alex Certify ಕಚೇರಿಗೆ ಟಾಯ್ಲೆಟ್​ ಪೇಪರ್​ ಖುದ್ದು ತರುತ್ತಿರುವ ಟ್ವಿಟರ್ ಉದ್ಯೋಗಿಗಳು…! ಇದರ ಹಿಂದಿದೆ ಈ ಕಾರಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಚೇರಿಗೆ ಟಾಯ್ಲೆಟ್​ ಪೇಪರ್​ ಖುದ್ದು ತರುತ್ತಿರುವ ಟ್ವಿಟರ್ ಉದ್ಯೋಗಿಗಳು…! ಇದರ ಹಿಂದಿದೆ ಈ ಕಾರಣ

ಉದ್ಯಮಿ ಎಲಾನ್​ ಮಸ್ಕ್​ ಟ್ವಿಟರ್​ ಸಂಸ್ಥೆಯನ್ನು ಸುಪರ್ದಿಗೆ ಪಡೆದ ನಂತರ ಬಹಳ ಕೋಲಾಹಲವೇ ಸೃಷ್ಟಿಯಾಗಿದೆ. ಟ್ವಿಟರ್​ನ ಅಸಂಖ್ಯ ಉದ್ಯೋಗಿಗಳನ್ನು ಮಸ್ಕ್​ ತೆಗೆದು ಭಾರಿ ವಿವಾದಕ್ಕೀಡಾಗಿರುವ ನಡುವೆಯೇ ಈತ ಮತ್ತೊಂದು ಸುದ್ದಿ ಹೊರಬಂದಿದೆ.

ಅದೇನೆಂದರೆ ಟ್ವಿಟರ್ ಸಂಸ್ಥೆಯಲ್ಲಿ ಕೆಲಸ ಮಾಡುವ ನೌಕರರು ಸ್ವಂತ ಟಾಯ್ಲೆಟ್ ಪೇಪರ್ ತಂದು ಕಚೇರಿಯಲ್ಲಿ ಬಳಸುತ್ತಿದ್ದಾರೆ !

ಇದಕ್ಕೆ ಕಾರಣವೇನೆಂದರೆ, ಕೆಲಸ ಕಳೆದುಕೊಂಡ ಉದ್ಯೋಗಿಗಳಲ್ಲಿ ಹೌಸ್​ ಕೀಪಿಂಗ್​ ಸಿಬ್ಬಂದಿ ಹಾಗೂ ಸ್ವಚ್ಛತಾ ಕಾರ್ಮಿಕರೂ ಸೇರಿದ್ದಾರೆ. ಆದ್ದರಿಂದ ಟಾಯ್ಲೆಟ್ ಪೇಪರ್ ಖರೀದಿ ಮಾಡುತ್ತಿಲ್ಲ.

ಸಾಲದು ಎಂಬುದಕ್ಕೆ ಟಾಯ್ಲೆಟ್​ ಕ್ಲೀನ್​ ಮಾಡಲು ಕೆಲಸವರು ಇಲ್ಲದೇ ಅಲ್ಲಿ ವಾಸನೆ ಬರುತ್ತಿರುವುದರಿಂದ ಟಾಯ್ಲೆಟ್​ ಪೇಪರ್​ಗಳನ್ನು ಖುದ್ದು ತರುತ್ತಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಟ್ವಿಟರ್​ ಸಂಸ್ಥೆ ಭಾರಿ ಟ್ರೋಲ್​ಗೆ ಒಳಗಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...