alex Certify ಪೋಷಕರೇ ಹುಷಾರ್​…! ಹಾಸನದಲ್ಲಿ ವಿದ್ಯಾರ್ಥಿಗಳ ಮೇಲೆ ಸದ್ದಿಲ್ಲದೇ ನಡೆಯುತ್ತಿದೆ ಮತಾಂತರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೋಷಕರೇ ಹುಷಾರ್​…! ಹಾಸನದಲ್ಲಿ ವಿದ್ಯಾರ್ಥಿಗಳ ಮೇಲೆ ಸದ್ದಿಲ್ಲದೇ ನಡೆಯುತ್ತಿದೆ ಮತಾಂತರ

ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ತರಲು ಸರ್ಕಾರ ಯೋಚನೆ ನಡೆಸುತ್ತಿರುವ ಬೆನ್ನಲ್ಲೇ ವಿದ್ಯಾರ್ಥಿಗಳನ್ನೇ ಟಾರ್ಗೆಟ್​ ಮಾಡಿ ಮತಾಂತರಕ್ಕೆ ಯತ್ನಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳನ್ನು ಪುಸಲಾಯಿಸಿ ಮತಾಂತರಕ್ಕೆ ಮುಂದಾಗಿದ್ದವರನ್ನು ಸಾರ್ವಜನಿಕರೇ ಹಿಡಿದ ಘಟನೆ ಹಾಸನದ ಮಹಾರಾಜ ಪಾರ್ಕ್​ನಲ್ಲಿ ನಡೆದಿದೆ. ಪಾರ್ಕ್​ನಲ್ಲಿ ಕುಳಿತುಕೊಳ್ಳಲು ಬರುವ ವಿದ್ಯಾರ್ಥಿಗಳನ್ನೇ ಟಾರ್ಗೆಟ್​ ಮಾಡಿ ಮತಾಂತರ ಮಾಡಿಸಲು ಇವರು ಹುನ್ನಾರ ನಡೆಸಿದ್ದರು ಎಂದು ತಿಳಿದು ಬಂದಿದೆ.

ಹಾಸನದ ಮಹಾರಾಜ ಪಾರ್ಕ್​ನಲ್ಲಿ ಹಿಂದೂ ದೇವತೆಗಳನ್ನು ತೆಗಳಿದ ಮಹಿಳೆ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಣೆ ಮಾಡಲು ಮುಂದಾಗಿದ್ದಾಳೆ. ಕ್ರಿಶ್ಚಿಯನ್​ ಧರ್ಮಕ್ಕೆ ಮತಾಂತರಗೊಂಡಲ್ಲಿ ಯೇಸು ನಿಮಗೆ ಒಳ್ಳೆಯದು ಮಾಡುತ್ತಾನೆ ಎಂದು ಪುಸಲಾಯಿಸಿದ್ದಾಳೆ.

ಮಹಿಳೆಯ ಈ ಮತಾಂತರದ ಪ್ಲಾನ್​ ಬಗ್ಗೆ ವಿದ್ಯಾರ್ಥಿಯೊಬ್ಬ ಮಾಹಿತಿ ನೀಡಿದ್ದಾನೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಹಿಂದೂ ಜಾಗರಣ ವೇದಿಕೆ ಯುವಕರು ಮತಾಂತರಕ್ಕೆ ಮುಂದಾಗಿದ್ದ ಮಹಿಳೆ ಹಾಗೂ ಆತನ ಪುತ್ರನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಹಾಸನ ನಗರ ಪಿಎಸ್​ಐ ಅಭಿಷೇಕ್​ ಕೂಡ ಸ್ಥಳಕ್ಕೆ ಆಗಮಿಸಿದ್ದು ಆರೋಪಿ ರಾಧಾ ಎಂಬಾಕೆಯನ್ನು ವಶಕ್ಕೆ ಪಡೆದಿದ್ದಾರೆ. ರಾಧ ಹಾಸನ ನಗರದ ದೇವೇಗೌಡ ನಗರ ನಿವಾಸಿ ಎಂದು ತಿಳಿದುಬಂದಿದೆ.

4

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...