alex Certify ಎಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ ಉತ್ತೇಜನ ನೀಡಲು 2 ಯೋಜನೆಗಳಿಗೆ ತಿದ್ದುಪಡಿ ಮಾಡಿದ ಕೇಂದ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ ಉತ್ತೇಜನ ನೀಡಲು 2 ಯೋಜನೆಗಳಿಗೆ ತಿದ್ದುಪಡಿ ಮಾಡಿದ ಕೇಂದ್ರ

ಬ್ಯಾಟರಿ ಚಾಲಿತ, ಮೆಥನಾಲ್ ಹಾಗೂ ಎಥನಾಲ್‌ ಚಾಲಿತ ವಾಹನಗಳ ಕಾರ್ಯಾಚರಣೆಗೆ ಅನುಕೂಲ ಮಾಡಿಕೊಡಲು ಎರಡು ಯೋಜನೆಗಳು ಕೇಂದ್ರ ರಸ್ತೆ ಹಾಗೂ ಹೆದ್ದಾರಿ ಸಚಿವಾಲಯವು ತಿದ್ದುಪಡಿ ಮಾಡಿದೆ.

ಈ ಮೂಲಕ ಬ್ಯಾಟರಿ/ಮೆಥನಾಲ್/ಎಥನಾಲ್ ಚಾಲಿತ ಮೋಟರ್‌ ಕ್ಯಾಬ್‌ಗಳ ಬಳಕೆಗೆ ಅನುವು ಮಾಡಿಕೊಡಲು 1989ರ ರೆಂಟ್-ಎ-ಕ್ಯಾಬ್ ಕಾಯಿದೆಗೆ ತಿದ್ದುಪಡಿ ಮಾಡಲಾಗಿದೆ. ತನ್ಮೂಲಕ ಮೇಲ್ಕಂಡ ವಾಹನಗಳಿಗೆ ಕಾಯಿದೆಯ ಸೆಕ್ಷನ್ 66ರಿಂದ ವಿನಾಯಿತಿ ನೀಡಲಾಗಿದೆ.

ಬೆಚ್ಚಿಬಿದ್ದ ಬೆಣ್ಣೆನಗರಿ: ತಲೆ ಮೇಲೆ ಕಲ್ಲು ಎತ್ತಿಹಾಕಿ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆ

ಇದೇ ರೀತಿ, ಬ್ಯಾಟರಿ/ಮೆಥನಾಲ್/ಎಥನಾಲ್ ಚಾಲಿತ ಮೋಟರ್‌ ಬೈಕ್‌ ಗಳ ಬಳಕೆಗೆ ಅನುವು ಮಾಡಿಕೊಡಲು 1997ರ ರೆಂಟ್-ಎ-ಮೋಟರ್‌ ಸೈಕಲ್‌ ಕಾಯಿದೆಗೆ ತಿದ್ದುಪಡಿ ತಂದಿದ್ದು, ಕಾಯಿದೆಯ 74ನೇ ಸೆಕ್ಷನ್‌ನಿಂದ ವಿನಾಯಿತಿ ನೀಡಲಾಗಿದೆ.

ಕ್ಯಾಬ್ ಹಾಗೂ ಮೋಟರ್‌ ಸೈಕಲ್‌ಗಳನ್ನು ಬಾಡಿಗೆಗೆ ಪಡೆಯಲು ಇರುವ ಸ್ಕೀಂಗಳಿಗೆ ಮಾರ್ಗಸೂಚಿಗಳನ್ನು ಈ ಮುನ್ನ ಸಚಿವಾಲಯವು ಹೊರಡಿಸಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...