alex Certify ಸಮಯ ಪ್ರಜ್ಞೆ ಮೆರೆದ ಚಾಲಕ; ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಮಗು ಪಾರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಮಯ ಪ್ರಜ್ಞೆ ಮೆರೆದ ಚಾಲಕ; ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಮಗು ಪಾರು

ಸರಕು ಸಾಗಣೆ ಟ್ರಕ್ ಚಾಲಕನೊಬ್ಬನ ಟೈಮ್ಲೀ ಬ್ರೇಕ್ ಅಪ್ಲೇನಿಂದಾಗಿ‌ ಮಗುವಿನ‌ ಜೀವ ಉಳಿದಿದ್ದು, ಆ ಚಾಲಕನ ಅಲರ್ಟ್‌ನೆಸ್‌ಗೆ ಸಾಮಾಜಿಕ ಜಾಲತಾಣದಲ್ಲಿ ಶ್ಲಾಘನೆ ವ್ಯಕ್ತವಾಗುತ್ತಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ, ಹೆದ್ದಾರಿಯಲ್ಲಿ ಸರಕು ಸಾಗಣೆ ಟ್ರಕ್‌ನ ಮುಂದೆ ಮಗು ಅನಿರೀಕ್ಷಿತವಾಗಿ ಕಾಣಿಸಿಕೊಳ್ಳುತ್ತದೆ, ಆದರೆ ಮುಂದಿನದು ಖಂಡಿತವಾಗಿಯೂ ಆಶ್ಚರ್ಯಗೊಳಿಸುತ್ತದೆ.

ಮಕ್ಕಳನ್ನು ಬಸ್‌ನಿಂದ ಇಳಿಸುವ ಸನ್ನಿವೇಶ ವಿಡಿಯೋದಲ್ಲಿ ಕಾಣಿಸುತ್ತದೆ. ಒಂದು ಮಗು ರಸ್ತೆ ದಾಟಲು ಪ್ರಯತ್ನಿಸುವಾಗ ಟ್ರಕ್ ಬಂದೇ ಬಿಡುತ್ತದೆ, ಮಕ್ಕಳು ದಾಟುವುದರ ಅರಿವಿಲ್ಲದ‌ ಟ್ರಕ್ ವೇಗವಾಗಿ ಬಂದೇ ಬಿಡುತ್ತದೆ, ಇನ್ನೇನು ಮಗುವಿನ ‌ಮೇಲೆ ಹರಿದೇ ಬಿಟ್ಟಿತು ಎನ್ನುವಾಗ ಅಚ್ಚರಿ ನಡೆದುಬಿಡುತ್ತದೆ. ಮಗು ಟ್ರಕ್ ಸಾಗುತ್ತಿದ್ದ ದಿಕ್ಕಿನತ್ತ ತನ್ನ ಓಟ ಬದಲಿಸುತ್ತದೆ, ಅಷ್ಟರಲ್ಲೇ ಅದರ ಚಾಲಕ ‌ಸಡನ್ ಬ್ರೇಕ್ ಹೊಡೆದು ಅವಘಡ ತಪ್ಪಿಸುತ್ತಾನೆ. ಕೂದಲೆಳೆ ಅಂತರದಲ್ಲಿ‌ ಮಗು ಪಾರಾಗುತ್ತದೆ.

ಟ್ವಿಟ್ಟರ್ ನಲ್ಲಿ ಶೇರ್ ಆಗಿರುವ ಈ ವಿಡಿಯೋ ಇದುವರೆಗೆ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಈ ವಿಡಿಯೊ ಕಾಣಿಸಿಕೊಂಡ ಕೂಡಲೇ ಅನೇಕ ಬಳಕೆದಾರರು ಡ್ರೈವರ್‌ನ ಅಲರ್ಟ್ ‌ಬಗ್ಗೆ ಹೊಗಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...