alex Certify BIG NEWS: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಟ್ವಿಟರ್​ ಖಾತೆಯ ಬ್ಲೂ ಮಾರ್ಕ್ ಮರುಸ್ಥಾಪಿಸಿದ ಟ್ವಿಟರ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಟ್ವಿಟರ್​ ಖಾತೆಯ ಬ್ಲೂ ಮಾರ್ಕ್ ಮರುಸ್ಥಾಪಿಸಿದ ಟ್ವಿಟರ್​..!

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಟ್ವಿಟರ್​ ಖಾತೆಯಲ್ಲಿದ್ದ ಬ್ಲೂ ಟಿಕ್​ನ್ನು ಟ್ವಿಟರ್​ ತೆಗೆದು ಹಾಕಿದ್ದು ಭಾರೀ ಸಂಚಲನಕ್ಕೆ ಕಾರಣವಾದ ಬೆನ್ನಲ್ಲೇ ಇದೀಗ ನೀಲಿ ಬಣ್ಣದ ಟಿಕ್​ನ್ನು ಪುನಃ ನೀಡಿದೆ.

ಶನಿವಾರ ಬೆಳಗ್ಗೆ ವೆಂಕಯ್ಯ ನಾಯ್ಡು ಅವರ ಅಧಿಕೃತ ಖಾತೆಯಿಂದ ನೀಲಿ ಟಿಕ್​ನ್ನು ಅಳಿಸಿ ಹಾಕಿತ್ತು. ಆದರೆ ವೈಸ್​ ಪ್ರೆಸಿಡೆಂಟ್​ ಆಫ್​ ಇಂಡಿಯಾ ಎಂಬ ಕಚೇರಿಯ ಟ್ವಿಟರ್​ ಖಾತೆಯಲ್ಲಿ ನೀಲಿ ಬಣ್ಣದ ಟಿಕ್​ ಹಾಗೆಯೇ ಉಳಿದಿತ್ತು.

ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಉಪರಾಷ್ಟ್ರಪತಿ ಕಚೇರಿ ಸಿಬ್ಬಂದಿ, ವೆಂಕಯ್ಯ ನಾಯ್ಡು ಅವರ ಅಧಿಕೃತ ಖಾತೆ ಕಳೆದ ಆರು ತಿಂಗಳಿನಿಂದ ಬಳಕೆಯಲ್ಲಿ ಇರಲಿಲ್ಲ. ಇದೇ ಕಾರಣಕ್ಕೆ ನೀಲಿ ಬಣ್ಣದ ಮಾರ್ಕ್​ನ್ನು ತೆಗೆದು ಹಾಕಿದ್ದಿರಬಹುದು ಎಂದು ಹೇಳಿದ್ದರು. ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಖಾತೆಯಿಂದ ಕೊನೆಯ ಬಾರಿಗೆ ಕಳೆದ ವರ್ಷ ಜುಲೈ 23ರಲ್ಲಿ ಟ್ವೀಟ್​ ಮಾಡಲಾಗಿದೆ.

ಸೆಲೆಬ್ರಿಟಿಗಳು, ರಾಜಕಾರಣಿಗಳು ಸೇರಿದಂತೆ ಸಮಾಜದಲ್ಲಿ ಗಣ್ಯ ಸ್ಥಾನದಲ್ಲಿರುವ ವ್ಯಕ್ತಿಗಳ ಟ್ವಿಟರ್​ ಖಾತೆ ಅಧಿಕೃತವಾದದ್ದು ಎಂದು ಸೂಚಿಸಲು ಈ ರೀತಿಯ ಬ್ಲೂ ಟಿಕ್​ನ್ನು ನೀಡಲಾಗುತ್ತದೆ. ಆದರೆ ಇಂದು ಬೆಳಗ್ಗೆ ದೇಶದ ಎರಡನೇ ಉನ್ನತ ಹುದ್ದೆಯಲ್ಲಿರುವ ವೆಂಕಯ್ಯ ನಾಯ್ಡು ಅವರ ಟ್ವಿಟರ್​​ ಖಾತೆಯ ಬ್ಲೂ ಮಾರ್ಕ್​ ಅಳಿಸಿ ಹೋಗಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...