alex Certify ಕೇವಲ ಪಬ್​ಗಳನ್ನೇ ಸುತ್ತಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ ಈ ಮಹಾನುಭಾವ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ ಪಬ್​ಗಳನ್ನೇ ಸುತ್ತಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ ಈ ಮಹಾನುಭಾವ…..!

ಗಿನ್ನೆಸ್​ ವಿಶ್ವ ದಾಖಲೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಬೇಕೆಂದು ಅನೇಕರು ವಿಚಿತ್ರವಾದ ಸಾಹಸಗಳನ್ನು ಮಾಡುತ್ತಾರೆ. ಆದರೆ ಎಂದಾದರೂ ಪಬ್​​ಗೆ ಭೇಟಿ ನೀಡಿ ವಿಶ್ವ ದಾಖಲೆ ನಿರ್ಮಿಸುವ ಬಗ್ಗೆ ಯೋಚಿಸಿದ್ದೀರೇ..? ಆದರೆ ಬ್ರಿಟೀಷ್​ ವ್ಯಕ್ತಿಯೊಬ್ಬ 9 ಗಂಟೆ ಅವಧಿಯಲ್ಲಿ 51 ಪಬ್​​ಗಳಿಗೆ ಭೇಟಿ ನೀಡುವ ಮೂಲಕ ಗಿನ್ನೆಸ್​ ದಾಖಲೆ ಪುಟಗಳಲ್ಲಿ ಹೆಸರು ನೋಂದಾಯಿಸಿದ್ದಾರೆ. ಪ್ರತಿಯೊಂದು ಪಬ್​ನಲ್ಲಿಯೂ ಮಾಟ್​ ಎಲ್ಲಿಸ್​​ 125 ಮಿ.ಲೀ ಡ್ರಿಂಕ್ಸ್​ ಕುಡಿದಿದ್ದಾರೆ.

ಜೈಲಿಗೆ ಹೋಗಲು ಕಾರಣವಾಯ್ತು ‘ಪೋರ್ನ್’ ಅಭ್ಯಾಸ, ಮಾಯಾಂಗನೆಯ ಮೋಹದ ಬಲೆಗೆ ಬಿದ್ದವ ಮಾಡಿದ್ದೇನು ಗೊತ್ತಾ…?

ವೈನ್​​ ಬ್ಯುಸಿನೆಸ್​ ನಡೆಸುವ ಮ್ಯಾಟ್​ಗೆ ಪಬ್​ಗಳು ಅಂದರೆ ಪಂಚಪ್ರಾಣವಂತೆ. ಹೀಗಾಗಿ ಜನರು ಸ್ಥಳೀಯ ಪಬ್​ಗಳಿಗೆ ತೆರಳಿ ಎಂಜಾಯ್​ ಮಾಡೋದನ್ನು ಉತ್ತೇಜಿಸಲಿಕ್ಕೋಸ್ಕರ ಈ ರೀತಿಯ ಸಾಧನೆ ಮಾಡಿದ್ದಾರಂತೆ. ಪ್ರತಿಯೊಂದು ಪಬ್​​ನಲ್ಲೂ ಮ್ಯಾಟ್​​ 4 ನಿಮಿಷ ಸಮಯ ವ್ಯಯಿಸಿದ್ದಾರೆ. ಹಾಗೂ ಅತ್ಯಂತ ಬೇಗನೇ ತಯಾರಿಸಲು ಆಗುವಂತಹ ಡ್ರಿಂಕ್​​ಗಳನ್ನೇ ಆರ್ಡರ್​ ಮಾಡಿದ್ದಾರೆ.

ಸಂಪೂರ್ಣ ಪಬ್​​ ಟೂರ್​ ಮುಗಿಸುವಷ್ಟರಲ್ಲಿ ಮ್ಯಾಟ್​ ಒಟ್ಟು 6.3 ಲೀಟರ್​​ ಪಾನೀಯಗಳನ್ನು ಸೇವನೆ ಮಾಡಿದ್ದರು. ತಮಗೆ ಹೊಟ್ಟೆಯಲ್ಲಿ ಕೇವಲ ನೀರೇ ತುಂಬಿದೆ ಎಂದು ಭಾಸವಾಗ್ತಿತ್ತು ಅಂತಾ ಮ್ಯಾಟ್​ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...