alex Certify ವೈಡ್ ಬಾಲ್ ತೀರ್ಪು ನೀಡಲು ವಿಚಿತ್ರ ವಿಧಾನ ಅನುಸರಿಸಿದ ಅಂಪೈರ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈಡ್ ಬಾಲ್ ತೀರ್ಪು ನೀಡಲು ವಿಚಿತ್ರ ವಿಧಾನ ಅನುಸರಿಸಿದ ಅಂಪೈರ್‌

ಕ್ರಿಕೆಟ್ ಪಂದ್ಯದ ವೇಳೆ ಆಟಗಾರರ ಮೇಲೆ ಇರುವಷ್ಟೇ ಗಮನವನ್ನು ಕೆಲವೊಂದು ತೀರ್ಪುದಾರರು ಪ್ರೇಕ್ಷಕರಿಂದ ಪಡೆದುಕೊಳ್ಳುತ್ತಾರೆ. ನ್ಯೂಜಿಲೆಂಡ್‌ನ ಸೈಮನ್ ಟೌಫೆಲ್ ಇದಕ್ಕೆ ಉದಾಹರಣೆ. ತೀರ್ಪು ನೀಡುವ ವೇಳೆ ತಮ್ಮ ವಿಶಿಷ್ಟ ಮ್ಯಾನರಿಸಂನಿಂದ ಗಮನ ಸೆಳೆಯುತ್ತಿದ್ದ ಟೌಫೆಲ್ ಎಂದರೆ ಪ್ರತಿಯೊಬ್ಬ ಕ್ರಿಕೆಟ್ ಪ್ರಿಯನಿಗೂ ಇಷ್ಟವಾಗುತ್ತಾರೆ.

ಅದೇ ರೀತಿ ಮಹಾರಾಷ್ಟ್ರದಲ್ಲಿ ಆಯೋಜಿಸಿದ್ದ ಸ್ಥಳೀಯ ಕ್ರಿಕೆಟ್ ಟೂರ್ನಿಯೊಂದರ ವೇಳೆ ತೀರ್ಪುದಾರರೊಬ್ಬರು ವೈಡ್ ಬಾಲ್‌ ತೀರ್ಪು ನೀಡಲು ಆವಿಷ್ಕಾರಿ ಶೈಲಿಯೊಂದನ್ನು ಹುಟ್ಟುಹಾಕಿದ್ದಾರೆ.

ಪುರಂದರ್‌ ಪ್ರೀಮಿಯರ್‌ ಲೀಗ್ ಪಂದ್ಯವೊಂದರ ವೇಳೆ ಬೌಲರ್‌ ಒಬ್ಬರು ವೈಡ್ ಎಸೆತ ಹಾಕುತ್ತಲೇ ತಲೆ ಕೆಳಗಾಗಿ ಕಾಲುಗಳನ್ನು ಅಗಲಿಸಿ ವೈಡ್ ತೀರ್ಪು ನೀಡಿದ್ದಾರೆ.

ವಿಡಿಯೋ ವೈರಲ್‌ ಆಗಿದ್ದು, ನೆಟ್ಟಿಗರ ಬಳಗದಲ್ಲಿ ತೀರ್ಪುದಾರ ಭಾರೀ ಫೇಮಸ್ ಆಗಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...