alex Certify ಜೂನ್ 13 ರಿಂದ 17ರವರೆಗೆ ಯುಜಿಸಿ ಎನ್ಇಟಿ ಪರೀಕ್ಷೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೂನ್ 13 ರಿಂದ 17ರವರೆಗೆ ಯುಜಿಸಿ ಎನ್ಇಟಿ ಪರೀಕ್ಷೆ

ನವದೆಹಲಿ: ಪದವಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರು, ಪ್ರಾಧ್ಯಾಪಕರಾಗಲು ನಡೆಸಲಾಗುವ ಅರ್ಹತಾ ಪರೀಕ್ಷೆ ಯುಜಿಸಿ ಎನ್ಇಟಿಗೆ ದಿನಾಂಕ ಪ್ರಕಟಿಸಲಾಗಿದೆ.

ಪ್ರಸಕ್ತ ಸಾಲಿನ ಯುಜಿಸಿ ಎನ್ಎಟಿ ಪರೀಕ್ಷೆ ಜೂನ್ 13 ರಿಂದ 17ರ ವರೆಗೆ ನಡೆಯಲಿದೆ. ಯುಜಿಸಿ ಎನ್ಎಟಿ ಪರೀಕ್ಷೆಯು ಜೂನಿಯರ್ ರೀಸರ್ಚ್ ಫೆಲೋಶಿಪ್ ಕೂಡ ಒಳಗೊಂಡಿದೆ. ಹೆಚ್ಚಿನ ಅಂಕ ಗಳಿಸಿದವರಿಗೆ ಮಾಸಿಕ ವೇತನಸಹಿತ ಸಂಶೋಧನೆ ನಡೆಸಲು ಅವಕಾಶ ನೀಡಲಾಗುವುದು. ಹೀಗಾಗಿ ಈ ಪರೀಕ್ಷೆ ತೆಗೆದುಕೊಳ್ಳುವ ಸ್ನಾತಕೋತ್ತರ ಪದವೀಧರರ ಸಂಖ್ಯೆ ಹೆಚ್ಚಾಗಿರುತ್ತದೆ.

ಅರ್ಜಿ ಮತ್ತು ಪರೀಕ್ಷಾ ಕೇಂದ್ರ ಸೇರಿದಂತೆ ಹೆಚ್ಚಿನ ವಿವರಗಳಿಗಾಗಿ ugcnet.nta.nic.in ವೆಬ್ಸೈಟ್ ಗಮನಿಸಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...