alex Certify ವಿದ್ಯಾಸಂಸ್ಥೆಗಳಿಗೆ ಮಾದರಿಯಾಗಿದೆ ಈ ಶಾಲೆ..! ಜಾರಿಗೆ ಬಂದಿದೆ ಲಿಂಗ ಸಮಾನತೆ ಸಾರುವ ಸಮವಸ್ತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯಾಸಂಸ್ಥೆಗಳಿಗೆ ಮಾದರಿಯಾಗಿದೆ ಈ ಶಾಲೆ..! ಜಾರಿಗೆ ಬಂದಿದೆ ಲಿಂಗ ಸಮಾನತೆ ಸಾರುವ ಸಮವಸ್ತ್ರ

ಲಿಂಗ ಸಮಾನತೆ ಎಂಬ ಹೆಸರು, ರಾಜಕೀಯ ನಾಯಕರು, ಗಣ್ಯರ ಬಾಯಲ್ಲಿ ಕೇಳಿ ಬರ್ತಿದೆ. ಹಾಗೆ ಪುಸ್ತಕದಲ್ಲಿ ಓದಲು ಸಿಗ್ತಿದೆ. ಆದ್ರೆ ಲಿಂಗ ಸಮಾನತೆಗೆ ಸಂಬಂಧಿಸಿದಂತೆ ಯಾವುದೇ ಮಾತು, ಕಾರ್ಯರೂಪಕ್ಕೆ ಬಂದಿಲ್ಲ. ಈ ಮಧ್ಯೆ ಕೇರಳ ಶಾಲೆಯೊಂದು ಎಲ್ಲರ ಗಮನ ಸೆಳೆಸಿದೆ. ವಿದ್ಯಾರ್ಥಿಗಳಿಗೆ ಏಕರೂಪ ಸಮವಸ್ತ್ರವನ್ನು ಜಾರಿಗೆ ತರುವ ಮೂಲಕ ಲಿಂಗ ಸಮಾನತೆ ಸಾರಲು ಮುಂದಾಗಿದೆ. ರಾಜ್ಯ ಸರ್ಕಾರದಿಂದಲೂ, ಶಾಲೆಯ ಈ ಕೆಲಸಕ್ಕೆ ಮೆಚ್ಚುಗೆ ಸಿಕ್ಕಿದೆ.

ಲಿಂಗ ಸಮಾನತೆಗಾಗಿ ಶಾಲೆ ಮೊದಲ ಹೆಜ್ಜೆಯಾಗಿ, ಸಮವಸ್ತ್ರವನ್ನು ಏಕರೂಪಗೊಳಿಸಿದೆ. ಕೇರಳದ ಎರ್ನಾಕುಲಂ ಜಿಲ್ಲೆಯ ಪೆರುಂಬವೂರ್ ಬಳಿಯ ವಳಯಂಚಿರಂಗಾರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊಸ ಸಮವಸ್ತ್ರ ಜಾರಿಗೆ ಬಂದಿದೆ. ಎಲ್ಲಾ ವಿದ್ಯಾರ್ಥಿಗಳಿಗೆ 3/4 ಶಾರ್ಟ್ಸ್ ಮತ್ತು ಶರ್ಟ್‌ ಕಡ್ಡಾಯವಾಗಿದೆ. ಈ ಶಾಲೆಯಲ್ಲಿ 754 ವಿದ್ಯಾರ್ಥಿಗಳು ಓದುತ್ತಿದ್ದಾರೆ.

ಹೊಸ ಡ್ರೆಸ್ ಕೋಡನ್ನು 2018 ರಲ್ಲಿ ಯೋಜಿಸಲಾಗಿತ್ತು. ಕೊರೊನಾ ನಂತರ ಶಾಲೆಯು ಪುನರಾರಂಭವಾದಾಗ ಎಲ್ಲ ವಿದ್ಯಾರ್ಥಿಗಳಿಗೆ ಈ ಸಮವಸ್ತ್ರವನ್ನು ನೀಡಲಾಗಿದೆ. ಮಕ್ಕಳಿಗೆ ಸಮಾನ ಸ್ವಾತಂತ್ರ್ಯ ನೀಡಬೇಕೆಂದು ಪಾಲಕ-ಶಿಕ್ಷಕರ ಸಂಘದ ಹಾಲಿ ಅಧ್ಯಕ್ಷ ವಿ. ವಿವೇಕ್, 2018 ನಿರ್ಧಾರ ತೆಗೆದುಕೊಂಡಿದ್ದರು.

ಶಾಲೆಯ ನಿರ್ಧಾರಕ್ಕೆ  ವಿದ್ಯಾರ್ಥಿಗಳು ಮತ್ತು ಪೋಷಕರ ಬೆಂಬಲ ಸಿಕ್ಕಿದೆ. ಎಲ್ಲರಿಗೂ ಸಮಾನ ಸ್ವಾತಂತ್ರ್ಯ ಸಿಗಲು ಎಲ್ಲಾ ವಿದ್ಯಾರ್ಥಿಗಳು ಒಂದೇ ಸಮವಸ್ತ್ರವನ್ನು ಹೊಂದಬೇಕೆಂದು ನಾವು ಬಯಸಿದ್ದೇವೆ ಎಂದು ವಿವೇಕ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...