alex Certify 1.4 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಳಿಸಿದೆ ಈ ತಾಯಿ-ಮಗಳ ಉಲ್ಲಾಸದ ವಿಡಿಯೋ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

1.4 ದಶಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಳಿಸಿದೆ ಈ ತಾಯಿ-ಮಗಳ ಉಲ್ಲಾಸದ ವಿಡಿಯೋ….!

ರಾತ್ರಿ ವೇಳೆ ನೀವು ವಿಹಾರಕ್ಕೆ ಹೋಗಿದ್ದರೆ ಎಂದಾದರೂ ಫ್ಯಾಶನ್ ಉಡುಪನ್ನು ಧರಿಸಿದ್ದೀರಾ..? ಈ ವೇಳೆ ಶೀತ ಚಳಿ ಗಾಳಿಗೆ ಥರಥರ ನಡುಗುವಂತೆ ಆಗಿದ್ಯಾ..? ಇಂಥ ಪ್ರಸಂಗ ಯುವತಿಯೊಬ್ಬಳಿಗೆ ಬಂದಿದೆ. ಅದಕ್ಕೆ ತಾಯಿ ಕೊಟ್ಟಿರುವ ಉತ್ತರ ಭಾರಿ ವೈರಲ್ ಆಗಿದೆ.

ಹೌದು, ಚಳಿಯಿಂದ ತನ್ನನ್ನು ರಕ್ಷಿಸಿಕೊಳ್ಳಲು ದುಪ್ಪಟ್ಟಾ ಕೇಳಿದ ಮಗಳಿಗೆ ದೇಸಿ ತಾಯಿಯೊಬ್ಬರು ಉತ್ತರ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಮೇಕಪ್ ಆರ್ಟಿಸ್ಟ್ ಯಶ್ನಾ ಹಂಡಾ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕಾಡೆಮ್ಮೆ ಮೇಲೆ ಹಲ್ಲೆ ಮಾಡಿದ ಕ್ರೂರಿ; ನೆಟ್ಟಿಗರ ವ್ಯಾಪಕ ಖಂಡನೆ

ಯುವತಿ ಹಾಗೂ ಆಕೆಯ ತಾಯಿ ಓಪನ್ ರೆಸ್ಟೋರೆಂಟ್‌ನಲ್ಲಿ ಒಟ್ಟಿಗೆ ಕುಳಿತಿದ್ದಾರೆ. ಮಾಡರ್ನ್ ಡ್ರೆಸ್ ಧರಿಸಿದ್ದ ಯಶ್ನಾಗೆ ಚಳಿ ತಡೆಯಲಾಗಿಲ್ಲ. ಹೀಗಾಗಿ ತನ್ನ ತಾಯಿಯ ದುಪ್ಪಟ್ಟವನ್ನು ಕೇಳಿ ಅದನ್ನು ಬೆಚ್ಚಗೆ ಸುತ್ತಿಕೊಂಡಿದ್ದಾಳೆ. ಅದಕ್ಕೆ ಅವಳ ತಾಯಿ, ನೀವೆಲ್ಲಾ ತರುಣಿಯಂತೆ ಸಿದ್ಧವಾಗಿ ಬರುತ್ತೀರಿ. ಆದ್ರೆ ನಿಮಗೆ ನಿಮ್ಮ ತಾಯಿಯ ಶಾಲು ಬೇಕು ಅಲ್ವಾ..? ಅಂತಾ ತನ್ನ ಮಗಳಿಗೆ ಹೇಳಿದ್ದಾರೆ.

ತಾಯಿಯ ಮಾತು ಕೇಳಿ ಚಳಿಯಲ್ಲಿ ಗಡಗಡ ನಡುಗುತ್ತಲೂ ಪುತ್ರಿ ಯಶ್ನಾ ಜೋರಾಗಿ ನಕ್ಕಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, 1.4 ದಶಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ನೆಟ್ಟಿಗರು ಕೂಡ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...