alex Certify ಒಂದೇ ಮುಹೂರ್ತದಲ್ಲಿ ಇಬ್ಬರನ್ನ ಮದುವೆಯಾದ ಭೂಪ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ಮುಹೂರ್ತದಲ್ಲಿ ಇಬ್ಬರನ್ನ ಮದುವೆಯಾದ ಭೂಪ..!

ಬುಡಕಟ್ಟು ಜನಾಂಗಕ್ಕೆ ಸೇರಿದ ವ್ಯಕ್ತಿಯೊಬ್ಬ ಒಂದೇ ಮಂಟಪದಲ್ಲಿ ಇಬ್ಬರು ಸೋದರ ಸಂಬಂಧಿ ಯುವತಿಯರನ್ನ ಮದುವೆಯಾದ ಘಟನೆ ತೆಲಂಗಾಣದ ಆದಿಲಾಬಾದ್​ ಜಿಲ್ಲೆಯ ಉತ್ನೂರ್ ಮಂಡಲದಲ್ಲಿ ನಡೆದಿದೆ. ಈ ವಿಚಿತ್ರ ಮದುವೆಗೆ ವಧು ಹಾಗೂ ವರನ ಕುಟುಂಬಸ್ಥರಿಬ್ಬರೂ ಒಪ್ಪಿಗೆ ನೀಡಿದ್ದರು ಎನ್ನಲಾಗಿದೆ.ಈ ರೀತಿ ಮದುವೆಯಾಗೋದು ನಮ್ಮ ಜನಾಂಗದ ಸಂಪ್ರದಾಯವಾಗಿದೆ ಎಂದು ಇವರು ಹೇಳಿದ್ದಾರೆ.

ಘಾನಪುರ ಜಿಲ್ಲೆಯ ಅರ್ಜುನ್​ ಎಂಬಾತ ಕಳೆದ 2 ವರ್ಷಗಳಿಂದ ಈ ಇಬ್ಬರೂ ಯುವತಿಯರೊಂದಿಗೆ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ಇಬ್ಬರು ಯುವತಿಯರು ಅರ್ಜುನ್​ ಅತ್ತೆಯ ಮಕ್ಕಳಾಗಿದ್ದಾರೆ. ಇದರಲ್ಲಿ ಉಷಾರಾಣಿ ಎಂಬಾಕೆ ಇದೇ ಗ್ರಾಮದವಳಾಗಿದ್ದರೆ ಸೂರ್ಯಕಲಾ ನೆರೆಯ ಸಂಬುಗುಧಮ್​ ಗ್ರಾಮದವಳಾಗಿದ್ದಾಳೆ.

ಕಳೆದ ತಿಂಗಳು ಶಿಕ್ಷಕರ ತರಬೇತಿಯನ್ನ ಮುಗಿಸಿದ ಅರ್ಜುನ್​ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದ. ಈ ವೇಳೆ ಈತ ನಾನು ಉಷಾರಾಣಿ ಹಾಗೂ ಸೂರ್ಯಕಲಾ ಇಬ್ಬರನ್ನೂ ಪ್ರೀತಿಸುತ್ತಿರೋದಾಗಿ ಹೇಳಿಕೊಂಡಿದ್ದಾನೆ. ಇಬ್ಬರನ್ನೂ ಮದುವೆಯಾಗಲು ತಾನು ತಯಾರಿದ್ದೇನೆ ಎಂದು ಕುಟುಂಬಸ್ಥರ ಎದುರು ಹೇಳಿದ್ದಾನೆ.

ಬಳಿಕ ಎಲ್ಲರೂ ಈ ಮದುವೆಗೆ ಒಪ್ಪಿಕೊಂಡಿದ್ದಾರೆ. ಹೀಗಾಗಿ ಅರ್ಜುನ್​ ಉಷಾರಾಣಿ ಹಾಗೂ ಸೂರ್ಯಕಲಾರನ್ನ ಒಂದೇ ಮಂಟಪದಲ್ಲಿ ಒಂದೇ ಮುಹೂರ್ತದಲ್ಲಿ ವರಿಸಿದ್ದಾನೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಮಂಡಲ ಪರಿಷತ್​ ಅಧ್ಯಕ್ಷ ಪಂದ್ರಾ ಜೈವನ್​ಥಾರಾಓ ಇಬ್ಬರು ವಧುಗಳ ಒಪ್ಪಿಗೆಯನ್ನ ಪಡೆದೇ ಈ ಮದುವೆ ನಡೆಸಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಬುಡಕಟ್ಟು ಜನಾಂಗದವರಲ್ಲಿ ಇದೊಂದು ಸರ್ವೇಸಾಮಾನ್ಯ ಪದ್ಧತಿಯಾಗಿದೆ. ಇವರು ಒಂದೇ ಮುಹೂರ್ತದಲ್ಲಿ ಇಬ್ಬರು ಮಹಿಳೆಯರನ್ನ ಮದುವೆಯಾಗುವ ಆಚರಣೆ ಹೊಂದಿದ್ದಾರೆ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...