alex Certify ತಲೆಯಲ್ಲಿ ವಿಪರೀತ ತುರಿಕೆ ಇದ್ದರೆ ಈ ಮನೆಮದ್ದು ಪ್ರಯತ್ನಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆಯಲ್ಲಿ ವಿಪರೀತ ತುರಿಕೆ ಇದ್ದರೆ ಈ ಮನೆಮದ್ದು ಪ್ರಯತ್ನಿಸಿ

ಚಳಿಗಾಲ ಶುರುವಾಗುತ್ತಿದ್ದಂತೆ ಕೈಕಾಲುಗಳ ಚರ್ಮ ಒಣಗಿಂತಾಗುತ್ತದೆ. ತಲೆಯಲ್ಲಿ ತುರಿಕೆ ಸಮಸ್ಯೆ ಹೆಚ್ಚುತ್ತದೆ. ಇದಕ್ಕೆ ಕಾರಣವೆಂದರೆ ತಲೆಯಲ್ಲಿ ಧೂಳಿನ ಶೇಖರಣೆ, ಒತ್ತಡ, ಪರೋಪಜೀವಿಗಳು, ತಲೆಹೊಟ್ಟು ಅಥವಾ ಶಿಲೀಂಧ್ರಗಳ ಸೋಂಕು. ಸೆಬೊರ್ಹೆಕ್ ಡರ್ಮಟೈಟಿಸ್ ಕೂಡ ತಲೆಯಲ್ಲಿ ತುರಿಕೆಗೆ ಪ್ರಮುಖ ಕಾರಣವಾಗಿದೆ. ಈ ರೀತಿಯ ಸಮಸ್ಯೆಯಿಂದ ಬಳಲುತ್ತಿರುವವರು ಔಷಧಿ ಅಥವಾ ಮಾತ್ರೆಗಳ ಬದಲು 3 ಮನೆಮದ್ದುಗಳನ್ನು ಪ್ರಯತ್ನಿಸಿ. ಇದು ತಲೆ ತುರಿಕೆಯನ್ನು ಸಂಪೂರ್ಣವಾಗಿ ನಿವಾರಿಸುತ್ತದೆ.

ಈರುಳ್ಳಿ ರಸಈರುಳ್ಳಿ ರಸವು ತಲೆಯ ತುರಿಕೆಯಿಂದ ನಮ್ಮನ್ನು ರಕ್ಷಿಸುತ್ತದೆ. ಈರುಳ್ಳಿ ರಸದಲ್ಲಿ ಪ್ರೋಟೀನ್‌ ಹೇರಳವಾಗಿ ಕಂಡುಬರುತ್ತವೆ. ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಸಹ ಇವೆ. ಇದು ನೆತ್ತಿಯನ್ನು ಸ್ವಚ್ಛವಾಗಿ ಮತ್ತು ಬ್ಯಾಕ್ಟೀರಿಯಾ ಮುಕ್ತವಾಗಿಡಲು ಸಹಾಯ ಮಾಡುತ್ತದೆ. ಈರುಳ್ಳಿ ರಸ ಬಳಸುವುದರಿಂದ ತಲೆಹೊಟ್ಟು ಮತ್ತು ನೆತ್ತಿಯ ಸೋಂಕನ್ನು ನಿವಾರಿಸಬಹುದು. ಈರುಳ್ಳಿ ಜಜ್ಜಿ ರಸ ತೆಗೆಯಿರಿ. ನಂತರ ಇದನ್ನು ಕೂದಲಿನ ಬುಡಕ್ಕೆ ಮಸಾಜ್‌ ಮಾಡಿ. ಒಂದು ಗಂಟೆ ಬಳಿಕ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ.

ಹರಳೆಣ್ಣೆಕ್ಯಾಸ್ಟರ್ ಆಯಿಲ್‌ನಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಎಂಟಿಫಂಗಲ್ ಗುಣಲಕ್ಷಣಗಳು ಕಂಡುಬರುತ್ತವೆ. ಅದರ ಬಳಕೆಯಿಂದ ಕೂದಲಿನ ಬೇರುಗಳು ಬಲಗೊಳ್ಳುತ್ತವೆ. ಕೂದಲು ಉದುರುವಿಕೆಯನ್ನು ಕೂಡ ಇದು ತಡೆಯುತ್ತದೆ. ತಲೆಯ ತುರಿಕೆ ಸಮಸ್ಯೆ ಇದ್ದರೆ ಕ್ಯಾಸ್ಟರ್ ಆಯಿಲ್, ಸಾಸಿವೆ ಎಣ್ಣೆ ಮತ್ತು ತೆಂಗಿನ ಎಣ್ಣೆಯ ಮಿಶ್ರಣವನ್ನು ಬಳಸಿ. ಮೂರೂ ಎಣ್ಣೆಯ ಮಿಶ್ರಣವನ್ನು ಕೂದಲಿನ ಬುಡಕ್ಕೆ ಹಚ್ಚಿ ಮಸಾಜ್ ಮಾಡಿ. ರಾತ್ರಿಯಿಡೀ ಹಾಗೇ ಬಿಟ್ಟು, ಬೆಳಗ್ಗೆ ಶುದ್ಧ ನೀರಿನಿಂದ ತಲೆಸ್ನಾನ ಮಾಡಿ. ತುರಿಕೆ ಮತ್ತು ಸೋಂಕಿನಿಂದ ಪರಿಹಾರ ಸಿಗುತ್ತದೆ.

ಮೊಸರು – ನೆತ್ತಿಯ ಸೋಂಕು ಮತ್ತು ತುರಿಕೆಗೆ ಮೊಸರಿನಲ್ಲೂ ಮದ್ದಿದೆ. ಲ್ಯಾಕ್ಟಿಕ್ ಆಮ್ಲವು ಮೊಸರಿನಲ್ಲಿ ಕಂಡುಬರುತ್ತದೆ. ಇದರಲ್ಲಿ ಪ್ರೋಟೀನ್ ಸಹ ಹೇರಳವಾಗಿದೆ. ಇದು ಕೂದಲನ್ನು ಬಲಪಡಿಸುತ್ತದೆ. ಅರ್ಧ ಕಪ್ ಮೊಸರು ತೆಗೆದುಕೊಂಡು ಅದರಲ್ಲಿ 2 ಚಮಚ ಸಾಸಿವೆ ಎಣ್ಣೆಯನ್ನು ಮಿಶ್ರಣ ಮಾಡಿ. ನಂತರ ಟೀ ಟ್ರೀ ಹೇರ್ ಆಯಿಲ್‌ನ ಕೆಲವು ಹನಿಗಳನ್ನು ಸೇರಿಸಿ. ಈ ಹೇರ್‌ ಮಾಸ್ಕ್‌ ಅನ್ನು ಅನ್ವಯಿಸಿಕೊಂಡು 20 ನಿಮಿಷ ಹಾಗೇ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಕೂದಲನ್ನು ಚೆನ್ನಾಗಿ ತೊಳೆಯಿರಿ. ಕೂದಲಿನಿಂದ ಎಲ್ಲಾ ಕೊಳಕು ನಿವಾರಣೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...