alex Certify BREAKING: ಬೆಳ್ಳಂಬೆಳಿಗ್ಗೆ ಕೈ ಕೊಟ್ಟ ಟ್ವಿಟ್ಟರ್‌ – ಸೇವೆಯಲ್ಲಿ ಏಕಾಏಕಿ ವ್ಯತ್ಯಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಬೆಳ್ಳಂಬೆಳಿಗ್ಗೆ ಕೈ ಕೊಟ್ಟ ಟ್ವಿಟ್ಟರ್‌ – ಸೇವೆಯಲ್ಲಿ ಏಕಾಏಕಿ ವ್ಯತ್ಯಯ

ಕೆಲ ದಿನಗಳಿಂದ ಸಾಮಾಜಿಕ ಜಾಲತಾಣಗಳು ಹಠಾತ್‌ ಸ್ಥಗಿತಗೊಳ್ಳುತ್ತಿರುವ ಘಟನೆಗಳು ಆಗಾಗ ನಡೆಯುತ್ತಲೇ ಇದೆ. ಈ ಹಿಂದೆ ವಾಟ್ಸಾಪ್‌, ಫೇಸ್‌ ಬುಕ್‌, ಇನ್‌ ಸ್ಟಾಗ್ರಾಂ ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಏಕಾಏಕಿ ಸ್ಥಗಿತಗೊಂಡಿದ್ದು, ಬಳಿಕ ಸರಿಪಡಿಸಲಾಗಿತ್ತು.

ಮಂಗಳವಾರದಂದು ಟೆಕ್‌ ದೈತ್ಯ ಗೂಗಲ್‌ ಒಡೆತನದ ಜಿ ಮೇಲ್‌ ಸೇವೆಯಲ್ಲಿ ವ್ಯತ್ಯಯವಾಗಿ ಬಳಿಕ ಸರಿಯಾಗಿತ್ತು.

ಇದೀಗ ಮತ್ತೊಂದು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ ಸರದಿಯಾಗಿದ್ದು, ಇಂದು ಬೆಳಿಗ್ಗೆ ಭಾರತದ ವಿವಿಧೆಡೆ ಟ್ವಿಟ್ಟರ್‌ ಸೇವೆಯಲ್ಲಿ ವ್ಯತ್ಯಯವಾಗಿದೆ. ಆದರೆ ಇದಕ್ಕೆ ಕಾರಣವೇನೆಂಬುದರ ಕುರಿತು ಟ್ವಿಟ್ಟರ್‌ ಸಂಸ್ಥೆ ಯಾವುದೇ ಮಾಹಿತಿ ನೀಡಿಲ್ಲ. ಆದರೆ ಎಲ್ಲ ಬಳಕೆದಾರರಿಗೂ ಈ ಸಮಸ್ಯೆ ಎದುರಾಗಿಲ್ಲವೆಂದು ಹೇಳಲಾಗಿದೆ.

ಟ್ವಿಟ್ಟರ್‌ ಬಳಕೆದಾರರು ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಟ್ವಿಟ್ಟರ್‌ ವ್ಯತ್ಯಯವಾಗಿದ್ದ ವಿಚಾರವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ Downdetector ಸಹ ಟ್ವಿಟ್ಟರ್‌ ಸೇವೆಯಲ್ಲಿ ವ್ಯತ್ಯಯವಾಗಿರುವುದನ್ನು ಖಚಿತಪಡಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...