alex Certify BIG NEWS: ಲಸಿಕೆ ಅಭಿಯಾನದ ವರ್ಷದ ಸಂಭ್ರಮಾಚರಣೆಯ ಭಾಗವಾಗಿ ಪೋಸ್ಟಲ್ ಸ್ಟಾಂಪ್ ಬಿಡುಗಡೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಲಸಿಕೆ ಅಭಿಯಾನದ ವರ್ಷದ ಸಂಭ್ರಮಾಚರಣೆಯ ಭಾಗವಾಗಿ ಪೋಸ್ಟಲ್ ಸ್ಟಾಂಪ್ ಬಿಡುಗಡೆ

ಭಾರತದ ವಯಸ್ಕರಲ್ಲಿ ಎಪ್ಪತ್ತು ಪ್ರತಿಶತದಷ್ಟು ಜನರು ಕೊರೋನಾ ವಿರುದ್ಧ ಸಂಪೂರ್ಣವಾಗಿ ಲಸಿಕೆಯನ್ನು ಪಡೆದಿದ್ದಾರೆ. 93 ಪ್ರತಿಶತದಷ್ಟು ಜನರು ಮೊದಲ ಡೋಸ್ ಸ್ವೀಕರಿಸಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ. ಲಸಿಕೆ ಅಭಿಯಾನ ಶುರುವಾಗಿ ಒಂದು ವರ್ಷವಾಗಿದ್ದು, ಕೋವ್ಯಾಕ್ಸಿನ್ ನ ಪೋಸ್ಟೇಜ್ ಸ್ಟಾಂಪ್ ಬಿಡುಗಡೆ ಮಾಡುವ ಮೂಲಕ ಈ ಸಂಭ್ರಮವನ್ನ ಆಚರಿಸಲಾಗಿದೆ.

ಕಳೆದ ವರ್ಷ ಜನವರಿ 16 ರಂದು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಚುಚ್ಚುಮದ್ದು ನೀಡುವುದರೊಂದಿಗೆ ಈ ಅಭಿಯಾನವನ್ನು ಪ್ರಾರಂಭಿಸಲಾಯಿತು. ವರ್ಚುವಲ್ ಕಾರ್ಯಕ್ರಮದಲ್ಲಿ ಅಂಚೆ ಚೀಟಿ ಬಿಡುಗಡೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಾಂಡವಿಯಾ, ಇದು ಭಾರತೀಯರಿಗೆ ಹೆಮ್ಮೆಯ ಕ್ಷಣವಾಗಿದೆ ಮತ್ತು ದೇಶದ ಕೋವಿಡ್ ಲಸಿಕೆ ಅಭಿಯಾನದಿಂದ ಇಡೀ ಜಗತ್ತು ಆಶ್ಚರ್ಯಚಕಿತವಾಗಿದೆ ಎಂದು ಹೇಳಿದರು. ಇಷ್ಟು ದೊಡ್ಡ ಜನಸಂಖ್ಯೆ ಮತ್ತು ವೈವಿಧ್ಯತೆಯ ಹೊರತಾಗಿಯೂ ಭಾರತವು 156 ಕೋಟಿ ಡೋಸ್‌ಗಳನ್ನು ನೀಡಿ ಹೊಸ ಮೈಲಿಗಲ್ಲನ್ನು ಸಾಧಿಸಲು ಸಾಧ್ಯವಾಗಿದೆ ಎಂದು ಅವರು ಹೇಳಿದರು.

ಸ್ಥಳೀಯವಾಗಿ ಲಸಿಕೆ ಅಭಿವೃದ್ಧಿಪಡಿಸುವ ಮೂಲಕ ಐಸಿಎಂಆರ್ ಮತ್ತು ಭಾರತ್ ಬಯೋಟೆಕ್, ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತದ ಕನಸನ್ನು ನನಸು ಮಾಡಿದ್ದಾರೆ ಎಂದು ಅವರು ಹೇಳಿದರು‌‌. ಅಲ್ಲದೇ ಈ ಸಂದರ್ಭದಲ್ಲಿ ಅವರು ಎಲ್ಲಾ ವಿಜ್ಞಾನಿಗಳನ್ನು ಅಭಿನಂದಿಸಿದರು.

ನಮ್ಮ ಪ್ರಧಾನ ಮಂತ್ರಿಗಳು ಸಂಶೋಧನೆ ನಡೆಸಲು ಮತ್ತು ಸ್ಥಳೀಯ ಕೋವಿಡ್ ಲಸಿಕೆಯನ್ನು ಅಭಿವೃದ್ಧಿಪಡಿಸಲು ವಿಜ್ಞಾನಿಗಳನ್ನು ಪ್ರೋತ್ಸಾಹಿಸಿದರು ಮತ್ತು ಲಸಿಕೆ ತಯಾರಿಕಾ ಕಂಪನಿಗಳಲ್ಲಿ ಉತ್ಸಾಹ ತುಂಬಿದರು,‌ ಅವರಿಗೆ ಬೆಂಬಲವನ್ನು ನೀಡಿದರು. ಭಾರತದಲ್ಲಿ ಮಾನವ ಶಕ್ತಿ ಅಥವಾ ಬುದ್ಧಿವಂತರಿಗೆ ಕೊರತೆ ಇರಲಿಲ್ಲ. ಉತ್ತಮ ಲಸಿಕೆಗಳನ್ನ ತಯಾರಿಸುವವರನ್ನು ಗುರುತಿಸುವ ಗುರುತಿಸುವ ಸಾಮರ್ಥ್ಯ ಬೇಕಾಗಿತ್ತು ಅಷ್ಟೇ ಎಂದು ಮಾಂಡವೀಯ ಹೇಳಿದರು.

— Dr Mansukh Mandaviya (@mansukhmandviya) January 16, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...