alex Certify ತಾಂತ್ರಿಕ ದೋಷದಿಂದಾಗಿ ಹೊಲದಲ್ಲಿ ವಿಮಾನವಿಳಿಸಿದ ಪೈಲೆಟ್…‌! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಾಂತ್ರಿಕ ದೋಷದಿಂದಾಗಿ ಹೊಲದಲ್ಲಿ ವಿಮಾನವಿಳಿಸಿದ ಪೈಲೆಟ್…‌!

ವಿಮಾನ ಹಾರಾಟ ತರಬೇತಿ ಪಡೆಯುತ್ತಿದ್ದ ಪೈಲೆಟ್ ಒಬ್ಬರು ತಾಂತ್ರಿಕ ದೋಷ ತಲೆದೋರಿದ ಕಾರಣಕ್ಕೆ ಹೊಲದಲ್ಲಿ ವಿಮಾನ ಇಳಿಸಿರುವ ಘಟನೆ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನಲ್ಲಿ ನಡೆದಿದೆ.

ಭಾನುವಾರದಂದು ಈ ಘಟನೆ ನಡೆದಿದ್ದು, ಕಲಬುರಗಿ ನಗರದ ಹೊರ ವಲಯದಲ್ಲಿರುವ ವಿಮಾನ ನಿಲ್ದಾಣದಲ್ಲಿ ತರಬೇತಿ ಕೇಂದ್ರವಿದ್ದು, ಇಲ್ಲಿ ಪೈಲೆಟ್ ತರಬೇತಿಯನ್ನು ನೀಡಲಾಗುತ್ತದೆ.

ಅದರಂತೆ ಭಾನುವಾರ ತರಬೇತಿ ಆರಂಭವಾದ ಬಳಿಕ ವಿಮಾನವೊಂದು ಟೇಕಾಫ್ ಆಗಿ 15 ಕಿ.ಮೀ. ಕ್ರಮಿಸಿದ ಬಳಿಕ ಎಂಜಿನ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.

ಕೂಡಲೇ ಎಚ್ಚೆತ್ತ ಪೈಲೆಟ್ ಹಾಗೂ ತರಬೇತಿ ನಿರತ ಅಭ್ಯರ್ಥಿ ಸಮೀಪದ ಹೊಲದಲ್ಲಿ ಸುರಕ್ಷಿತವಾಗಿ ವಿಮಾನ ಇಳಿಸಿದ್ದಾರೆ. ಅದೃಷ್ಟವಶಾತ್ ಪೈಲೆಟ್ ಹಾಗೂ ತರಬೇತಿ ನಿರತ ಅಭ್ಯರ್ಥಿಗೆ ಯಾವುದೇ ಅಪಾಯವಾಗಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...