alex Certify WAR BREAKING: ರಷ್ಯಾ ದಾಳಿಗೆ ಉಕ್ರೇನ್ ನ 8 ಯೋಧರು ಸಾವು; 202 ಶಾಲೆ, 34 ಆಸ್ಪತ್ರೆಗಳು ಧ್ವಂಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

WAR BREAKING: ರಷ್ಯಾ ದಾಳಿಗೆ ಉಕ್ರೇನ್ ನ 8 ಯೋಧರು ಸಾವು; 202 ಶಾಲೆ, 34 ಆಸ್ಪತ್ರೆಗಳು ಧ್ವಂಸ

ಕೀವ್: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ ಮುಂದುವರೆಸಿದ್ದು , 200ಕ್ಕೂ ಹೆಚ್ಚು ಶಾಲಾ ಕಟ್ಟಡಗಳು, 30ಕ್ಕೂ ಹೆಚ್ಚು ಆಸ್ಪತ್ರೆಗಳನ್ನು ಧ್ವಂಸಗೊಳಿಸಿದೆ. ರಷ್ಯಾ ನಡೆಸಿದ ಇಂದಿನ ದಾಳಿಯಲ್ಲಿ 8 ಯೋಧರು ಸೇರಿದಂತೆ 20ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

ರಷ್ಯಾ, ಉಕ್ರೇನ್ ನ ಕೀವ್, ಖಾರ್ಕೀವ್ ಸೇರಿದಂತೆ 5 ನಗರಗಳಲ್ಲಿ ಕದನ ವಿರಾಮ ಘೋಷಿಸಿದ್ದರೂ ಕೂಡ ಕೆಲವೆಡೆ ನಿಯಮ ಉಲ್ಲಂಘಿಸಿ ಬಾಂಬ್ ದಾಳಿ ನಡೆಸಿದೆ. ಈ ನಡುವೆ ಮಕರೀವ್ ಬೇಕರಿ ಮೇಲೆ ರಷ್ಯಾ ನಡೆಸಿದ ದಾಳಿಯಲ್ಲಿ 13 ಜನರು ಸಾವನ್ನಪ್ಪಿದ್ದಾರೆ.

ರಷ್ಯಾ ದಾಳಿಯಲ್ಲಿ 8 ಉಕ್ರೇನ್ ಸೈನಿಕರು ಮೃತಪಟ್ಟಿದ್ದು, 19 ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉಕ್ರೇನ್ ಮೇಲೆ ರಷ್ಯಾ ಸೇನೆ ನಿರಂತರ ದಾಳಿ ನಡೆಸಿದ್ದು, 202 ಶಾಲೆಗಳು, 34 ಆಸ್ಪತ್ರೆಗಳು ಹಾಗೂ 1500 ಉಕ್ರೇನ್ ಜನವಸತಿ ಕಟ್ಟಡಗಳನ್ನು ಸಂಪೂರ್ಣ ನಾಶಪಡಿಸಿದೆ ಎಂದು ಉಕ್ರೇನ್ ಸರ್ಕಾರ ತಿಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...