alex Certify ಪ್ರಯಾಣಿಕ ತೆಗೆದ ಕಾರಿನ ಬಾಗಿಲು ಬಡಿದಿದ್ದಕ್ಕೆ ಊಬರ್‌ ಕಂಪನಿಗೆ ದಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಯಾಣಿಕ ತೆಗೆದ ಕಾರಿನ ಬಾಗಿಲು ಬಡಿದಿದ್ದಕ್ಕೆ ಊಬರ್‌ ಕಂಪನಿಗೆ ದಂಡ

Uber suffers big setback! Court says drivers liable for safety if THIS happens | Tech News

ಕೆಲವೊಂದು ಸಲ ನ್ಯಾಯಾಲಯಗಳು ನೀಡುವ ತೀರ್ಪುಗಳು ಅನಿರೀಕ್ಷಿತವಾಗಿರುತ್ತವೆ. ಅದರಲ್ಲೂ ವಿದೇಶಗಳಲ್ಲಿ ಕೋರ್ಟ್‌ಗಳು ಹೀಗೂ ಜಡ್ಜ್‌ಮೆಂಟ್‌ ಕೊಡಬಹುದಾ ಎಂಬ ಪ್ರಶ್ನೆ ಮೂಡಿಸುತ್ತವೆ. ಇದಕ್ಕೆ ನಿದರ್ಶನ ಎಂಬಂತೆ ಅಮೆರಿಕದಲ್ಲೊಂದು ನ್ಯಾಯಾಲಯವು ನೀಡಿದ ತೀರ್ಪಿಗೆ ಬಹುತೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಊಬರ್‌ ಕಾರಿನಲ್ಲಿ ಕುಳಿತು ಪ್ರಯಾಣ ಬೆಳೆಸಿದ ಪ್ರಯಾಣಿಕರು ಬಾಗಿಲು ತೆಗೆದು ಇಳಿಯುವಾಗ, ಬಾಗಿಲು ಯಾರಿಗಾದರೂ ತಾಗಿದರೆ, ಅದರಿಂದ ಅವರಿಗೆ ಗಾಯಗಳಾದರೆ, ಅದಕ್ಕೆ ಊಬರ್‌ ಹಾಗೂ ಆ ಕಾರಿನ ಚಾಲಕನೇ ಹೊಣೆ ಎಂದು ತೀರ್ಪು ನೀಡಿದೆ. ಅಲ್ಲದೆ, ಇಂತಹುದೇ ಪ್ರಕರಣದಲ್ಲಿ ಊಬರ್‌ ಕಂಪನಿ ಹಾಗೂ ಕಾರಿನ ಚಾಲಕನನ್ನು ಹೊಣೆಯನ್ನಾಗಿ ಮಾಡಲಾಗಿದೆ.

ಇತಿಹಾಸ ನಿರ್ಮಿಸಿದ ಕಿವುಡ ನಟ ಟ್ರಾಯ್ ಕೋಟ್ಸೂರ್: ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡ ‘CODA’, ‘ಎನ್ಕಾಂಟೊ’

2017ರಲ್ಲಿ ವಿಲಿಯಂ ಮ್ಯಾಸನ್‌ ಎಂಬ ವ್ಯಕ್ತಿಯು ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಕಸದ ಟ್ರಕ್‌ನ ಹಿಂದೆ ನಿಂತಿದ್ದರು. ಇದೇ ವೇಳೆ ಊಬರ್‌ ಕಾರು ಬಂದು ಅವರ ಪಕ್ಕ ನಿಂತಿದ್ದು, ಒಳಗಿದ್ದ ಪ್ರಯಾಣಿಕರು ಬಾಗಿಲು ತೆರೆದಿದ್ದಾರೆ. ಆಗ ಪಕ್ಕದಲ್ಲೇ ನಿಂತಿದ್ದ ವಿಲಿಯಂ ಮ್ಯಾಸನ್‌ ಅವರಿಗೆ ಬಾಗಿಲು ತಾಗಿದ್ದು, ಕೆಳಗೆ ಬಿದ್ದು ಗಾಯಗೊಂಡಿದ್ದರು.

ಆದರೆ, ವಿಲಿಯಂ ಮ್ಯಾಸನ್‌ ಅವರು ಕಾರಿನ ಬಾಗಿಲು ತೆಗೆದ ಪ್ರಯಾಣಿಕರ ವಿರುದ್ಧ ಕೇಸ್‌ ದಾಖಲಿಸಿರಲಿಲ್ಲ. ಬದಲಾಗಿ, ತಾನು ನಿಂತಿದ್ದನ್ನೂ ಗಮನಿಸದೆ ಕಾರು ನಿಲ್ಲಿಸಿ, ಪ್ರಯಾಣಿಕರನ್ನು ಇಳಿಸಿದ ವಾಹನ ಚಾಲಕ ಹಾಗೂ ಕಂಪನಿ ವಿರುದ್ಧ ಕೇಸ್‌ ದಾಖಲಿಸಿದ್ದರು. ಅದರಂತೆ, ಇದು ಕಾರಿನ ಚಾಲಕ ಹಾಗೂ ಅದರ ಕಂಪನಿ ಊಬರ್‌ ಸಂಸ್ಥೆಯದ್ದೇ ನಿರ್ಲಕ್ಷ್ಯ ಎಂದು ಕ್ಯಾಲಿಫೋರ್ನಿಯಾ ಕೋರ್ಟ್‌ ತೀರ್ಪು ನೀಡಿದೆ. ಇದಕ್ಕೂ ಮೊದಲು ಮ್ಯಾಸನ್‌ ಅವರು ಅಧೀನ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತವಾಗಿತ್ತು. ಆದರೆ, ಆ ತೀರ್ಪನ್ನು ಅವರು ಪ್ರಶ್ನಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...