alex Certify ಪ್ರಯಾಣಿಕರಿಗೆ ತಿಳಿದಿರಲಿ ಉಬರ್‌ ಪರಿಚಯಿಸಿರುವ ಈ ವೈಶಿಷ್ಟ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಯಾಣಿಕರಿಗೆ ತಿಳಿದಿರಲಿ ಉಬರ್‌ ಪರಿಚಯಿಸಿರುವ ಈ ವೈಶಿಷ್ಟ್ಯತೆ

ಇನ್ನು ಮುಂದೆ ಉಬರ್ ಕ್ಯಾಬ್ ಗಳ ಚಾಲಕರಿಗೆ ಸ್ಥಳ ಮತ್ತು ಹಣ ಪಾವತಿಯ ಮಾದರಿಗಳು ಲಭ್ಯವಾಗಲಿವೆ. ಉಬರ್ ದೇಶದ 100 ಕ್ಕೂ ಹೆಚ್ಚು ನಗರಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆಯಾದರೂ, ಈ ಸೌಲಭ್ಯ ಸದ್ಯಕ್ಕೆ 20 ನಗರಗಳಲ್ಲಿ ಲಭ್ಯವಾಗಲಿದೆ. ಆದರೆ, ಈ ಸೌಲಭ್ಯವು ಪೂರ್ವ-ನಿರ್ಧರಿತ ಟ್ರಿಪ್ ಸ್ವೀಕಾರದ ಮಿತಿಯನ್ನು ಪೂರೈಸುವ ಚಾಲಕರಿಗೆ ಮಾತ್ರ ಲಭ್ಯವಾಗಲಿದೆ.

ಇದಲ್ಲದೇ, ಇನ್ನೂ ಕೆಲವು ವೈಶಿಷ್ಟ್ಯತೆಗಳನ್ನು ಪರಿಚಯಿಸುವ ಮೂಲಕ ಉಬರ್, ಗ್ರಾಹಕರಿಂದ ಬರುತ್ತಿರುವ ದೂರುಗಳ ಪ್ರಮಾಣವನ್ನು ತಗ್ಗಿಸುವ ಪ್ರಯತ್ನ ನಡೆಸಿದೆ.

ಮಲತಾಯಿಯನ್ನು ಮದುವೆಯಾದ ಪುತ್ರ; ದೂರು ದಾಖಲಿಸಿದ ಅಪ್ಪ

ಈ ಹೊಸ ವೈಶಿಷ್ಟ್ಯತೆಯಲ್ಲಿ ಚಾಲಕರು ಟ್ರಿಪ್ ಪೂರ್ಣಗೊಳ್ಳುವ ಮುನ್ನ ಗ್ರಾಹಕರು ಯಾವ ಮಾದರಿಯಲ್ಲಿ ಪಾವತಿ ಮಾಡುತ್ತಾರೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಇದರಿಂದ ಪಾವತಿ ಪ್ರಕ್ರಿಯೆಯಲ್ಲಿ ಆಗುವ ವಿಳಂಬವನ್ನು ಕಡಿಮೆ ಮಾಡುತ್ತದೆ. ಸೋಮವಾರದಿಂದ ಗುರುವಾರದವರೆಗೆ ಟ್ರಿಪ್ ಮುಗಿದ ಮರುದಿನವೇ ತಮ್ಮ ಪಾಲಿನ ಹಣವನ್ನು ಪಡೆದುಕೊಳ್ಳಬಹುದಾಗಿದೆ.

ಪ್ರಯಾಣಿಕರನ್ನು ದೂರದ ಸ್ಥಳದಿಂದ ಪಿಕಪ್ ಮಾಡುವ ಚಾಲಕರಿಗೆ ಹೆಚ್ಚುವರಿ ಗಳಿಕೆ ಹಣವನ್ನು ನೀಡುವ ವ್ಯವಸ್ಥೆಯನ್ನೂ ಜಾರಿಗೆ ತರಲಾಗಿದೆ. ಇದರಿಂದಾಗಿ ಚಾಲಕರು ಹೆಚ್ಚು ಹೆಚ್ಚು ಟ್ರಿಪ್ ಗಳನ್ನು ಪಡೆದುಕೊಂಡು ಹೆಚ್ಚು ಪ್ರಯೋಜನಗಳನ್ನು ಹೊಂದಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...