alex Certify ಪ್ರಾಣಿ ಮಾಂಸಗಳ ಹೆಸರಿನ ಹಿಂದಿದೆ ಇಂಟ್ರೆಸ್ಟಿಂಗ್ ಸ್ಟೋರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಾಣಿ ಮಾಂಸಗಳ ಹೆಸರಿನ ಹಿಂದಿದೆ ಇಂಟ್ರೆಸ್ಟಿಂಗ್ ಸ್ಟೋರಿ…!

ಪ್ರತಿಯೊಂದು ವಸ್ತುವಿಗೂ ಒಂದೊಂದು ಹೆಸರಿದೆ ಎಂಬುದು ನಮ್ಮೆಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಆ ಹೆಸರುಗಳ ಹಿಂದೆ ಆಳವಾದ ಇತಿಹಾಸವೂ ಇರುತ್ತದೆ ಎಂದು ಬಹುತೇಕ ಬಾರಿ ನಾವು ಮನಗಾಣುವುದಿಲ್ಲ.

ವಿವಿಧ ಪ್ರಾಣಿಗಳ ಮಾಂಸಕ್ಕೆ ಇಂದಿನ ದಿನಗಳಲ್ಲಿ ಬಳಕೆಯಲ್ಲಿರುವ ಇಂಗ್ಲಿಷ್‌ನಲ್ಲಿ ಆ ಹೆಸರುಗಳೆಲ್ಲಾ ಹೇಗೆ ಬಂದವು ಎಂಬುದನ್ನು ಫ್ಲಾಯ್ಡ್‌ ಹೆಸರಿನ ಟ್ವಿಟ್ಟಿಗರೊಬ್ಬರು ವಿವರಿಸಿದ್ದಾರೆ.

ಹಂದಿಯ ಮಾಂಸವನ್ನು ಪಿಗ್ ಎನ್ನುವ ಬದಲಿಗೆ ಪೋರ್ಕ್ ಎನ್ನುವುದು ಏಕೆ, ಹಸುವಿನ ಮಾಂಸವನ್ನು ಬೀಫ್ ಎನ್ನುವುದು ಏಕೆ ಎಂದೆಲ್ಲಾ ವಿವರಿಸಿರುವ ಫ್ಲಾಯ್ಡ್‌, ಈ ವಿಚಾರವಾಗಿ ಕಳೆದ ಸಹಸ್ರಮಾನದ ಇತಿಹಾಸವನ್ನು ನಮ್ಮ ಮುಂದೆ ತೆರೆದಿಡುತ್ತಾರೆ.

ಯೂರೋಪ್‌ನಲ್ಲಿ ಸಾಮ್ರಾಜ್ಯ ವಿಸ್ತರಣೆಯ ತಿಕ್ಕಾಟದಲ್ಲಿದ್ದ ಇಬ್ಬರು ರಾಜರು ಈ ಹೆಸರುಗಳ ಹಿಂದೆ ಉಲ್ಲೇಖಿತರಾಗುತ್ತಾರೆ. 1066ರಲ್ಲಿ ಇಂಗ್ಲೆಂಡ್‌ನ ರಾಜ ಎಡ್ವರ್ಡ್ ಮೃತಪಟ್ಟಾಗ ಆತನ ಭಾಮೈದ ಹಾರೋಲ್ಡ್‌ ಗಾಡ್ವಿನ್ಸನ್ ಸಿಂಹಾಸನಾರೂಢನಾಗುತ್ತಾನೆ.

ಆದರೆ ಈತನ ಅಧಿಕಾರಾವಧಿಯಲ್ಲಿ ರಕ್ತಪಾತ ಜೋರಾಗಿ ನಡೆದು, ತನ್ನ ಸ್ವಂತ ಸಹೋದರ ಟೋಸ್ಟಿಗ್‌ನನ್ನು ಕದನಭೂಮಿಯಲ್ಲಿ ಎದುರಿಸುತ್ತಾನೆ ಹಾರೋಲ್ಡ್‌. ಮೊದಲಿಗೆ ತನ್ನ ಸಹೋದರನನ್ನು ಕದನದಲ್ಲಿ ಮಣಿಸುವ ಹಾರೋಲ್ಡ್‌, ಬಳಿಕ ನಾರ್ವೆಯ ಹರ್ದ್ರಾದಾನನ್ನು ಸ್ಟಾಂಫೋರ್ಡ್ ಸೇತುವೆಯ ಕದನದಲ್ಲಿ ಮಣಿಸುತ್ತಾನೆ.

ಮೆಚ್ಚಿನ ಗಾಯಕನಂತೆ ಕಾಣಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಯುವಕ

ಆದರೆ ಹಾರೋಲ್ಡ್‌ ದುರದೃಷ್ಟಕ್ಕೆ ನಾರ್ಮಂಡಿಯ ಡ್ಯೂಕ್ ವಿಲಿಯಮ್ ಹೇಸ್ಟಿಂಗ್ಸ್‌ನ ಕದನದಲ್ಲಿ ಆತನನ್ನು ಮಣಿಸಿ ಇಂಗ್ಲೆಂಡ್‌ನಲ್ಲಿ ಆಂಗ್ಲೋ-ಸಾಕ್ಸನ್ ಆಳ್ವಿಕೆಗೆ ಅಂತ್ಯ ಹಾಡುತ್ತಾನೆ. ಬಳಿಕ ಇಂಗ್ಲೆಂಡ್‌ನಲ್ಲಿ ನಾರ್ಮಲ್ ಆಳ್ವಿಕೆ ಆರಂಭಗೊಂಡು ವಿಲಿಯಮ್‌ನೊಂದಿಗೆ ಫ್ರೆಂಚ್‌‌ ಆಡಳಿತಗಾರರು ಹಾಗೂ ಶೆಫ್‌ಗಳು ಆಗಮಿಸುತ್ತಾರೆ.

ಹೊಸದಾಗಿ ಆಕ್ರಮಿಸಿಕೊಂಡ ಪ್ರಾಂತ್ಯದಲ್ಲಿ ಒಳ್ಳೆಯ ಆಹಾರ ಸವಿಯುತ್ತಾ ಇವರೆಲ್ಲರೂ ಸಖತ್‌ ಎಂಜಾಯ್ ಮಾಡುತ್ತಿರುತ್ತಾರೆ.

ಕಲಿಯುಗದಲ್ಲೂ ಸ್ವಯಂವರದಂತೆ ವಿವಾಹ ಬಂಧನಕ್ಕೊಳಗಾಗಿದೆ ಈ ಜೋಡಿ..!

ಆಡಳಿತ ಬದಲಾದರೂ ನೌಕರ ವರ್ಗದ ಮಂದಿ ಮಾತ್ರ ಇಂಗ್ಲಿಷ್ ಮಂದಿಯೇ ಆಗಿರುತ್ತಾರೆ. ಈ ಇಂಗ್ಲಿಷ್ ಮಂದಿ ಪ್ರಾಣಿಗಳನ್ನು ಬೇಟೆಯಾಡಿ ಆಳುವ ವರ್ಗಕ್ಕೆ ಪೂರೈಕೆ ಮಾಡುತ್ತಿರುತ್ತಾರೆ. ಆ ವೇಳೆ, ಬೇಟೆಯಾಡಿದ ಪ್ರಾಣಿಗಳ ಹೆಸರುಗಳನ್ನು ಇಂಗ್ಲಿಷ್‌ನಲ್ಲಿ ಸ್ವೀಕರಿಸಲು ಒಪ್ಪದ ಆಳುವ ವರ್ಗ, ಅವುಗಳಿಗೆ ಫ್ರೆಂಚ್‌ ಹೆಸರನ್ನೇ ಇಟ್ಟು, ಅವುಗಳನ್ನೇ ಅಧಿಕೃತವಾಗಿ ಮಾಡುತ್ತಾರೆ.

ಆಗಿನಿಂದ ಬಳಕೆಗೆ ಬಂದ ಪೋರ್ಕ್, ಬೋಯಿಫ್‌ ಎಂಬ ಹೆಸರುಗಳು ಕಾಲಾಂತರದಲ್ಲಿ ಜನರ ಬಾಯಿಗಳಲ್ಲಿ ಇಂದಿನ ಪೋರ್ಕ್, ಬೀಫ್‌ಗಳಾಗಿ ಮಾರ್ಪಾಡಾಗಿ ಬಳಕೆಯಲ್ಲಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...