alex Certify ಟಿವಿಎಸ್‌ ಮೋಟರ್‌ – ಸ್ವಿಗ್ಗಿ ನಡುವೆ ಒಪ್ಪಂದ, ಫುಡ್‌ ಡೆಲಿವರಿಗೆ ಎಲೆಕ್ಟ್ರಿಕ್‌ ವಾಹನ ಬಳಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿವಿಎಸ್‌ ಮೋಟರ್‌ – ಸ್ವಿಗ್ಗಿ ನಡುವೆ ಒಪ್ಪಂದ, ಫುಡ್‌ ಡೆಲಿವರಿಗೆ ಎಲೆಕ್ಟ್ರಿಕ್‌ ವಾಹನ ಬಳಕೆ

ದೇಶದಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಉತ್ಪಾದನೆಯಲ್ಲಿ ಖ್ಯಾತಿ ಗಳಿಸಿರುವ ಟಿವಿಎಸ್‌ ಮೋಟರ್‌ ಕಂಪನಿಯು ಆಹಾರ ಸರಬರಾಜು ಸಂಸ್ಥೆ ’’ಸ್ವಿಗ್ಗಿ’’ ಜತೆ ಕೈಜೋಡಿಸಿದ್ದು, ವಿದ್ಯುತ್‌ ಚಾಲಿತ ದ್ವಿಚಕ್ರ ವಾಹನಗಳ (ಇವಿ) ಮೂಲಕ ದೇಶಾದ್ಯಂತ ಕ್ಷಿಪ್ರವಾಗಿ ಫುಡ್‌ ಡೆಲಿವರಿ ಮಾಡುವ ದಿಸೆಯಲ್ಲಿ ಒಪ್ಪಂದ ಮಾಡಿಕೊಂಡಿವೆ ಎಂದು ತಿಳಿದುಬಂದಿದೆ.

ಆಹಾರ ಪೂರೈಕೆಯಲ್ಲಿ ಸುಸ್ಥಿರ ಸಾಧನೆ ಹಾಗೂ ಇದಕ್ಕಾಗಿ ವಿದ್ಯುತ್‌ಚಾಲಿತ ವಾಹನಗಳ ಗರಿಷ್ಠ ಬಳಕೆಯನ್ನು ದೃಢಪಡಿಸಿಕೊಳ್ಳಲು ಉಭಯ ಕಂಪನಿಗಳು ಒಪ್ಪಂದ ಮಾಡಿಕೊಂಡಿವೆ. ಸ್ವಿಗ್ಗಿಯು ಮತ್ತಷ್ಟು ವೇಗವಾಗಿ ಆಹಾರ ಪೂರೈಸುವ ಗುರಿ ನಿಗದಿಪಡಿಸಿಕೊಂಡಿದ್ದರೆ, ಅದಕ್ಕೆ ವಿದ್ಯುತ್‌ಚಾಲಿತ ವಾಹನಗಳನ್ನು ನೀಡುವ ಮೂಲಕ ಕ್ಷಿಪ್ರವಾಗಿ ಗ್ರಾಹಕರಿಗೆ ತಲುಪಿಸಲು ಟಿವಿಎಸ್‌ ಮೋಟರ್ಸ್‌ ಕಂಪನಿ ನೆರವಾಗಲಿದೆ.

ಓಲಾ ಇವಿ ಸ್ಕೂಟರ್‌: 4,000 ಯೂನಿಟ್ ಪೈಕಿ ಡೆಲಿವರಿ ಆಗಿದ್ದು ಕೇವಲ 238 ಮಾತ್ರ….!

ದೇಶದ ನಗರ ಹಾಗೂ ಪಟ್ಟಣಗಳಲ್ಲಿ ಪ್ರತಿಯೊಂದು ಮನೆಗೂ ಆಹಾರ ಸರಬರಾಜು ಮಾಡುವ ಹಾಗೂ ಇದಕ್ಕಾಗಿ ವಿದ್ಯುತ್‌ಚಾಲಿತ ವಾಹನಗಳನ್ನೇ ಬಳಸುವ ಮೂಲಕ ಸುಸ್ಥಿರ ಇ-ಮೊಬಿಲಿಟಿ ವ್ಯವಸ್ಥೆ ರೂಪಿಸುವುದು ಉದ್ದೇಶವಾಗಿದೆ. ಗ್ರಾಹಕರು ಹಾಗೂ ಪರಿಸರದ ದೃಷ್ಟಿಯಿಂದ ಉಭಯ ಸಂಸ್ಥೆಗಳು ಕೈಜೋಡಿಸಿವೆ ಎಂದು ಟಿವಿಎಸ್‌ ಮೋಟರ್ಸ್‌ ಕಂಪನಿ (ಫ್ಯೂಚರ್‌ ಮೊಬಿಲಿಟಿ) ಉಪಾಧ್ಯಕ್ಷ ಮನು ಸಕ್ಸೇನಾ ತಿಳಿಸಿದ್ದಾರೆ.

ಟಿವಿಎಸ್‌ ಕಂಪನಿಯು ದೇಶದಲ್ಲಿ ವಿದ್ಯುತ್‌ಚಾಲಿತ ವಾಹನಗಳ ಉತ್ಪಾದನೆ ಹೆಚ್ಚಿಸುತ್ತಿದ್ದು, ಬೆಂಗಳೂರು, ದೆಹಲಿ, ಚೆನ್ನೈ, ಪುಣೆ, ಕೊಚ್ಚಿ, ಕೊಯಮತ್ತೂರು ಸೇರಿ 33 ಪ್ರಮುಖ ನಗರಗಳಲ್ಲಿ ಇದೇ ಕಂಪನಿಯ ಎಲೆಕ್ಟ್ರಿಕ್‌ ವಾಹನಗಳು ಓಡಾಡುತ್ತಿವೆ. ಅತ್ತ, 2025ರ ವೇಳೆಗೆ ವಿದ್ಯುತ್‌ಚಾಲಿತ ವಾಹನಗಳ ಮೂಲಕ 8 ಲಕ್ಷ ಕಿ.ಮೀ.ವರೆಗೆ ಆಹಾರ ಪೂರೈಸುವ ಗುರಿಯನ್ನು ಸ್ವಿಗ್ಗಿ ಹೊಂದಿದೆ. ಡಾಮಿನೊಸ್‌ ಪಿಜ್ಜಾ ಡೆಲಿವರಿಗೆ ಸದ್ಯ ಬಹುತೇಕವಾಗಿ ಬಳಸಲಾಗುತ್ತಿರುವುದು ಆಂಪೀರ್‌ ಎಲೆಕ್ಟ್ರಿಕ್‌ ವಾಹನಗಳ ತಯಾರಿಕೆ ಸಂಸ್ಥೆಯ ’’ಝೀಲ್‌’’ ಮಾಡೆಲ್‌ ಸ್ಕೂಟರ್‌ಗಳನ್ನು ಎನ್ನುವುದು ಗಮನಾರ್ಹ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...