alex Certify ಬಿಜೆಪಿಗೆ ಮತ್ತೂಂದು ಶಾಕ್​: ಪಕ್ಷ ತೊರೆದು ಟಿಎಂಸಿ ಸೇರ್ಪಡೆಗೆ ಮುಂದಾದ ಶಾಸಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಜೆಪಿಗೆ ಮತ್ತೂಂದು ಶಾಕ್​: ಪಕ್ಷ ತೊರೆದು ಟಿಎಂಸಿ ಸೇರ್ಪಡೆಗೆ ಮುಂದಾದ ಶಾಸಕ

ಪ್ರಸ್ತುತ ಕೋಲ್ಕತ್ತಾದಲ್ಲಿರುವ ತ್ರಿಪುರ ಬಿಜೆಪಿ ಶಾಸಕ ಆಶಿಷ್​ ದಾಸ್​​ ನಾಳೆ ತೃಣಮೂಲ ಕಾಂಗ್ರೆಸ್​ ಸೇರ್ಪಡೆಯಾಗಲಿದ್ದಾರೆ. ಟಿಎಂಸಿ ನಾಯಕರ ಜೊತೆ ಚರ್ಚೆ ನಡೆಸುತ್ತಿರುವ ಆಶಿಷ್​ ದಾಸ್​ ನಾಳೆ ದೀದಿ ಪಕ್ಷಕ್ಕೆ ಸೇರಲಿದ್ದಾರೆ.

ತೃಣಮೂಲ ಕಾಂಗ್ರೆಸ್​ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್​ ಬ್ಯಾನರ್ಜಿ ಜೊತೆ ಕೊಲ್ಕತ್ತಾದ ಕಚೇರಿಯಲ್ಲಿ ಶಾಸಕ ಆಶಿಷ್​ ದಾಸ್​ ಮಾತುಕತೆ ನಡೆಸಿದ್ದಾರೆ. ಆಶಿಷ್​​ ದಾಸ್​ ಇಂದೇ ಬಿಜೆಪಿಗೆ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ.

ಅಕ್ಟೋಬರ್‌ 13ರಂದು ‘ಪುಷ್ಪ’ ಸಿನಿಮಾದ ಎರಡನೇ ಹಾಡು ರಿಲೀಸ್

ಈ ವಿಚಾರವಾಗಿ ಮಾತನಾಡಿರುವ ಬಿಜೆಪಿ ಶಾಸಕ ಆಶಿಷ್​ ದಾಸ್​, ನಾನು ಕಲಿಘಾಟ್​ ದೇಗುಲಕ್ಕೆ ಭೇಟಿ ನೀಡಿ ಬಿಜೆಪಿ ಪಕ್ಷಕ್ಕಾಗಿ ಸೇವೆ ಸಲ್ಲಿಸಿದ್ದಕ್ಕೆ ಪ್ರಾಯಶ್ವಿತವಾಗಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮುಂದಿನ ಹೆಜ್ಜೆ ಇಡಲಿದ್ದೇನೆ ಎಂದು ಹೇಳಿದ್ರು.

ತ್ರಿಪುರದಲ್ಲಿ 2023ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈಗಾಗಲೇ ತ್ರಿಪುರಾದಲ್ಲೂ ಅಧಿಕಾರ ಸ್ಥಾಪನೆಗೆ ಮುಂದಾಗಿರುವ ಟಿಎಂಸಿ 2023ರಲ್ಲಿ ವಿಪ್ಲಬ್​ ದೇವ್​ ನೇತೃತ್ವದ ಬಿಜೆಪಿ ಸರ್ಕಾರವನ್ನು ಉರುಳಿಸಲು ಪ್ಲಾನ್​ ಮಾಡ್ತಿದೆ.

ಗುಡ್ ನ್ಯೂಸ್: ಶಾಲಾ, ಕಾಲೇಜ್ ವಿದ್ಯಾರ್ಥಿನಿಯರಿಗೆ ಪ್ರತಿ ತಿಂಗಳು 10 ಸ್ಯಾನಿಟರಿ ನ್ಯಾಪ್ಕಿನ್ ಉಚಿತ

ಕೆಲ ಸಮಯದ ಹಿಂದಷ್ಟೇ ತ್ರಿಪುರಾ ಸರ್ಕಾರವು ಎರಡು ಬಾರಿ ರಾಜ್ಯದಲ್ಲಿ ತೃಣಮೂಲ ಕಾಂಗ್ರೆಸ್​​ ಪಾದಯಾತ್ರೆಗೆ ಅನುಮತಿಯನ್ನು ನಿರಾಕರಿಸಿತ್ತು. ಈ ವಿಚಾರವನ್ನು ಪ್ರಶ್ನಿಸಿ ಟಿಎಂಸಿ ಹೈಕೋರ್ಟ್ ಮೆಟ್ಟಿಲೇರಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...