alex Certify ಕಣ್ಣಂಚನ್ನು ತೇವಗೊಳಿಸುತ್ತೆ ಬಾಂಬ್‌ ದಾಳಿಗೊಳಗಾದ ಮನೆ ಸ್ವಚ್ಛ ಮಾಡುತ್ತಾ ದುಖಃಪಡುತ್ತಿರುವ ಮಹಿಳೆ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣಂಚನ್ನು ತೇವಗೊಳಿಸುತ್ತೆ ಬಾಂಬ್‌ ದಾಳಿಗೊಳಗಾದ ಮನೆ ಸ್ವಚ್ಛ ಮಾಡುತ್ತಾ ದುಖಃಪಡುತ್ತಿರುವ ಮಹಿಳೆ ವಿಡಿಯೋ

ರಷ್ಯಾ ದಾಳಿಯಿಂದ ಘನಘೋರ ಪರಿಸ್ಥಿತಿ ಎದುರಿಸುತ್ತಿರುವ ಉಕ್ರೇನ್‌ನಲ್ಲಿ ಜನ ತತ್ತರಿಸಿಹೋಗಿದ್ದಾರೆ. ನಿರಂತರ ದಾಳಿಯಿಂದ ನಾಗರಿಕರು ಸಂಕಷ್ಟದ ಅಗ್ನಿಪರೀಕ್ಷೆಯ ಸನ್ನಿವೇಶ ಎದುರಿಸುತ್ತಿದ್ದಾರೆ. ಈ ಪರಿಸ್ಥಿತಿಯನ್ನು ತೋರಿಸುವ ವಿಡಿಯೋ ಒಂದು ವೈರಲ್ ಆಗಿದ್ದು ನೆಟ್ಟಿಗರನ್ನು ಭಾವುಕರನ್ನಾಗಿ ಮಾಡಿದೆ.

ಉಕ್ರೇನಿಯನ್ ಮಹಿಳೆ ತನ್ನ ಬಾಂಬ್ ದಾಳಿಯ ಮನೆಯ ಗಾಜನ್ನು ಸ್ವಚ್ಛಗೊಳಿಸುತ್ತಿರುವಾಗ ಕಣ್ಣೀರು ಹಾಕುತ್ತಾ ರಾಷ್ಟ್ರಗೀತೆ ಹಾಡಿರುವ ವಿಡಿಯೋ ಅದಾಗಿದೆ.

BREAKING NEWS: ಖ್ಯಾತ ನಟ ಕ್ರೇಜಿಸ್ಟಾರ್ ರವಿಚಂದ್ರನ್ ತಾಯಿ ನಿಧನ

ವೀಡಿಯೊದಲ್ಲಿ, ಒಕ್ಸಾನಾ ಗುಲೆಂಕೊ ಎಂಬ ಮಹಿಳೆ ಬಾಂಬ್ ದಾಳಿಗೊಳಗಾದ ತನ್ನ ಮನೆಯಿಂದ ಗಾಜಿನ ಚೂರುಗಳನ್ನು ಸ್ವಚ್ಛಗೊಳಿಸುವಾಗ ರಾಷ್ಟ್ರಗೀತೆಯನ್ನು ಹಾಡುವುದನ್ನು ಕಾಣಬಹುದು.

ಕ್ಷಿಪಣಿ ದಾಳಿಯು ದೇಶದ ರಾಜಧಾನಿ ಕೈವ್‌ನಲ್ಲಿರುವ ಆಕೆಯ ಮನೆ ಇರುವ ಕಟ್ಟಡವನ್ನು ಹಾನಿಗೊಳಿಸಿದೆ. ಒಕ್ಸಾನಾ ಕಣ್ಣೀರು ಹಿಡಿದಿಟ್ಟುಕೊಳ್ಳುವುದನ್ನು ಮತ್ತು “ಉಕ್ರೇನ್ ಲಾಂಗ್ ಲಿವ್…” ಎಂದು ಹೇಳುತ್ತಾ ಕೊನೆಯಲ್ಲಿ ಅಳುವುದನ್ನು ಕಾಣಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...