alex Certify ಬಾರ್ ನಲ್ಲಿ ಬಿಯರ್ ಗ್ಲಾಸ್ ಒಡೆದು ಹಾಕಿತಾ ಪ್ರೇತ……? ವಿಡಿಯೋ ನೋಡಿದ್ರೆ ಬೆಚ್ಚಿಬೀಳ್ತೀರಾ……! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾರ್ ನಲ್ಲಿ ಬಿಯರ್ ಗ್ಲಾಸ್ ಒಡೆದು ಹಾಕಿತಾ ಪ್ರೇತ……? ವಿಡಿಯೋ ನೋಡಿದ್ರೆ ಬೆಚ್ಚಿಬೀಳ್ತೀರಾ……!

UK bar shares video of 'ghost' shattering beer glass. Spooky, says Internet - Trending News News

ಇತ್ತೀಚೆಗೆ ಯುಕೆಯ ಹೋಟೆಲ್ ವೊಂದರ ಕಾರ್ಯಕ್ರಮಕ್ಕೆ ತೆರಳಿದ್ದ ಅತಿಥಿಗಳಿಗೆ ಯಾರೋ ತಲೆಗೂದಲು ಎಳೆಯುವುದು, ಶಿಳ್ಳೆ ಹೊಡೆಯುವ ಶಬ್ಧ ಎಲ್ಲಾ ಕೇಳಿ ಬಂದಿರುವ ಸುದ್ದಿ ಭಾರಿ ವೈರಲ್ ಆಗಿತ್ತು. ಇದೀಗ ಯುಕೆಯ ಪಬ್ ವೊಂದರಲ್ಲಿ ಗ್ಲಾಸ್ ತನ್ನಿಂದಾನೆ ಕೌಂಟರ್‌ನಿಂದ ಬೀಳುತ್ತಿರುವ ವಿಡಿಯೋ ವೈರಲ್ ಆಗಿದೆ.

ಯುಕೆಯ ವಿಲ್ಟ್‌ಶೈರ್‌ನ ಸೌತ್ ವ್ರಾಕ್ಸಲ್‌ನಲ್ಲಿರುವ ಲಾಂಗ್ ಆರ್ಮ್ಸ್ ಬಾರ್ ನಲ್ಲಿ ಮೈ ಬೆವತಂತೆ ಆಗುವ ಭಯಾನಕ ವಿಡಿಯೋ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಲಾಂಗ್ ಆರ್ಮ್ಸ್ ಬಾರ್‌ ತನ್ನ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ವಿಡಿಯೋವು ಬಾರ್‌ನ ಒಂದು ಬದಿಯಲ್ಲಿ ನಿಂತಿರುವ ಮಹಿಳೆಯು ಇನ್ನೊಂದು ಬದಿಯಲ್ಲಿ ಕುಳಿತಿರುವ ವ್ಯಕ್ತಿಯೊಂದಿಗೆ ಮಾತನಾಡುವುದನ್ನು ತೋರಿಸುತ್ತದೆ. ಕೆಲವು ಸೆಕೆಂಡುಗಳಲ್ಲಿ  ಮಹಿಳೆ ಸ್ಥಳದಿಂದ ದೂರ ಹೋಗುತ್ತಾಳೆ. ಆದರೆ, ಇದ್ದಕ್ಕಿದ್ದಂತೆ  ಶೆಲ್ಫ್‌ನಲ್ಲಿ ಇರಿಸಲಾದ ಗಾಜು ತನ್ನಿಂದ ತಾನೇ ಬಿದ್ದು ಒಡೆದು ಹೋಗಿದೆ.

ರ‍್ಯಾಪರ್‌ ಆಗಿ ಮಿಂಚುತ್ತಿರುವ ರಿಕ್ಷಾ ಚಾಲಕನ ಪುತ್ರಿ

ಗಾಜು ಬಿದ್ದು ಒಡೆದಾಗ ಮಹಿಳೆ ಭಯದಿಂದ ಹೌಹಾರಿದ್ದಾಳೆ. ಇದೊಂದು ಪ್ರೇತದ ಉಪದ್ರವಿರಬಹುದು ಅಂತಾ ಬಾರ್ ಸಿಬ್ಬಂದಿಗಳು ಸಂಶಯಿಸಿದ್ದಾರೆ.

ವಿಡಿಯೋವನ್ನು ಸಾವಿರಾರು ಮಂದಿ ವೀಕ್ಷಿಸಿದ್ದು, ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ವರದಿಯ ಪ್ರಕಾರ, ಬಾರ್ ನಲ್ಲಿ ಈ ಹಿಂದೆಯೂ ಇಂತಹ ಅನೇಕ ಘಟನೆಗಳು ನಡೆದಿದೆಯಂತೆ. ಸಿಬ್ಬಂದಿಯೊಬ್ಬರು ಹೇಳಿರುವ ಪ್ರಕಾರ, ಕಿಚನ್ ಗೆ ತೆರಳಿದಾಗ ಇನ್ನೊಂದು ಬಾಗಿಲು ಕೂಡ ತನ್ನಿಂದ ತಾನೇ ತೆರೆಯುತ್ತದೆ. ಮತ್ತೆ ತನ್ನಿಂದ ತಾನೇ ಬಾಗಿಲು ಹಾಕಿಕೊಂಡ ಘಟನೆಗಳು ನಡೆದಿದೆ ಎಂದು ವಿವರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...