alex Certify ಹೂಸಿನಿಂದಲೇ ವಾರಕ್ಕೆ 38 ಲಕ್ಷ ರೂಪಾಯಿ ಸಂಪಾದಿಸುತ್ತಿದ್ದಾಳೆ ಯುವತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೂಸಿನಿಂದಲೇ ವಾರಕ್ಕೆ 38 ಲಕ್ಷ ರೂಪಾಯಿ ಸಂಪಾದಿಸುತ್ತಿದ್ದಾಳೆ ಯುವತಿ

ಕಲಿಗಾಲ ಅದ್ಯಾವ ಮಟ್ಟಿಗೆ ವಿಚಿತ್ರ ಹಾಗೂ ವಕ್ರತೆಗಳಿಂದ ತುಂಬಿದೆ ಎಂದರೆ, ’ಕಲಿಗಾಲ ಎಕ್ಕುಟ್ಟೋಗಿದೆ’ ಎಂದು ಮನದಲ್ಲಿ ಫಿಕ್ಸ್ ಆಗಿಯೇ ಜಗತ್ತನ್ನು ನೋಡಿದರೂ ಸಹ ಗಾಬರಿ ಬೀಳುವಷ್ಟು ಮಟ್ಟಿಗೆ ಚಿತ್ರವಿಚಿತ್ರ ಘಟನಾವಳಿಗಳು ನಡೆಯುತ್ತಲೇ ಇರುತ್ತವೆ.

ಟಿವಿ ರಿಯಾಲಿಟಿ ಶೋ ತಾರೆಯೊಬ್ಬಳು ತನ್ನ ಹೂಸನ್ನು ಜಾರುಗಳಿಗೆ ತುಂಬಿ ಅನಾಮಿಕರಿಗೆ ಮಾರುವ ಮೂಲಕ ವಾರಕ್ಕೆ $50,000 (38 ಲಕ್ಷ ರೂಪಾಯಿ) ಸಂಪಾದನೆ ಮಾಡುತ್ತಿದ್ದಾಳೆ.

ತನ್ನ ಹೂಸಿನಿಂದ ಬರುವ ವಾಸನೆಯನ್ನು ಹೀರಿಕೊಳ್ಳಲೆಂದು ಜಾರಿನಲ್ಲಿ ಎರಡು ಗುಲಾಬಿ ದಳಗಳನ್ನು ಇಡುವ ಸ್ಟೆಫಾನೀ ಮಟ್ಟೋ ಹೆಸರಿನ ಈಕೆ ಅವುಗಳನ್ನು ಮಾರುತ್ತಿದ್ದಾಳೆ. ಈ ಜಾರುಗಳನ್ನು ಕೋರಿ ಬಹಳಷ್ಟು ಸಂದೇಶಗಳು ಇನ್‌ಸ್ಟಾಗ್ರಾಂನಲ್ಲಿರುವ ತನ್ನ ಇನ್‌ಬಾಕ್ಸ್‌ಗೆ ಬರುತ್ತವೆ ಎಂದಿದ್ದಾಳೆ ಈಕೆ.

BIG NEWS: ಪಾದಯಾತ್ರೆಗೆ ಸಜ್ಜಾದ ಯುವ ಕಾಂಗ್ರೆಸ್; ಜಾರಕಿಹೊಳಿ ಸಿಡಿ ಕೇಸ್; ನಿಲುವಳಿ ಸೂಚನೆ ಮಂಡಿಸಲು ಸಿದ್ಧತೆ ನಡೆಸಿದ ಕೈ ಪಾಳಯ

“ಕಳೆದ ಕೆಲ ವರ್ಷಗಳಿಂದ ನಾನು ಧರಿಸಿದ ಬ್ರಾ, ಪ್ಯಾಂಟಿ, ಕೂದಲು ಹಾಗೂ ನಾನು ಸ್ನಾನ ಮಾಡಿದ ನೀರನ್ನು ಕೇಳಿಕೊಂಡು ಪುರುಷರು ಹಾಗೂ ಮಹಿಳೆಯರಿಂದ ಬಹಳಷ್ಟು ಸಂದೇಶಗಳು ಬಂದಿವೆ,” ಎನ್ನುತ್ತಾಳೆ ಸ್ಟೆಫಾನಿ.

ಈ ರೀತಿಯ ಸಂಪಾದನೆ ಮಾಡುತ್ತಿರುವ ಮತ್ತೊಬ್ಬ ಮಹಿಳೆ ಲಶ್ ಬಟಾನಿಸ್ಟ್‌. ಕ್ಯಾಮೆರಾ ಮುಂದೆ ಹೂಸು ಬಿಡು ಎಂದು ಆನ್ಲೈನ್‌ನಲ್ಲಿ ಕೆಲವರು ಕೇಳಿದ ಬಳಿಕ ಆಕೆ ಇದನ್ನೇ ಮಾಡಿಕೊಂಡು ದುಡ್ಡು ಸಂಪಾದನೆ ಮಾಡುತ್ತಿದ್ದಾಳೆ. ಇದಾದ ಬಳಿಕ ಈ ಖಯಾಲಿಯನ್ನು ಬೇರೊಂದು ಮಟ್ಟಕ್ಕೆ ಕೊಂಡೊಯ್ದ ಲಶ್‌, ಜಾರುಗಳಲ್ಲಿ ತನ್ನ ಹೂಸು ವಾಸನೆ ತುಂಬಿ ಗಿರಾಕಿಗಳಿಗೆ ಮಾರಿಕೊಂಡು ಬರುತ್ತಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...