alex Certify ಮೈದುನನ ಮದುವೆಯಾಗಲು ಅತ್ತಿಗೆಯರ ಪೈಪೋಟಿ, ಹೊಡೆದಾಟ: ವಿಧವೆ ಅತ್ತಿಗೆ ವಿವಾಹವಾದ ಯುವಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೈದುನನ ಮದುವೆಯಾಗಲು ಅತ್ತಿಗೆಯರ ಪೈಪೋಟಿ, ಹೊಡೆದಾಟ: ವಿಧವೆ ಅತ್ತಿಗೆ ವಿವಾಹವಾದ ಯುವಕ

ಮೈದುನನ ಮದುವೆಯಾಗುವ ಆಸೆಯಿಂದ ಪೈಪೋಟಿಗೆ ಬಿದ್ದ ಇಬ್ಬರು ಮಹಿಳೆಯರು(ಅತ್ತಿಗೆಯರು) ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಬಿಹಾರದ ನಳಂದಾದಲ್ಲಿ ಘಟನೆ ನಡೆದಿದೆ.

ಇಬ್ಬರು ಅತ್ತಿಗೆಯರು ತಮ್ಮ ಮೈದುನನ ಮದುವೆಯಾಗಲು ಜಗಳವಾಡಿದ್ದು, ಪರಿಸ್ಥಿತಿ ಉಲ್ಬಣಗೊಂಡು ಇಬ್ಬರು ಮಹಿಳೆಯರ ತವರು ಮನೆಯವರು ಕೂಡ ಜಗಳದಲ್ಲಿ ಸೇರಿಕೊಂಡು ಪರಸ್ಪರ ದೊಣ್ಣೆಯಿಂದ ಹೊಡೆದಾಡಿಕೊಂಡಿದ್ದಾರೆ.

ನೋಡುಗರು ಈ ಘಟನೆಯನ್ನು ವಿಡಿಯೋದಲ್ಲಿ ಸೆರೆಹಿಡಿದಿದ್ದಾರೆ, ಅದು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದೆ.

ಹಿಲ್ಸಾ ಪಟ್ಟಣದಲ್ಲಿರುವ ಮಲಮಾ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಹರೇಂದ್ರ ಪಾಸ್ವಾನ್ ಅವರು ಮಲಮಾ ಗ್ರಾಮದ ನಿವಾಸಿಯಾಗಿದ್ದು, ಅವರ ಮೂವರು ಸಹೋದರರಲ್ಲಿ ಕಿರಿಯವರಾಗಿದ್ದಾರೆ. ದುರದೃಷ್ಟವಶಾತ್, ಅವರ ಹಿರಿಯ ಸಹೋದರರೊಬ್ಬರು ಕೆಲವು ತಿಂಗಳ ಹಿಂದೆ ನಿಧನರಾದರು. ಮೃತ ಅಣ್ಣನಿಗೆ ಮೂವರು ಮಕ್ಕಳಿದ್ದು, ಹರೇಂದ್ರ ತನ್ನ ದಿವಂಗತ ಅಣ್ಣನ ವಿಧವೆ ಪತ್ನಿಯನ್ನು ಮದುವೆಯಾಗುವುದು ಕುಟುಂಬದ ಉದ್ದೇಶವಾಗಿತ್ತು. ಆದಾಗ್ಯೂ, ಮಧ್ಯಮ ಸಹೋದರನ ಹೆಂಡತಿ ಈ ನಿರ್ಧಾರ ತಿಳಿದಾಗ, ಅವಳೂ ಹರೇಂದ್ರನನ್ನು ಮದುವೆಯಾಗುವುದಾಗಿ ಹೇಳಿದ್ದಾಳೆ. ಬಹುಶಃ ಆಸ್ತಿಯನ್ನು ಕಬಳಿಸುವ ಅವಳು ಆಮಿಷಕ್ಕೆ ಒಳಗಾಗಿದ್ದಾಳೆನ್ನಲಾಗಿದೆ.

ಇಬ್ಬರು ಸೊಸೆಯಂದಿರು ತಮ್ಮ ಮೈದುನನ ಹೆಂಡತಿಯಾಗಬೇಕೆಂಬ ಕೌಟುಂಬಿಕ ವಿಷಯ ಹೊಡೆದಾಟಕ್ಕೆ ಕಾರಣವಾಗಿದೆ. ಪರಿಣಾಮವಾಗಿ ಎರಡೂ ಬಣಗಳ ವ್ಯಕ್ತಿಗಳಿಗೆ ಗಾಯಗಳಾಗಿದ್ದು, ಅವರಲ್ಲಿ ಕೆಲವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿವಾದದ ಸುದ್ದಿ ಪೊಲೀಸರಿಗೆ ತಲುಪುತ್ತಿದ್ದಂತೆ, ಅವರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಹರೇಂದ್ರ ಮತ್ತು ಅವರ ದಿವಂಗತ ಅಣ್ಣನ ವಿಧವೆ ಪತ್ನಿಯ ನಡುವೆ ವಿವಾಹ ಸಮಾರಂಭವನ್ನು ಯಶಸ್ವಿಯಾಗಿ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...