alex Certify ಶಿವಸೇನೆ ಸರ್ಕಾರಕ್ಕೆ ಬಿಗ್​ಶಾಕ್​….! ಸರ್ಕಾರ ರಚನೆಯ ಸುಳಿವು ಬಿಚ್ಚಿಟ್ಟ ಬಿಜೆಪಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಿವಸೇನೆ ಸರ್ಕಾರಕ್ಕೆ ಬಿಗ್​ಶಾಕ್​….! ಸರ್ಕಾರ ರಚನೆಯ ಸುಳಿವು ಬಿಚ್ಚಿಟ್ಟ ಬಿಜೆಪಿ

ಅತೀ ಶೀಘ್ರದಲ್ಲೇ ಮಹಾರಾಷ್ಟ್ರದಲ್ಲಿ ಮಹತ್ವದ ಬದಲಾವಣೆ ಉಂಟಾಗಲಿದೆ ಎಂದು ಹೇಳುವ ಮೂಲಕ ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ ನಾರಾಯಣ ರಾಣೆ ಠಾಕ್ರೆ ಸರ್ಕಾರದ ಪತನದ ಭವಿಷ್ಯ ನುಡಿದಿದ್ದಾರೆ.

ರಾಜಸ್ಥಾನದಲ್ಲಿ 2 ದಿನಗಳ ಪ್ರವಾಸದಲ್ಲಿರುವ ನಾರಾಯಣ ಠಾಕ್ರೆ, ಮಹಾರಾಷ್ಟ್ರದಲ್ಲಿ ಶೀಘ್ರದಲ್ಲೇ ಬದಲಾವಣೆಯನ್ನು ಕಾಣಲಿದ್ದೀರಿ. ಮಾರ್ಚ್​ ತಿಂಗಳಲ್ಲಿ ಈ ಬದಲಾವಣೆ ಕಾಣಲಿದೆ. ಸರ್ಕಾರವನ್ನು ರಚಿಸುವುದು ಹಾಗೂ ಸರ್ಕಾರವನ್ನು ಪತನಗೊಳಿಸುವುದು, ಕೆಲವೊಂದು ವಿಚಾರಗಳನ್ನು ರಹಸ್ಯವಾಗಿಯೇ ಇಡಬೇಕು ಎಂದು ಹೇಳಿದ್ದಾರೆ.

ಉದ್ಧವ್ ಠಾಕ್ರೆಗೆ ಅನಾರೋಗ್ಯವಿದೆ. ಹೀಗಾಗಿ ಮಹಾರಾಷ್ಟ್ರ ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಕಾಂತ್​ ಪಾಟೀಲ್​ ಈಗಲೇ ಅವರೊಡನೆ ಮಾತನಾಡೋದು ಬೇಡ ಎಂದು ಹೇಳಿದ್ದಾರೆ. ಆದರೆ ಮಹಾರಾಷ್ಟ್ರದಲ್ಲಿ ಮೂರು ಪಕ್ಷಗಳ ಮಹಾ ವಿಕಾಸ್​ ಅಘಾಡಿ ಸರ್ಕಾರ ಇನ್ನು ಜಾಸ್ತಿ ದಿನ ಉಳಿಯೋದಿಲ್ಲ ಎಂದು ಹೇಳಿದ್ರು.

ಎರಡು ವಾರಗಳ ಹಿಂದೆಯಷ್ಟೇ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮುಂಬೈನ ಹೆಚ್​ಎನ್​ ರಿಲಯನ್ಸ್​ ಆಸ್ಪತ್ರೆಯಲ್ಲಿ ಯಶಸ್ವಿ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಮಹಾ ವಿಕಾಸ್​ ಅಘಾಡಿ ಸರ್ಕಾರದಲ್ಲಿ ಶಿವಸೇನಾ, ಕಾಂಗ್ರೆಸ್​ ಹಾಗೂ ಎನ್​​ಸಿಪಿ ಮೈತ್ರಿ ಮಾಡಿಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...