alex Certify 6,300 ಅಡಿಗಳ ಎತ್ತರದಿಂದ ಬಿದ್ದರೂ ಪವಾಡಸದೃಶ್ಯ ರೀತಿಯಲ್ಲಿ ಯುವತಿಯರು ಬಚಾವ್ ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

6,300 ಅಡಿಗಳ ಎತ್ತರದಿಂದ ಬಿದ್ದರೂ ಪವಾಡಸದೃಶ್ಯ ರೀತಿಯಲ್ಲಿ ಯುವತಿಯರು ಬಚಾವ್ ….!

WATCH: Two Women Fall Off Swing at 6,300 ft Cliff in Russia, Escape With Minor Injuries

ಮಾಸ್ಕೋ: ಅದೃಷ್ಟವಿದ್ದಲ್ಲಿ ಸಾಗರದಲ್ಲಿ ಬಿದ್ದರೂ ಈಜಿ ದಡ ಸೇರಬಹುದು ಎಂಬ ಮಾತಿದೆ. ಹಾಗೆಯೇ ಇಲ್ಲಿಬ್ಬರು ಯುವತಿಯರ ಅದೃಷ್ಟ ನೋಡಿ. 6,300 ಅಡಿಗಳ ಎತ್ತರದಿಂದ ಬಿದ್ದರೂ ಕೂಡ ಬದುಕುಳಿದಿರುವ ಎದೆ ಝಲ್ಲೆನಿಸುವ ಘಟನೆ ನಡೆದಿದೆ.

ರಷ್ಯಾದ ಕ್ಯಾಸ್ಪಿಟನ್ ಸಮುದ್ರದ ಬಳಿ ಈ ಘಟನೆ ನಡೆದಿದೆ. 6,300 ಅಡಿಯ ಬಂಡೆ ಮೇಲಿನಿಂದ ಒಂದು ದೊಡ್ಡದಾದ ಉಯ್ಯಾಲೆ ಕಟ್ಟಲಾಗಿದೆ. ಇದರಲ್ಲಿ ಕೂತಿದ್ದ ಇಬ್ಬರು ಯುವತಿಯರನ್ನು ಯುವಕನೊಬ್ಬ ತಳ್ಳುತ್ತಿದ್ದ. ಈ ವೇಳೆ ಏಕಾಏಕಿ ಜೋಕಾಲಿ ಕಟ್ ಆಗಿ ಯುವತಿಯರು ಕೆಳಗೆ ಬಿದ್ದಿದ್ದಾರೆ. ಅದೃಷ್ಟವಶಾತ್ ಸಣ್ಣ-ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

BIG NEWS: ದೆಹಲಿಗೆ ಹೋಗಿ 2000 ಕೋಟಿ ಕೊಡ್ತೀವಿ ನಮ್ಮನ್ನು ಸಿಎಂ ಮಾಡಿ ಅಂದಿದ್ರು; ಹೊಸ ಬಾಂಬ್ ಸಿಡಿಸಿದ ಯತ್ನಾಳ್

ಸುರಕ್ಷತಾ ಸಾಧನಗಳ ಅಸಮರ್ಪಕತೆಯಿಂದ ಈ ಅವಘಡ ಸಂಭವಿಸಿದೆ. ಈ ಎದೆ ಝಲ್ಲೆನಿಸುವ ದೃಶ್ಯದ ವಿಡಿಯೋವನ್ನು 1 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಇನ್ನು ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...