ದಕ್ಷಿಣ ಕೆರೊಲಿನಾ ಕಡಲತೀರದಲ್ಲಿ ಅಪರೂಪದ ಎರಡು ತಲೆಯ ಸಮುದ್ರ ಆಮೆ ಕಾಣಸಿಕ್ಕಿದೆ. ಎರಡು ತಲೆಗಳನ್ನು ಹೊಂದಿರುವ ಕಡಲ ಆಮೆಯು ತೆವಳಲು ಹೆಣಗಾಡುತ್ತಿದ್ದುದನ್ನು ನೋಡಿದ ಕಾರ್ಮಿಕರಿಗೆ ಬಲು ಅಪರೂಪದ ಜೀವಿ ಕಾಣಿಸಿಕೊಂಡಿದೆ.
ವಾಡಿಕೆಯಂತೆ ಸಮುದ್ರ ಆಮೆ ಗೂಡಿನ ಪರಿಶೀಲನೆ ವೇಳೆ ಅಪರೂಪದ ಎರಡು ತಲೆಯುಳ್ಳ ಕಡಲ ಆಮೆ ಕಂಡುಬಂದಿದೆ. ದಕ್ಷಿಣ ಕೆರೊಲಿನಾ ಸ್ಟೇಟ್ ಪಾರ್ಕ್ಸ್ ಈ ಅಪರೂಪದ ಆಮೆಯ ಎರಡು ಚಿತ್ರಗಳನ್ನು ಹಂಚಿಕೊಂಡಿದೆ. 3 ರಿಂದ 5 ದಿನಗಳ ನಂತರ ಸಮುದ್ರ ಆಮೆ ಗೂಡಿನಲ್ಲಿ ಮೊಟ್ಟೆಯೊಡೆದ ಹಾಗೂ ಮೊಟ್ಟೆಯೊಡೆಯದ ಮೊಟ್ಟೆಗಳನ್ನು ಎಣಿಸುವ ಮೂಲಕ ಗೂಡನ್ನು ಅಗೆಯಲು ಮುಂದಾಗುತ್ತೇವೆ. ಕೆಲವು ಸಂದರ್ಭಗಳಲ್ಲಿ ಮೊಟ್ಟೆಯೊಡೆದು ಮರಿ ಹೊರಬರುವ ದೃಶ್ಯ ಕೂಡ ಕಾಣಸಿಗುತ್ತದೆ ಎಂದು ದಕ್ಷಿಣ ಕೆರೊಲಿನಾ ಸ್ಟೇಟ್ ಪಾರ್ಕ್ಸ್ ತಿಳಿಸಿದೆ.
ಸ್ವಯಂ ಸೇವಕರು ಕಡಲ ಆಮೆ ಮೊಟ್ಟೆ ಇಡುವುದನ್ನು ಗಮನಿಸುತ್ತಿದ್ದರು. ಈ ವೇಳೆ ಮೊಟ್ಟೆಯಿಂದೊಡೆದ ಎರಡು ತಲೆಯುಳ್ಳ ಆಮೆ ಕಾಣಿಸಿದೆ. ಕೂಡಲೇ ಈ ಅಪರೂಪದ ಆಮೆಯ ಫೋಟೋ ತೆಗೆದು ಬಳಿಕ ಅದನ್ನು ಸಾಗರಕ್ಕೆ ಬಿಡಲಾಯಿತು ಎಂದು ಕೆರೊಲಿನಾ ಪಾರ್ಕ್ಸ್ ಹೇಳಿದೆ.