ್‌ಪೇಪರ್‌ !

ವ್ಯಕ್ತಿಯು ಫೋನ್ ಅನ್ನು ಸ್ಪರ್ಶಿಸಿದಾಗ, ಅದು ಕಾಗದದ ಮೇಲಿನ ಪ್ರಶ್ನೆಗಳಿಗೆ ಉತ್ತರಗಳನ್ನು ಒಳಗೊಂಡಿರುವ ಫೋನ್‌ನ ಗ್ಯಾಲರಿಯನ್ನು ತೋರಿಸುತ್ತದೆ. ಈ ತಂತ್ರವು ಆನ್‌ಲೈನ್‌ನಲ್ಲಿ ಅನೇಕ ಜನರ ಗಮನವನ್ನು ಸೆಳೆಯುತ್ತಿದೆ. ಟ್ವಿಟ್ಟರ್‌ನಲ್ಲಿ ಅನೇಕ ಜನರು ಈ ವಿಡಿಯೋದ ಹಿಂದಿನ ಜಾಣ್ಮೆಯನ್ನು ಶ್ಲಾಘಿಸಿದ್ದರೆ ಇಂಥ ಮೋಸ ಸಲ್ಲದು ಎಂದು ಹಲವರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...