alex Certify 7 ವರ್ಷದ ಮಗನ ಗೇಮಿಂಗ್‌ ಹುಚ್ಚಿಗೆ ಕಾರು ಮಾರಿ ಬಿಲ್ ಕಟ್ಟಿದ ತಂದೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

7 ವರ್ಷದ ಮಗನ ಗೇಮಿಂಗ್‌ ಹುಚ್ಚಿಗೆ ಕಾರು ಮಾರಿ ಬಿಲ್ ಕಟ್ಟಿದ ತಂದೆ

UK Father Forced to Sell Car After Son Spends Rs 1.3 lakh on Apple iPhone Games

ಏಳು ವರ್ಷದ ಬಾಲಕನೊಬ್ಬ ಮೊಬೈಲ್ ಗೇಮ್ ಆಡುವ ತನ್ನ ಗೀಳಿನಿಂದ ಒಂದೇ ಒಂದು ಗಂಟೆಯಲ್ಲಿ $1800 (1.3 ಲಕ್ಷ ರೂಪಾಯಿ) ತೊಳೆದುಹಾಕಿದ್ದಾನೆ. ಈ ಬಾಲಕನ ಹುಚ್ಚಿನಿಂದಾಗಿ ಆತನ ತಂದೆ ತನ್ನ ಕಾರನ್ನು ಮಾರಬೇಕಾಗಿ ಬಂದಿದೆ.

ಆಪಲ್ ಐಫೋನ್‌ನಲ್ಲಿ ’ಡ್ರಾಗನ್ಸ್‌: ರೈಸ್ ಆಫ್ ಬರ್ಕ್’ ಹೆಸರಿನ ಈ ಗೇಮ್ ಆಡುವ ವೇಳೆ ಯುನೈಟೆಡ್‌ ಕಿಂಗ್‌ ಡಂ ನ ಅಶಾಜ಼್‌ ಮುತಾಸಾ ಹೆಸರಿನ ಈ ಬಾಲಕ ದುಬಾರಿ ಟಾಪ್‌ಅಪ್‌ಗಳನ್ನು ಪದೇ ಪದೇ ಮಾಡಿಸಿದ್ದಾನೆ. 1.99 ಪೌಂಡ್‌ನಿಂದ 99.99 ಪೌಂಡ್‌ಗಳವರೆಗೆ ವಿವಿಧ ಮುಖಬೆಲೆಯ ಟಾಪ್‌ಅಪ್‌ಗಳನ್ನು ಈ ಬಾಲಕ ಪದೇ ಪದೇ ಮಾಡಿರುವ ಕಾರಣ ಆತನ ತಂದೆಗೆ ಭಾರೀ ಹೊರೆ ಬಿದ್ದಿದೆ.

ಗರ್ಭಾವಸ್ಥೆಯಲ್ಲಿ ಕಾಡುವ ಗೊರಕೆ ಸಮಸ್ಯೆಗೆ ಇಲ್ಲಿದೆ ಪರಿಹಾರ

ತನಗಾಗಿ ಕಾಯುತ್ತಿದ್ದ 29 ಇ-ಮೇಲ್‌ಗಳನ್ನು ಚೆಕ್ ಮಾಡಿದ ಮೇಲೆ ತನ್ನ ಮಗ ಮಾಡಿರುವ ಅವಾಂತರದ ಬಗ್ಗೆ 41 ವರ್ಷದ ಮುಹಮ್ಮದ್‌ಗೆ ತಿಳಿದುಬಂದಿದೆ.

ಈ ಬಗ್ಗೆ ಆಪಲ್‌ಗೆ ದೂರು ಕೊಟ್ಟ ಮುಹಮ್ಮದ್ 207 ಪೌಂಡ್‌ಗಳ ರೀಫಂಡ್ ಪಡೆಯಲು ಸಫಲರಾಗಿದ್ದಾರೆ. ಆದರೂ ತಮ್ಮ ಮಗ ತಂದಿಟ್ಟ ಬಿಲ್ ಪಾವತಿ ಮಾಡಲು ತಮ್ಮ ಬಳಿ ಇದ್ದ ಟೊಯೋಟಾ ಆಯ್ಗೋ ಕಾರನ್ನು ಮಾರಬೇಕಾಗಿ ಬಂದಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...