alex Certify ಶಾಕಿಂಗ್ ನ್ಯೂಸ್: ಕೋವಿಡ್ ಲಸಿಕೆ ಪಡೆದಿದ್ದರೂ ಒಮಿಕ್ರಾನ್‌ಗೆ ತುತ್ತಾದ ವೈದ್ಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಕಿಂಗ್ ನ್ಯೂಸ್: ಕೋವಿಡ್ ಲಸಿಕೆ ಪಡೆದಿದ್ದರೂ ಒಮಿಕ್ರಾನ್‌ಗೆ ತುತ್ತಾದ ವೈದ್ಯರು

Daily Briefing Sept. 19 - Israel and FDA debate virus booster shot | The Times of Israelಒಮಿಕ್ರಾನ್ ರೂಪಾಂತರಿಯ ಮೊದಲ ಘಟನೆಯನ್ನು ಕಳೆದ ವಾರವಷ್ಟೇ ಪತ್ತೆ ಮಾಡಿದ ಇಸ್ರೇಲ್‌ನಲ್ಲಿ ಇಬ್ಬರು ವೈದ್ಯರು ಈ ಹೊಸ ಅವತಾರಿ ವೈರಾಣುವಿನ ಸೋಂಕಿಗೆ ಈಡಾಗಿದ್ದಾರೆ ಎಂದು ತಿಳಿದು ಬಂದಿದೆ.

ಈ ಇಬ್ಬರು ವೈದ್ಯರು ಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡೆದು, ಬೂಸ್ಟರ್‌ ಶಾಟ್‌ ಹಾಕಿಸಿಕೊಂಡಿದ್ದರೂ ಸಹ ಒಮಿಕ್ರಾನ್‌ ದಾಳಿಗೆ ಒಳಗಾಗಿದ್ದಾರೆ. ಇಬ್ಬರೂ ವೈದ್ಯರು ಒಂದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇಬ್ಬರಲ್ಲಿ ಒಬ್ಬರು ಲಂಡನ್‌ಗೆ ಭೇಟಿ ನೀಡಿದ್ದರು. ವಿಮಾನವೇರಿದ್ದಾಗ ನೆಗೆಟಿವ್‌ ಎಂದು ಕಂಡು ಬಂದ ಈ ವೈದ್ಯರಿಗೆ ಕೆಲ ದಿನಗಳ ಬಳಿಕ ರೋಗ ಲಕ್ಷಣಗಳು ಪತ್ತೆಯಾಗಿವೆ.

ಅದಾಗಲೇ ಒಮಿಕ್ರಾನ್‌ನ ನಾಲ್ಕು ಪ್ರಕರಣಗಳು ವರದಿಯಾಗಿರುವ ಇಸ್ರೇಲ್‌ನಲ್ಲಿ 10 ಮಂದಿಯನ್ನು ತೀವ್ರ ನಿಗಾದಲ್ಲಿ ಇರಿಸಲಾಗಿದೆ.

ಕೋವಿಡ್‌ನ ಹೊಸ ವೈರಾಣು ವಿರುದ್ಧ ಹೋರಾಟಕ್ಕೆ ನಿಂತಿರುವ ಇಸ್ರೇಲ್‌ ತನ್ನೆಲ್ಲಾ ಗಡಿಗಳನ್ನು ವಿದೇಶೀಯರಿಗೆ ಮುಚ್ಚಿದ್ದರೂ ಸಹ ಈ ಪ್ರಕರಣಗಳು ದಾಖಲಾಗಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...